ಕೆಜಿಎಫ್: ಇಲ್ಲಿನ ಎಸ್ಟಿ ಬ್ಲಾಕ್ ಚರ್ಚ್ನಲ್ಲಿ ಭಾನುವಾರದ ಪ್ರಾರ್ಥನೆಗೆ ಅವಕಾಶ ನೀಡಬೇಕೆಂದು ಒತ್ತಾಯಿಸಿ ಭಕ್ತರು ಪ್ರತಿಭಟನೆ ನಡೆಸಿದರು.

ಬಡಾವಣೆಯ ಅವರ್ ಸೇವಿಯರ್ ಲೂದರ್ನ್ ಚರ್ಚ್ನಲ್ಲಿ ಎರಡು ಬಣಗಳ ನಡುವೆ ಅಧಿಕಾರಕ್ಕಾಗಿ ಕಿತ್ತಾಟ ನಡೆಯುತ್ತಿದೆ. ಚರ್ಚ್ನಲ್ಲಿ ಮೂರು ವರ್ಷಕ್ಕೊಮ್ಮೆ ಆಡಳಿತ ಮಂಡಳಿಯ ಚುನಾವಣೆ ನಡೆಯುತ್ತದೆ. ಕಳೆದ ಬಾರಿ ಎಡ್ವಿನ್ ಮತ್ತು ರವಿ ಎಂಬುವರ ಗುಂಪುಗಳು ಅಧಿಕಾರಕ್ಕಾಗಿ ಸೆಣಸಾಡಿದ್ದವು. ಎಡ್ವಿನ್ ಗುಂಪು ಜಯಗಳಿಸಿ ಅಧಿಕಾರ ಹಿಡಿದಿತ್ತು. ಮೂರು ವರ್ಷ ಮುಗಿದರೂ ಚುನಾವಣೆ ನಡೆಸದ ಕಾರಣ ರವಿ ಎಂಬುವವರು ಚುನಾವಣೆ ನಡೆಸುವಂತೆ ಒತ್ತಾಯಿಸಿದ್ದಾರೆ. ಪ್ರಕರಣ ನ್ಯಾಯಾಲಯದ ಮೆಟ್ಟಲು ಹತ್ತಿದೆ.

ವಿವಾದದ ಕಾರಣದಿಂದಾಗಿ ಚರ್ಚ್ಗೆ ಬೀಗ ಹಾಕಲಾಯಿತು. ಪ್ರಾರ್ಥನೆ ಸಲ್ಲಿಸಲು ಬಂದಿದ್ದ ಭಕ್ತರಿಗೆ ಒಳ ಹೋಗಲು ಅವಕಾಶ ನೀಡಲಿಲ್ಲ. ಇದರಿಂದ ಕುಪಿತಗೊಂಡ ಭಕ್ತರು ಚರ್ಚ್ ಮುಂಭಾಗದಲ್ಲಿ ಧರಣಿ ಕುಳಿತರು. ಚುನಾವಣೆ ನಡೆಸದ ಹಿನ್ನೆಲೆ ಚರ್ಚ್ಗೆ ಬೀಗ ಹಾಕಿದೆ ಎಂದು ಭಕ್ತರು ದೂರಿದರು.

ಸ್ಥಳಕ್ಕೆ ಆಗಮಿಸಿದ ರಾಬರ್ಟಸನ್ಪೇಟೆ ಪೊಲೀಸರು ಎರಡೂ ಗುಂಪಿನ ಮುಖಂಡರ ಜೊತೆ ಮಾತನಾಡಿ, ಚರ್ಚ್ಗೆ ಹಾಕಿದ್ದ ಬೀಗ ತೆಗೆಸಿದರು. ನಂತರ ಭಕ್ತರು ಪ್ರತಿಭಟನೆಯನ್ನು ವಾಪಸ್ ಪಡೆದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260601-18-1185963551

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.