ಕೆಜಿಎಫ್: ನಿರಂತರವಾಗಿ ರೌಡಿ ಚಟುವಟಿಕೆಗಳನ್ನು ನಡೆಸುಕೊಂಡು ಬರುತ್ತಿದ್ದ ನಗರಸಭೆ ಮಾಜಿ ಸದಸ್ಯ ಮತ್ತು ಪೊಲೀಸರ ರೌಡಿ ಪಟ್ಟಿಯಲ್ಲಿರುವ ಸ್ಲ್ಯಾನ್ಲಿಯನ್ನು ಗಡಿಪಾರು ಮಾಡಿ ಕಲಬುರಗಿ ಜಿಲ್ಲೆಯ ಆಳಂದ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.

ಸ್ಲ್ಯಾನ್ಲಿ ಮೇಲೆ 3 ಕೊಲೆ ಯತ್ನ, ದೊಂಬಿ, ಮನೆ ಕಳ್ಳತನ, ಡಿಎಂ ಆಕ್ಟ್, ವಂಚನೆ, ಭದ್ರತಾ ಪ್ರಕರಣ ಉಲ್ಲಂಘನೆ ಸೇರಿದಂತೆ ಒಟ್ಟು 9 ಪ್ರಕರಣಗಳ ಇದ್ದವು. ಕೊಲೆ ಯತ್ನ ಪ್ರಕರಣದಲ್ಲಿ 2018ರಲ್ಲಿ ನ್ಯಾಯಾಲಯವು ಎರಡು ವರ್ಷ ಜೈಲು ಮತ್ತು ದಂಡ ವಿಧಿಸಿದೆ. ಆದರೂ ಆರೋಪಿ ತನ್ನ ನಡವಳಿಕೆಗಳನ್ನ ಬದಲಾಯಿಸಿಕೊಳ್ಳಲಿಲ್ಲ. ತನ್ನ ಮನೆಯಲ್ಲಿ ಹತ್ತು ಜನ ರೌಡಿಗಳು ಇದ್ದಾರೆ. ದೊಡ್ಡಿ ಪ್ರದೇಶಕ್ಕೆ ನಾನೇ ಡಾನ್. ನಾನು ಹೇಳಿದ ಹಾಗೆ ಕೇಳಬೇಕು. ಕೇಳದಿದ್ದರೆ ದೊಡ್ಡಿ ಮಾರ್ಕೆಟ್ನಿಂದ ಹೊರಗೆ ಹಾಕುತ್ತೇನೆ ಎಂದು ದಬಾಯಿಸುತ್ತಿದ್ದ. ಅಲ್ಲದೆ ಅಂಗಡಿಗಳಿಂದ ಹಫ್ತಾ ವಸೂಲಿ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಮಾರುಕಟ್ಟೆಗೆ ಬರುವ ಹದಿಹರೆಯದ ಹೆಣ್ಣು ಮಕ್ಕಳಿಗೆ ಕೀಟಲೆ ಮಾಡುವುದು, ಅಸಹ್ಯಕರ ರೀತಿಯಲ್ಲಿ ಮಾತನಾಡುವುದು ಕೂಡ ಈತನ ಹವ್ಯಾಸವಾಗಿತ್ತು. ಈ ಹಿನ್ನೆಲೆ ಆಂಡರಸನ್ಪೇಟೆ ಪೊಲೀಸರು ರೌಡಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಪ್ರಸ್ತಾವನೆಯನ್ನು ಸಲ್ಲಿಸಿದ್ದರು. ಅದರ ಹಿನ್ನೆಲೆ ಆರೋಪಿಯನ್ನು ಕಲಬುರಗಿ ಜಿಲ್ಲೆಯ ಆಳಂದ ನಗರ ಪೊಲೀಸ್ ಠಾಣೆ ವ್ಯಾಪ್ತಿಗೆ ಒಂದು ವರ್ಷ ಗಡಿಪಾರು ಮಾಡಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಾಂಶು ರಜಪೂತ್ ಆದೇಶ ಮಾಡಿದ್ದರು.

ಸ್ಲ್ಯಾನ್ಲಿಯನ್ನು ಶನಿವಾರ ಬಂಧಿಸಿದ ಪೊಲೀಸರು ಆಳಂದ ಠಾಣೆಗೆ ಹಸ್ತಾಂತರ ಮಾಡಿದ್ದಾರೆ. ಸರ್ಕಲ್ ಇನ್ಸ್ಟೆಕ್ಟರ್ ಅನಿಲ್ ಕುಮಾರ್, ಸಬ್ ಇನ್ಸ್ಪೆಕ್ಟರ್ಗಳಾದ ಮಂಜುನಾಥ್, ಚಂದ್ರಶೇಖರ್, ಸಹಾಯಕ ಸಬ್ ಇನ್ಸ್ಪೆಕ್ಟರ್ ಚಲಪತಿ, ಅಣ್ಣಪ್ಪ, ಸಿಬ್ಬಂದಿಗಳಾದ ಅಶೋಕ್ ಮತ್ತು ಶಶಿಕುಮಾರ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260504-18-1089231653

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.