ಕೆಜಿಎಫ್: ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಸೇರುವ ಬಸ್ಗಳು ನಿರ್ವಹಣೆ ಕೊರತೆಯಿಂದಾಗಿ ಎಲ್ಲೆಂದರಲ್ಲಿ ನಿಂತು ಹೋಗುವ ಪ್ರಕರಣಗಳು ಹೆಚ್ಚಾಗುತ್ತಿವೆ.

ನಗರದಲ್ಲಿರುವ ಕೆಎಸ್ಆರ್ಟಿಸಿ ಬಸ್ ಡಿಪೊನಲ್ಲಿ ಬಸ್ಗಳ ಸಂಖ್ಯೆ ಕಡಿಮೆಯಾಗಿರುವುದು. ಜೊತೆಗೆ ಹೊಸ ಬಸ್ಗಳು ಸೇರ್ಪಡೆಯಾಗದಿರುವುದರಿಂದ ಹಳೇ ಬಸ್ಗಳ ನಿರ್ವಹಣೆ ಸಿಬ್ಬಂದಿಗೆ ಸವಾಲಾಗಿದೆ.

ಸುಮಾರು 140 ಆಸುಪಾಸಿನಲ್ಲಿದ್ದ ಬಸ್ಗಳ ಸಂಖ್ಯೆ ಈಗ 110ಕ್ಕೆ ಬಂದಿದೆ. ಸೇವೆ ಸಲ್ಲಿಸಿ ಹದಿನೈದು ವರ್ಷದ ನಂತರ ಬಸ್ಗಳು ಸ್ಕ್ರಾಪ್ (ಗುಜರಿ) ಎಂಬ ಹಣೆಪಟ್ಟ ಕಟ್ಟಿಕೊಂಡು ಸೇವೆಯಿಂದ ನಿವೃತ್ತಿಯಾಗುತ್ತವೆ. ‘ಈ ವರ್ಷ 19 ಬಸ್ಗಳು ಗುಜರಿಗೆ ಹೋಗಿವೆ. ಆದರೆ, ಗುಜರಿಗೆ ಹೋದ ಬಸ್ಗಳಿಗೆ ಬದಲಾಗಿ ಹೊಸ ಬಸ್ಗಳು ಬಾರದೆ ಇರುವುದರಿಂದ ಹಳೆ ಬಸ್ಗಳನ್ನೇ ಚಾಲನೆ ಮಾಡುವ ಅನಿವಾರ್ಯತೆ ಅಧಿಕಾರಿಗಳಿಗೆ ಇದೆ. ಇದರಿಂದಾಗಿ ಬಸ್ಗಳು ಅಲ್ಲಲ್ಲಿ ಬ್ರೇಕ್ ಡೌನ್ ಆಗುತ್ತಿದೆ’ ಎಂದು ಸಿಬ್ಬಂದಿ ಹೇಳುತ್ತಾರೆ.

ಮೂರು ವರ್ಷಗಳಿಂದ ಹೊಸ ಬಸ್ಗಳು ಡಿಪೊಗೆ ಬಾರದೆ ಇರುವುದು ಸಮಸ್ಯೆಯ ಗಂಭೀರತೆಯನ್ನು ತೋರಿಸುತ್ತಿದೆ. ಲಾಂಗ್ ರೂಟ್ಗೆ ಹೋಗುವ ಬಸ್ಗಳನ್ನು ಸಾಮಾನ್ಯವಾಗಿ ಹೊಸ ಬಸ್ಗಳನ್ನು ಹಾಕಲಾಗುತ್ತಿದೆ. ಆದರೆ, ಹೊಸ ಬಸ್ಗಳ ಕೊರತೆಯಿಂದಾಗಿ ಹಳೆ ಬಸ್ ಗಳನ್ನೇ 500ಕ್ಕೂ ಹೆಚ್ಚು ಕಿ.ಮೀ ದೂರದ ಊರುಗಳಿಗೆ ಹಾಕಲಾಗುತ್ತಿದೆ. ಇಂತಹ ಹಳೆ ಬಸ್ಗಳಲ್ಲಿ ಪ್ರಯಾಣಿಕರು ಹಿಡಿದುಕೊಳ್ಳುವ ಸೇಫ್ಟಿ ರಾಡ್ ಕೂಡ ಇಲ್ಲ ಎಂಬ ಆರೋಪಗಳು ಕೇಳಿ ಬರುತ್ತಿವೆ.

ಬಸ್ಗಳ ಕೊರತೆಯಿಂದಾಗಿ ಬಹಳ ವರ್ಷಗಳಿಂದ ಇದ್ದ ಬಿಜಾಪುರ, ಮಂಗಳೂರು, ಮೈಸೂರು, ಚೆನ್ನೈ (ನಾಲ್ಕು ಮಾರ್ಗ ಇದ್ದದ್ದು ಈಗ ಎರಡು ಮಾರ್ಗಕ್ಕೆ ಇಳಿದಿದೆ), ಪ್ರೊದಟೂರು ಮೊದಲಾದ ಮಾರ್ಗಗಳನ್ನು ಈಗ ನಿಲ್ಲಿಸಲಾಗಿದೆ. ಸಂಜೆ 6 ಗಂಟೆ ನಂತರ ಜನದಟ್ಟಣೆ ಇರುವ ಬಂಗಾರಪೇಟೆ, ಕೋಲಾರ, ಬೆಂಗಳೂರು ಮಾರ್ಗದಲ್ಲಿ ಕೂಡ ಬಸ್ಗಳ ಕೊರತೆ ಎದ್ದು ಕಾಣುತ್ತಿದೆ. ಮುಂಜಾನೆ ಕೂಡ ಗಾರ್ಮೆಂಟ್ ಹೋಗುವ ಮಹಿಳಾ ಪ್ರಯಾಣಿಕರಿಗೆ ಬಸ್ ಹತ್ತಲು ಕೂಡ ಸಾಧ್ಯವಾಗದಷ್ಟು ದಟ್ಟಣೆ ಇರುತ್ತದೆ. ಹೆಚ್ಚುವರಿ ಬಸ್ಗಳನ್ನು ಹಾಕಲು ಬಸ್ಗಳ ಕೊರತೆ ಇದೆ. ಒಂದು ಕಾಲದಲ್ಲಿ ಎಂಟರಿಂದ ಹತ್ತು ಬಸ್ಗಳು ಡಿಪೊವಿನಲ್ಲಿ ಸ್ಪೇರ್ ಇರುತ್ತಿದ್ದವು. ಈಗ ಸ್ಪೇರ್ ಗಾಡಿಗಳಿಗೆ ಕೂಡ ಬರ ಬಂದಿದೆ ಎಂದು ಸಿಬ್ಬಂದಿ ಹೇಳುತ್ತಾರೆ.

ಕೆಲವು ಗ್ರಾಮೀಣ ಭಾಗಗಳಿಗೆ ಹೋಗುವ ಬಸ್ಗಳ ಕೊರತೆ ಇದ್ದರೂ, ಗ್ರಾಮೀಣ ಭಾಗದ ಪ್ರಯಾಣಿಕರಿಗೆ ಹೆಚ್ಚಿನ ತೊಂದರೆಯಾಗಿಲ್ಲ. ಆದರೆ, ಲಾಭ ತರುವ ಲಾಂಗ್ ರೂಟ್ ಬಸ್ಗಳ ಸಂಖ್ಯೆ ಕಡಿಮೆಯಾಗಿದೆ. ಲಾಂಗ್ ರೂಟ್ಗೆ ಹೋಗುವ ಬಸ್ಗಳು ಸರಿಯಾದ ಸಮಯಕ್ಕೆ ಹೋಗದೆ ಇರುವುದರಿಂದ ಕಲೆಕ್ಷನ್ ಕಡಿಮೆಯಾಗಿದೆ. ಕೋವಿಡ್ ಸಮಯದಲ್ಲಿ ಕೂಡ ಲಾಭದಲ್ಲಿದ್ದ ಡಿಪೊ ಈಗ ನಷ್ಟದಲ್ಲಿದೆ ಎಂಬ ಮಾತುಗಳು ಡಿಪೊವಿನಲ್ಲಿ ಕೇಳಿ ಬರುತ್ತಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.