ಕೆಜಿಎಫ್: ಕೆಲ ಖಾಸಗಿ ವ್ಯಕ್ತಿಗಳು ಬಂಗಾರದ ಗಣಿಗೆ ಸೇರಿದ ಭೂಮಿಯನ್ನು ಅಕ್ರಮವಾಗಿ ಒತ್ತುವರಿ ಮಾಡಿದ್ದರೆಂಬ ಸಾರ್ವಜನಿಕರ ದೂರಿನ ಹಿನ್ನೆಲೆ ತಹಶೀಲ್ದಾರ್ ಎಚ್.ಜೆ.ಭರತ್ ಶನಿವಾರ ಆ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಬೆಮಲ್ ನಗರದ ಬೆಮಲ್ ಕಾರ್ಖಾನೆಯ ಎಚ್ ಅಂಡ್ ಪಿ ವಿಭಾಗದ ಹಿಂಭಾಗದ ಪ್ರದೇಶವನ್ನು ಅಕ್ರಮವಾಗಿ ಯಂತ್ರಗಳ ಮೂಲಕ ಸಮತಟ್ಟು ಮಾಡಲಾಗುತ್ತಿತ್ತು. ಅಲ್ಲಿದ್ದ ಮರಗಳನ್ನು ಕಟಾವು ಮಾಡುವ ಕಾರ್ಯ ನಡೆದಿತ್ತು.

ಈ ಹಿನ್ನೆಲೆ ಸ್ಥಳ ಪರಿಶೀಲನೆ ನಡೆಸಿದ ತಹಶೀಲ್ದಾರ್ ಭರತ್, ಕಂದಾಯ ಇನ್ಸ್ಪೆಕ್ಟರ್ ಚಂದ್ರಮೋಹನ್ ಮತ್ತು ಗ್ರಾಮ ಆಡಳಿತಾಧಿಕಾರಿ ವಿನೀತ್ ದಾಖಲೆಗಳ ಪರಿಶೀಲನೆ ನಡೆಸಿದರು.

ಬಿಜಿಎಂಎಲ್ ಮತ್ತು ಕಂದಾಯ ಇಲಾಖೆಗಳ ಜಮೀನುಗಳ ನಡುವೆ ಕೊಂಚ ಗೊಂದಲಗಳಿವೆ. ಈನಿಟ್ಟಿನಲ್ಲಿ ಸರ್ವೆ ಕಾರ್ಯ ಒಂದು ವಾರದಿಂದ ನಡೆಯುತ್ತಿದೆ. ಹೈಕೋರ್ಟ್ ಕೂಡ ಈ ಸಂಬಂಧ ಸೂಚನೆ ನೀಡಿದೆ. ಸರ್ಕಾರಿ ಜಮೀನನ್ನು ರಕ್ಷಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಹಶೀಲ್ದಾರ್ ಭರತ್ ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260517-18-146062437

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.