ಕೆಜಿಎಫ್: ರಾಬರ್ಟಸನ್ಪೇಟೆ ನಗರಸಭೆಯಲ್ಲಿ ಕಳೆದ ಐದು ವರ್ಷಗಳಿಂದ ಸರ್ಕಾರಿ ಅನುದಾನದ ದುರ್ಬಳಕೆ ಮತ್ತು ಭ್ರಷ್ಟಾಚಾರ ನಡೆದಿದ್ದು, ಕೋಟ್ಯಾಂತರ ರೂಪಾಯಿ ಹಣ ದುರುಪಯೋಗವಾಗಿದೆ. ಈ ಸಂಬಂಧ ಲೋಕಾಯುಕ್ತಕ್ಕೆ ದಾಖಲೆ ಸಮೇತ ದೂರು ನೀಡಲಾಗುವುದು ಎಂದು ಸೇವ್ ಕೆಜಿಎಫ್ ಸಮಿತಿ ಪದಾಧಿಕಾರಿಗಳು ತಿಳಿಸಿದ್ದಾರೆ.

ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಗರಸಭೆ ಮಾಜಿ ಅಧ್ಯಕ್ಷ ದಯಾನಂದ್, ನಗರಸಭೆಯಲ್ಲಿ ನಡೆದಿರುವ ಅವ್ಯವಹಾರಗಳ ಮಾಹಿತಿಗಳನ್ನು ದಾಖಲೆ ಸಮೇತ ಬಿಚ್ಚಿಟ್ಟರು. ನಗರದ ಹುಲ್ಲು ಮಾರುಕಟ್ಟೆಯನ್ನು ಅಕ್ರಮವಾಗಿ ನೆಲಸಮ ಮಾಡಲಾಗಿದೆ. ಅಲ್ಲಿ ವ್ಯಾಪಾರ ಮಾಡುತ್ತಿದ್ದ 116 ವ್ಯಾಪಾರಸ್ಥರನ್ನು ಅನ್ಯಾಯವಾಗಿ ಹೊರದಬ್ಬಲಾಗಿದೆ. ಕೆಡವಿದ ಸಂದರ್ಭದಲ್ಲಿ ಸಿಕ್ಕಿದ್ದ ವಸ್ತುಗಳನ್ನು ವೈಯಕ್ತಿಕ ಬಳಕೆಗಾಗಿ ಕೆಲ ಮುಖಂಡರು ಬಳಸಿಕೊಂಡಿದ್ದಾರೆ. ಹುಲ್ಲು ಮಾರುಕಟ್ಟೆಯನ್ನು ನೆಲಸಮ ಮಾಡುವಾಗ ಯಾವುದೇ ಕಾನೂನು ಬದ್ಧ ಪ್ರಕ್ರಿಯೆಯನ್ನು ನಡೆಸಿಲ್ಲ. ಪಾರದರ್ಶಕತೆ ಇಲ್ಲ. ನಗರಸಭೆಯ ಅಧಿವೇಶನದಲ್ಲಿ ತೀರ್ಮಾನವಾಗಿಲ್ಲ. ಸ್ಥಾಯಿ ಸಮಿತಿ ಸಭೆಯಲ್ಲಿ ತೀರ್ಮಾನವಾಗಿದೆ ಎಂಬ ಹೇಳಿಕೆಯನ್ನು ನಗರಸಭೆಯಿಂದ ಕೊಡಲಾಗುತ್ತಿದೆ. ಸ್ಥಾಯಿ ಸಮಿತಿಯ ಕಾರ್ಯವ್ಯಾಪ್ತಿಯ ಅರಿವೇ ಇಲ್ಲ ಎಂದು ಅವರು ದೂರಿದರು.

ಗೌತಮನಗರದಲ್ಲಿ ಸಾರ್ವಜನಿಕ ಹರಾಜಿನಲ್ಲಿ ನಿಗದಿಗಿಂತ ₹13 ಕಡಿಮೆ ಬೆಲೆ ನಮೂದಿಸಲಾಗಿದೆ ಎಂದು ಎಲ್ಲಾ ನಗರಸಭೆ ಸದಸ್ಯರ ಮೇಲೆ ಪ್ರಕರಣ ದಾಖಲಾಯಿತು. ಹದಿಮೂರು ವರ್ಷಗಳ ಕಾಲ ಎಲ್ಲಾ ನಗರಸಭೆ ಸದಸ್ಯರು ನ್ಯಾಯಾಲಯಕ್ಕೆ ಅಲೆದಾಡಬೇಕಾಯಿತು. ಈಗ ನಡೆದಿರುವ ಅವ್ಯವಹಾರದಲ್ಲಿ ಕೂಡ 35 ಸದಸ್ಯರು ಭಾಗಿಯಾಗಿದ್ದಾರೆ ಎಂದು ಆರೋಪಿಸಿ, ಅವರೆಲ್ಲರೂ ಕ್ರಮ ಎದುರಿಸಬೇಕಾಗುತ್ತದೆ. ಲೋಕಾಯುಕ್ತಕ್ಕೆ ಎಲ್ಲಾ ದಾಖಲೆಗಳನ್ನು ಸಲ್ಲಿಸಲು ಸಿದ್ಧತೆ ನಡೆಸಲಾಗುತ್ತಿದೆ ಎಂದರು.

ಹುಲ್ಲು ಮಾರುಕಟ್ಟೆ ಮುಂಭಾಗದಲ್ಲಿರುವ ಎತ್ತಿನ ಬಂಡಿ ಸ್ಟಾಂಡ್ ಬಳಿ 2016ರಲ್ಲಿ ಕಟ್ಟಡ ಕಟ್ಟಲಾಯಿತು. ಈಗ ಈ ಕಟ್ಟಡ ಶಿಥಿಲವಾಗಿದೆ ಎಂದು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಪ್ರಮಾಣ ಪತ್ರ ನೀಡಿದ್ದಾರೆ. ಕೇವಲ ಹತ್ತು ವರ್ಷಕ್ಕೆ ನಗರಸಭೆ ಕಟ್ಟಿದ ಕಟ್ಟಡ ಶಿಥಿಲವಾಗಿದೆ ಎಂದರೆ, ಕಾಮಗಾರಿಯ ಗುಣಮಟ್ಟ ತಿಳಿಯುತ್ತದೆ. ಸಾರ್ವಜನಿಕ ಹಣದ ಸ್ಪಷ್ಟ ದುರುಪಯೋಗ ಎಂದು ದಯಾನಂದ್ ದೂರಿದರು.

ಸಿಪಿಐ ಜಿಲ್ಲಾ ಕಾರ್ಯದರ್ಶಿ ಜ್ಯೋತಿಬಸು ಮಾತನಾಡಿ, ಕೆಜಿಎಫ್ ಸೇವ್ ಸಮಿತಿ ನಗರದ ಅಭಿವೃದ್ಧಿಗೆ ಪಕ್ಷಾತೀತವಾಗಿ ಹೋರಾಟ ನಡೆಸುತ್ತಿದೆ. ಸಮಿತಿಯಲ್ಲಿ ಎಲ್ಲಾ ರಾಜಕೀಯ ಪಕ್ಷ ಮತ್ತು ಸಂಘಟನೆಗಳ ಮುಖಂಡರು ಇದ್ದಾರೆ. ಕೆಲವು ಶಕ್ತಿಗಳು ಸೇವ್ ಸಮಿತಿ ಕನ್ನಡ ವಿರೋಧಿ ಚಟುವಟಿಕೆ ನಡೆಸುತ್ತಿದೆ ಎಂದು ಅಪಪ್ರಚಾರ ಮಾಡುತ್ತಿದೆ. ಇಲ್ಲಿನ ಜನತೆ ಬಹುತೇಕ ಮಂದಿ ತಮಿಳು ಮಾತೃಭಾಷೆಯವರು ಇದ್ದರೂ, ಎಲ್ಲರೂ ಹುಟ್ಟಿನಿಂದ ಕನ್ನಡಿಗರೇ ಅಗಿದ್ದಾರೆ. ವಿನಾಕಾರಣ ಅಪಪ್ರಚಾರ ಮಾಡಬಾರದು ಎಂದು ಮನವಿ ಮಾಡಿದರು.

ಹುಲ್ಲು ಮಾರುಕಟ್ಟೆ ನೆಲಸಮ ವಿಚಾರದಲ್ಲಿ ಸರ್ಕಾರಕ್ಕೆ ಬರಬೇಕಾದ ಆದಾಯ ಖೋತಾ ಆಗಿದೆ. ಇದರಲ್ಲಿ ನಗರಸಭೆಯ ಮಾಜಿ ಅಧ್ಯಕ್ಷರ ಪಾತ್ರವೂ ಇದೆ. ಅವರು ಈಗ ಕಾಂಗ್ರೆಸ್ ಪಕ್ಷ ಬಿಟ್ಟ ಮೇಲೆ ತಾವು ಶುದ್ಧ ಹಸ್ತರು ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ. ಅವರ ಅವಧಿಯಲ್ಲಿ ಆಗಿರುವ ಅಕ್ರಮಗಳ ಎಲ್ಲಾ ಮಾಹಿತಿಗಳು ಸಮಿತಿ ಬಳಿ ಇದೆ ಎಂದು ತಿಳಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260417-18-1857949949

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.