ಕೆಜಿಎಫ್: ತಾಲ್ಲೂಕಿನಲ್ಲಿ ಶುಕ್ರವಾರ ರಾತ್ರಿ ಬಿದ್ದ ಬಿರುಗಾಳಿ ಸಹಿತ ಮಳೆಯಿಂದಾಗಿ ಬೆಳೆಗಳಿಗೆ ವ್ಯಾಪಕ ಹಾನಿ ಉಂಟಾಗಿದೆ. ಕಂದಾಯ ಮತ್ತು ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ನಷ್ಟದ ಅಂದಾಜು ಮಾಡುತ್ತಿದ್ದಾರೆ.

ಕೈಗೆ ಬರಬೇಕಿದ್ದ ಬೆಳೆಗಳು ಬಿರುಗಾಳಿ ಮಳೆಗೆ ನೆಲಕಚ್ಚಿವೆ. ಕಟಾವು ಸ್ಥಿತಿಯಲ್ಲಿದ್ದ ಮಾವು ಗಾಳಿಗೆ ನೆಲಕ್ಕೆ ಉರುಳಿವೆ. ವೀಳೆದೆಲೆ, ಟೊಮೊಟೊ, ತರಕಾರಿ ಬೆಳೆಗಳು ಉಪಯೋಗಕ್ಕೆ ಬಾರದಂತಾಗಿದೆ. ಶೀಟ್ ಮತ್ತು ಹೆಂಚಿನ ಮನೆಗಳಿಗೂ ಸಾಕಷ್ಟು ಜಖಂ ಆಗಿದೆ. ಎಲ್ಲಿಯೂ ಪ್ರಾಣಾಪಾಯ ಉಂಟಾಗಿಲ್ಲ. ಮನೆಗಳನ್ನು ಕಳೆದುಕೊಂಡವರಿಗೆ ತಾತ್ಕಾಲಿಕವಾಗಿ ವ್ಯವಸ್ಥೆ ಮಾಡಲು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳ ಜೊತೆ ಸಮನ್ವಯ ಸಾಧಿಸಲಾಗುತ್ತಿದೆ ಎಂದು ತಹಶೀಲ್ದಾರ್ ಎಚ್.ಜೆ.ಭರತ್ ಮಾಹಿತಿ ನೀಡಿದ್ದಾರೆ.

ತಾಲ್ಲೂಕಿನ ತಾತೇನಹಳ್ಳಿ, ಸೀತಂಪಲ್ಲಿ, ಮುಷ್ಟೂರು, ಕದರಿಗಾನಕುಪ್ಪ, ವೆಂಕಟಾಪುರ, ಮಹದೇವಪುರ, ಬೀರನಕುಪ್ಪ, ಕ್ಯಾಸಂಬಳ್ಳಿ ಗ್ರಾಮಗಳ ರೈತರು ಭಾರಿ ನಷ್ಟ ಅನುಭವಿಸಿದ್ದಾರೆ. ಪೆದ್ದಪಲ್ಲಿ ಮಜರಾ ಕೊತ್ತೂರು ಗ್ರಾಮದಲ್ಲಿ ಮಮೆಯ ಚಾವಣಿ ಹಾರಿಹೋಗಿದೆ. ಅನೇಕ ಗ್ರಾಮಗಳಲ್ಲಿ ಇದೇ ಪರಿಸ್ಥಿತಿ ಉಂಟಾಗಿದ್ದು, ಗುಡಿಸಲು ಮತ್ತು ಟಾರ್ಪಲ್ ಇದ್ದ ಮನೆಗಳು ಜಖಂ ಆಗಿದೆ. ರಸ್ತೆಯುದ್ದಕ್ಕೂ ಸಾಲು ಮರಗಳು ಬಿರುಗಾಳಿಗೆ ಉರುಳಿ ರಸ್ತೆಯಲ್ಲಿ ಬಿದ್ದಿವೆ. ಸಮೀಪದ ಗ್ರಾಮಸ್ಥರೇ ಮರಗಳನ್ನು ಕಡಿದು ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಕೆಜಿಎಫ್ ನಗರದಲ್ಲಿ ಕೂಡ ಅನೇಕ ಕಡೆಗಳಲ್ಲಿ ಮರಗಳು ಉರುಳಿವೆ. ಅಕ್ಕಪಕ್ಕದ ಕಟ್ಟಡಗಳಿಗೆ ಹಾನಿ ಉಂಟು ಮಾಡಿದೆ.

ತಾಲ್ಲೂಕಿನಲ್ಲಿ ನಡೆದಿರುವ ಅನಾಹುತಗಳ ಬಗ್ಗೆ ತೋಟಗಾರಿಕೆ ಮತ್ತು ಕೃಷಿ ಇಲಾಖೆ ಅಧಿಕಾರಿಗಳು ಮಾಹಿತಿ ಸಂಗ್ರಹಿಸುತ್ತಿದ್ದಾರೆ. ನಷ್ಟ ಪರಿಹಾರಕ್ಕೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಲಾಗುವುದು ಎಂದು ತಹಶೀಲ್ದಾರ್ ಹೇಳಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260531-18-901743300

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.