ಕೆಜಿಎಫ್: ಬೀದಿ ನಾಯಿ ಕಚ್ಚಿ ಗಾಯ ವಾಸಿಯಾಗದೆ ವೃದ್ಧರೊಬ್ಬರು ಸಾವನ್ನಪ್ಪಿರುವ ಘಟನೆ ಚಾಂಪಿಯನ್ ರೀಫ್ಸ್ನ ಡಿ ಬ್ಲಾಕ್ನಲ್ಲಿ ಬುಧವಾರ ನಡೆದಿದೆ.

ಚಾಂಪಿಯನ್ ರೀಫ್ಸ್ನ ಡಿ ಬ್ಲಾಕ್ ತ್ಯಾಗರಾಜನ್ (84) ಮೃತರು. ತ್ಯಾಗರಾಜನ್ 2025 ಸೆ. 21 ರಂದು ಚರ್ಚ್ಗೆ ಹೋಗುತ್ತಿದ್ದ ವೇಳೆ ಬೀದಿ ನಾಯಿ ಕಚ್ಚಿದೆ. ನಂತರ ಅಲ್ಲಿದ್ದ ನಿವಾಸಿಗಳು ಗಾಯತೊಳೆದು, ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಐದು ಚುಚ್ಚುಮದ್ದು ನೀಡಿದ ನಂತರವೂ ಪ್ರಯೋಜನವಾಗದೆ, ನಾಯಿ ಕಚ್ಚಿದ ಜಾಗ ಕೊಳೆತು ತ್ಯಾಗರಾಜನ್ ಮೃತಪಟ್ಟಿದ್ದಾರೆ ಎಂದು ಕುಟುಂಬದವರು ದೂರಿದ್ದಾರೆ.

ಸ್ಥಳಕ್ಕೆ ನಗರಸಭೆ ಮತ್ತು ಆರೋಗ್ಯ ಇಲಾಖೆಯ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು. ಪ್ರಕರಣ ನಡೆದು ಈಗಾಗಲೇ ಆರು ತಿಂಗಳಾಗಿದೆ. ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಗಾಯಾಳುವಿಗೆ ವೈದ್ಯರ ಸೂಚನೆಯಂತೆ ಚಿಕಿತ್ಸೆ ನೀಡಲಾಗಿದೆ. ರೇಬಿಸ್ನಿಂದ ಸಾವು ಸಂಭವಿಸಿದೆ ಎಂದು ನಿರೂಪಿಸಲು ಸಾಧ್ಯವಿಲ್ಲ. ಗಾಯಾಳು ವೃದ್ಧರಾಗಿರುವುದರಿಂದ ಗಾಯ ವಾಸಿಯಾಗದೆ ಅವರು ಸಾವನ್ನಪ್ಪಿರಬಹುದು ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ರೇಬಿಸ್ನಿಂದ ಮೃತಪಟ್ಟರೆ ನಗರಸಭೆಯಿಂದ ಪರಿಹಾರ ದೊರೆಯುತ್ತದೆ. ನಾಯಿ ಕಚ್ಚಿದ ಒಂದೆರಡು ತಿಂಗಳಲ್ಲಿ ಪರೀಕ್ಷೆ ನಡೆಸಬೇಕಾಗುತ್ತದೆ. ಇನ್ನೂ ಹೆಚ್ಚಿನ ಪರೀಕ್ಷೆ ಮಾಡಲು ಮರಣೋತ್ತರ ಪರೀಕ್ಷೆ ಮಾಡಲು ಸೂಚಿಸಲಾಯಿತು. ಆದರೆ, ಕುಟುಂಬದವರು ಒಪ್ಪದೆ ಅಂತ್ಯಕ್ರಿಯೆ ನಡೆಸಿದರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ನಗರಸಭೆಯ ಹಿರಿಯ ಆರೋಗ್ಯ ನಿರೀಕ್ಷಕಿ ಗೌರಿ, ಆರೋಗ್ಯ ಇಲಾಖೆಯ ಪ್ರಸನ್ನ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260416-18-1119320628

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.