ಕೆಜಿಎಫ್: ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ವಿದ್ಯಾರ್ಥಿ ವೇತನ ಹಣವನ್ನು ನಗರಸಭೆ ಸ್ಥಗಿತಗೊಳಿಸಿದೆ. ಸಾವಿರಾರು ಬಡ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಈ ಯೋಜನೆಯನ್ನು ಕೂಡಲೇ ಮರು ಅನುಷ್ಠಾನ ಮಾಡದೆ ಇದ್ದಲ್ಲಿ ನಗರಸಭೆ ಮುಂಭಾಗ ಹೋರಾಟ ನಡೆಸುವುದಾಗಿ ನಗರಸಭೆ ಮಾಜಿ ಅಧ್ಯಕ್ಷ ವಳ್ಳಲ್ ಮುನಿಸ್ವಾಮಿ ಎಚ್ಚರಿಕೆ ನೀಡಿದ್ದಾರೆ.

ನಗರದ ಓರಿಯಂಟಲ್ ಲೈನ್ನಲ್ಲಿ ಶುಕ್ರವಾರ ನಾಗರಿಕರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ನಾನು ನಗರಸಭೆ ಅಧ್ಯಕ್ಷನಾಗಿದ್ದ ಸಮಯದಲ್ಲಿ ಪ್ರತಿವರ್ಷ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಗುತ್ತಿತ್ತು. ಈಗ ಯೋಜನೆಯನ್ನು ಸ್ಥಗಿತಗೊಳಿಸಲಾಗಿದೆ. ಅದಕ್ಕಾಗಿ ಮೀಸಲಿಟ್ಟ ಹಣ ಏನಾಗಿದೆ ಎಂದು ತಿಳಿದಿಲ್ಲ. ಕೂಡಲೇ ಈ ನಿಟ್ಟಿನಲ್ಲಿ ನಗರಸಭೆ ಅಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕು. ಇಲ್ಲವಾದಲ್ಲಿ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

‘ಓರಿಯಂಟಲ್ ಲೈನಿನಲ್ಲಿ ಒಂದು ಕಾಮಗಾರಿ ಮಾಡಲು ಕೂಡ ಸಾಹಸ ಪಡಬೇಕು. ಪ್ರತಿಯೊಂದು ಕಾಮಗಾರಿ ಮಾಡುವಾಗಲೂ ಸಹ ಬಿಜಿಎಂಎಲ್ ಅಧಿಕಾರಿಗಳು ಬಂದು ತಡೆಯೊಡ್ಡುತ್ತಿದ್ದರು. ಅವರಿಗೆ ಸಮಜಾಯಿಸಿ ನೀಡಿ ಅಧಿಕೃತವಾಗಿಯೇ ಬಡಾವಣೆಯ ಎಲ್ಲಾ ರಸ್ತೆಗಳನ್ನು ಅಭಿವೃದ್ಧಿ ಮಾಡಲಾಗಿದೆ. ಕುಡಿಯುವ ನೀರಿನ ಸೌಕರ್ಯ ಕಲ್ಪಿಸಲಾಗಿದೆ. ಹಳೇ ಆರ್ಟಿಒ ಕಚೇರಿಯಿಂದ ಬಡಾವಣೆವರೆವಿಗೂ ರಸ್ತೆ ನಿರ್ಮಾಣ ಮಾಡಿ ಬೀದಿ ದೀಪಗಳನ್ನು ಅಳವಡಿಸಲಾಗಿದೆ. ಆದರೆ, ನಾನು ಕಾಂಗ್ರೆಸ್ ಪಕ್ಷ ಬಿಟ್ಟ ಮೇಲೆ ದೀಪಗಳಿಗೆ ವಿದ್ಯುತ್ ಸಂಪರ್ಕ ಇನ್ನೂ ನೀಡದೆ ಸತಾಯಿಸಲಾಗುತ್ತಿದೆʼ ಎಂದು ದೂರಿದರು.

ಮುಖಂಡರಾದ ಪಾಂಡ್ಯನ್, ವಿ.ಸಿ.ಗಣೇಸನ್, ನಟರಾಜನ್, ಅನಿಲ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.