ಕೆಜಿಎಫ್: ಗೌತಮನಗರ, ಸುಮತಿ ನಗರ ಸೇರಿದಂತೆ ನಾಲ್ಕು ವಾರ್ಡ್ ವ್ಯಾಪ್ತಿಯಲ್ಲಿ ಒಳಚರಂಡಿ ಕಾಮಗಾರಿಯನ್ನು ನಡೆಸಲಾಗುವುದು. ಈ ನಿಟ್ಟಿನಲ್ಲಿ ₹17.50 ಕೋಟಿ ಅನುದಾನ ಬಿಡುಗಡೆಯಾಗಿದೆ ಎಂದು ಶಾಸಕಿ ಎಂ.ರೂಪಕಲಾ ಹೇಳಿದರು.

ರಾಬರ್ಟಸನ್ಪೇಟೆಯ ಗೌತಮ ನಗರದಲ್ಲಿ ಶುಕ್ರವಾರ ಒಳಚರಂಡಿ ಕಾಮಗಾರಿ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಮೊದಲನೇ ಹಂತದಲ್ಲಿ ನಗರದಲ್ಲಿ 8,400 ಮನೆಗಳಿಗೆ ಒಳಚರಂಡಿ ವ್ಯವಸ್ಥೆ ಕಲ್ಪಿಸಲಾಗಿದೆ. ಈಗ ಎರಡನೇ ಹಂತದಲ್ಲಿ ಸುಮಾರು 2 ಸಾವಿರ ಮನೆಗಳಿಗೆ ಯುಜಿಡಿ ವ್ಯವಸ್ಥೆ ಮಾಡಲಾಗುತ್ತದೆ. ಒಟ್ಟು 12.7 ಕಿ.ಮೀ ವ್ಯಾಪ್ತಿಯಲ್ಲಿ ಕಾಮಗಾರಿ ನಡೆಯಲಿದೆ. ಮಳೆಗಾಲಕ್ಕೂ ಮೊದಲೇ ಕಾಮಗಾರಿ ಮುಗಿಸಬೇಕೆಂದು ಗುತ್ತಿಗೆದಾರರಿಗೆ ಮನವಿ ಮಾಡಲಾಗಿದೆ ಎಂದರು.

ಮೊದಲನೇ ಹಂತದ ಒಳಚರಂಡಿ ಕಾಮಗಾರಿ ನಡೆಸುವಾಗ ಬಹಳಷ್ಟು ಲೋಪಗಳು ಕಂಡು ಬಂದಿದ್ದವು. ಮನೆಗಳಿಗೆ ಸಂಪರ್ಕ ನೀಡುವುದು, ಮನೆಗಳ ನೀರು ಸಮರ್ಪಕವಾಗಿ ಯುಜಿಡಿಯ ಸಂಪ್ಗೆ ಹೋಗದೆ ಇರುವುದು, ಗುತ್ತಿಗೆದಾರರು ಹಳ್ಳ ತೋಡಿ ಹಾಗೆಯೇ ಬಿಟ್ಟುಹೋಗಿದ್ದು, ಹೀಗೆ ಹಲವಾರು ಸಮಸ್ಯೆಗಳು ಎದುರಾಗಿದ್ದವು. ಸಾರ್ವಜನಿಕರು ಕೂಡ ಬಹಳಷ್ಟು ಕಷ್ಟ ಪಟ್ಟಿದ್ದಾರೆ. ಮೊದಲನೇ ಹಂತದ ಕಾಮಗಾರಿಯಲ್ಲಿ ಆದ ಲೋಪದಿಂದ ಈಗ ಪಾಠ ಕಲಿಯಲಾಗಿದೆ. ಎರಡನೇ ಹಂತದಲ್ಲಿ ಇಂತಹ ಯಾವುದೇ ಸಮಸ್ಯೆ ಬರದಂತೆ ಎಚ್ಚರ ವಹಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.

ಕಾಮಗಾರಿ ಮಾಡುವ ಗುತ್ತಿಗೆದಾರರಿಗೆ ನಿವಾಸಿಗಳು ಸಹಕಾರ ನೀಡಬೇಕು. ಬಹಳ ವರ್ಷಗಳ ನಂತರ ಯುಜಿಡಿ ಬಂದಿದೆ. ಅದು ಯಶಸ್ವಿಯಾಗಿ ಕಾರ್ಯಗತವಾಗಬೇಕು. ಎರಡನೇ ಹಂತದಲ್ಲಿ ನಾಲ್ಕು ವಾರ್ಡ್ಗಳ ಮನೆಗಳಿಗೆ ಯುಜಿಡಿ ಅನುಕೂಲ ಸಿಗುತ್ತದೆ. ಮುಂದಿನ ದಿನಗಳಲ್ಲಿ ಬರುವ ಅನುದಾನದಲ್ಲಿ ರಸ್ತೆಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತದೆ. ಮುಖ್ಯಮಂತ್ರಿಗಳ ವಿಶೇಷ ಅನುದಾನ ಕೂಡ ಬಂದಿದೆ ಎಂದರು.

ಗೌತಮ ನಗರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಡಾ.ವಿಜಯಕುಮಾರ್ ಮಾತನಾಡಿ, ಗೌತಮ ನಗರ ಮತ್ತು ಸುಮತಿ ನಗರದ ನಿವಾಸಿಗಳಿಗೆ ಇ–ಖಾತೆ ಮಾಡಿಕೊಳ್ಳುವುದು ಸಮಸ್ಯೆಯಾಗಿದ್ದು, ಇನ್ನೂ ಮನೆಗಳಿಗೆ ದಾಖಲೆ ಪಡೆಯಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಈ ಎರಡೂ ಬಡಾವಣೆಗಳಲ್ಲಿ ಇ–ಖಾತೆ ಮಾಡಲು ಆಂದೋಲನ ಮಾಡಿಸಿ ಎಂದು ಶಾಸಕಿಗೆ ಮನವಿ ಮಾಡಿದರು. ಇದಕ್ಕೆ ಉತ್ತರಿಸಿದ ಶಾಸಕಿ ಬಡಾವಣೆ ನಿವಾಸಿಗಳಿಗೆ ಅನುಕೂಲವಾಗುವ ದಿನದಂದೇ ಆಂದೋಲನ ಮಾಡಲಾಗುವುದು ಎಂದು ಭರವಸೆ ನೀಡಿದರು.

ನಗರಸಭೆ ಆಯುಕ್ತ ಶ್ರೀಧರ್, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಕಿರಣ್ ಕುಮಾರ್, ಚಂದ್ರಶೇಖರ ಸ್ವಾಮಿ, ನಗರಸಭೆ ಮಾಜಿ ಸದಸ್ಯರು ಮತ್ತು ಬಡಾವಣೆ ನಿವಾಸಿಗಳು ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260328-18-46810681

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.