ಮುನಿಯಪ್ಪ ಹೇಳಿಕೆ: ಪ್ರತಿಕ್ರಿಯೆಗೆ ರಮೇಶ್‍ಕುಮಾರ್ ನಿರಾಕರಣೆ
ಕೋಲಾರ: ‘ನಾನು ಕಳೆದ 4 ವರ್ಷಗಳಲ್ಲಿ ಯಾವುದೇ ವಿಚಾರಕ್ಕಾದರೂ ಪ್ರತಿಕ್ರಿಯಿಸಿದ್ದೀನಾ? ಈಗಲೂ ಅಷ್ಟೇ, ಯಾವುದಕ್ಕೂ ಪ್ರತಿಕ್ರಿಯಿಸುವುದಿಲ್ಲ’ ಎಂದು ಶಾಸಕ ಕೆ.ಆರ್.ರಮೇಶ್‍ಕುಮಾರ್ ತಮ್ಮ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದ ಮಾಜಿ ಸಂಸದ ಕೆ.ಎಚ್.ಮುನಿಯಪ್ಪರ ಮಾತುಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದರು.
ಮುನಿಯಪ್ಪರ ಹೇಳಿಕೆ ವಿಚಾರವಾಗಿ ಇಲ್ಲಿ ಗುರುವಾರ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ರಮೇಶ್‌ಕುಮಾರ್, ‘ಪ್ರತಿಕ್ರಿಯೆ ಇಲ್ಲ ಎಂದ ಮೇಲೆ ಮುಗಿಯಿತು. ಮಾಧ್ಯಮದವರು ಏನಾದರೂ ಅಂದುಕೊಳ್ಳಿ, ತಮಗೆ ಸಂಪೂರ್ಣ ಸ್ವಾತಂತ್ರ್ಯವಿದೆ’ ಎಂದರು.
‘ಕ್ರಿಯೆ ಅವರದ್ದು ಆಗಿದೆ ಎಂದ ಮೇಲೆ ಪ್ರತಿಕ್ರಿಯೆಗೂ ಅವರನ್ನೇ ಕೇಳಿ. ಮಾತನಾಡಲು ನಾನು ಯಾವ ನಾಯಕನಪ್ಪಾ? ನಾನು ಮಾತನಾಡಲು ಹಿಂದೇಟು ಹಾಕುತ್ತಿದ್ದೇನೆ ಅಲ್ಲವೇ? ಹಾಗಾದರೆ ತಾವೇ ಮುಂದೇಟು ಹಾಕಿಕೊಳ್ಳಿ. ಮಾಧ್ಯಮದವರಿಗೆ ಎಲ್ಲಾ ಸ್ವಾತಂತ್ರ್ಯವಿದೆ. ನಾನು ಯಾವುದೇ ವಿಚಾರದ ಬಗ್ಗೆ ಈಗ ಮಾತನಾಡಲ್ಲ’ ಎಂದು ಹೇಳಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.