ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಸಿಲಿನ ತಾಪ; ಕಲ್ಲಂಗಡಿ ವ್ಯಾಪಾರ ಬಲು ಜೋರು

Last Updated 13 ಮಾರ್ಚ್ 2020, 11:31 IST
ಅಕ್ಷರ ಗಾತ್ರ

ಮಾಲೂರು: ದಿನದಿಂದ ದಿನಕ್ಕೆ ಬಿಸಿಲಿನ ಝಳ ಹೆಚ್ಚಾಗುತ್ತಲೇ ಇದ್ದು, ಈಗಾಗಲೇ ತಂಪು ಪಾನೀಯಗಳಿಗೆ ಗ್ರಾಹಕರು ಮೊರೆ ಹೋಗಿದ್ದಾರೆ. ದಾಹ ನೀಗಿಸುವ ಕಲ್ಲಂಗಡಿ ವ್ಯಾಪಾರ ಬಲು ಜೋರಾಗಿದ್ದು, ಪಟ್ಟಣದಲ್ಲಿ ಎತ್ತ ಕಣ್ಣಾಡಿಸಿದರೂ ಕಲ್ಲಂಗಡಿ ಹಣ್ಣುಗಳದ್ದೇ ರಾಶಿ ಕಾಣಿಸುತ್ತದೆ.

ಬೇಸಿಗೆಯ ಬಿಸಿಲಿನ ತಾಪಮಾನ ಹೆಚ್ಚಾಗುತ್ತಿದ್ದಂತೆ ಪಟ್ಟಣದಲ್ಲಿ ಕಲ್ಲಂಗಡಿಗೆ ಬೇಡಿಕೆ ಹೆಚ್ಚಾಗಿದೆ. ಬೇಗೆಯನ್ನು ತಣಿಸಲೆಂದು ಅಲ್ಲಲ್ಲಿ ಕಲ್ಲಂಗಡಿ ಹಣ್ಣುಗಳ ವ್ಯಾಪರ ಆರಂಭವಾಗಿದೆ.

ಪಟ್ಟಣದ ಬಾಲಾಜಿ ವೃತ್ತ, ಮಾಲೂರು -ಬೆಂಗಳೂರು ರಸ್ತೆ, ಮಾರಿಕಾಂಬ ವೃತ್ತ, ಮತ್ತು ಹೊಸೂರು ಮುಖ್ಯರಸ್ತೆ ಬದಿಗಳಲ್ಲಿ ಕಲ್ಲಂಗಡಿ ವ್ಯಾಪರ ಭರಾಟೆ ಜೋರಾಗಿದೆ. ಇನ್ನು ಖಾಲಿ ಇರುವ ಸರ್ಕಾರಿ ಜಾಗಗಳಲ್ಲಿ ಹಣ್ಣುಗಳನ್ನು ಗುಡ್ಡೆ ಹಾಕಿಕೊಳ್ಳುವ ವ್ಯಾಪಾರಿಗಳು ಬಿಡಾರ ಹೂಡುತ್ತಿದ್ದಾರೆ.

ಕಲ್ಲಂಗಡಿ ಹಣ್ಣುಗಳನ್ನು ತಾಲ್ಲೂಕು ಸೇರಿಂದತೆ ತಮಿಳುನಾಡಿನ ಪಾಂಡಿಚೇರಿ, ಅರಕೋಣಂ ಹಾಗೂ ಆಂಧ್ರದ ಕಡಪ ಮಾರುಕಟ್ಟೆಗಳಿಂದ ಖರೀದಿಸಿ ತರಬೇಕಾಗಿದೆ ಎಂದು ಕಲ್ಲಂಗಡಿ ವ್ಯಾಪಾರಿ ಅಲ್ಲಾ ಬಖಾಷ್ ತಿಳಿಸಿದರು.

‘ಕಿರಣ್ ತಳಿಗೆ ಬೆಲೆ ಜಾಸ್ತಿ ಇದ್ದು, ಸದ್ಯಕ್ಕೆ ಕಿರಣ್ ಮತ್ತು ನಾಮಧಾರಿ ತಳಿಗಳ ಕಲ್ಲಂಗಂಡಿ ಹಣ್ಣುಗಳು ದೊರೆಯುತ್ತಿವೆ. ಕಿರಣ್ ತಳಿಯ ಕಲ್ಲಂಗಡಿಗೆ ಕೆ.ಜಿಗೆ ₹ 20ರಿಂದ ₹ 25 ಬೆಲೆ ಇದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಹೆಚ್ಚು ಇಳುವರಿ ಬಂದಿದೆ’ ಎಂಬುದು ರೈತ ರಾಮಣ್ಣ ಅಭಿಪ್ರಾಯ.

*

ಮಾರುಕಟ್ಟೆಯಲ್ಲಿ ದಿನ ದಿನಕ್ಕೆ ಕಲ್ಲಂಗಡಿಗಳು ಹೆಚ್ಚಾಗುತ್ತಿವೆ. ಹೀಗಾಗಿ ಗ್ರಾಹಕರು ಕೇಳುವ ದರಕ್ಅಕೆ ಹಣ್ಣುಗಳನ್ನು ಮಾರಾಟ ಮಾಡುತ್ತಿದ್ದೇವೆ
-ಮಾರ್ಕೊಂಡಚಾರ, ಕಲ್ಲಂಗಡಿ ವ್ಯಾಪಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT