ಕೋಲಾರ: ತಾಲ್ಲೂಕಿನ ಆದಿಮ ಸಾಂಸ್ಕೃತಿಕ ಕೇಂದ್ರದಲ್ಲಿ ಹುಣ್ಣಿಮೆ ಹಾಡು– 230 ಅಂಗವಾಗಿ ಅತಿಥಿಗಳ ಮಾತು ಹಾಗೂ ನಾಟಕ ಪ್ರದರ್ಶನ ನಡೆಯಿತು.

ದಕ್ಷ ಹಾಗೂ ಪ್ರಾಮಾಣಿಕ ಪೊಲೀಸ್ ಅಧಿಕಾರಿಯಾಗಿದ್ದ ಮಧುಕರ್ ಶೆಟ್ಟಿ ಅವರ ಜೀವನಾಧಾರಿತ ‘ಖಾಕಿಯೊಳಗಿನ ಸಂತ’ ನಾಟಕಕ್ಕೆ ಪ್ರೇಕ್ಷಕರು ತಲೆದೂಗಿದರು. ಪೊಲೀಸ್ ವೃತ್ತಿಗೆ ಸೇರಿದ ನಂತರ ಅವರು ಎದುರಿಸಿದ ಪ್ರಸಂಗವನ್ನೂ ದೃಶ್ಯಗಳನ್ನಾಗಿ ರಂಗದ ಮೇಲೆ ತರಲಾಗಿದೆ.

ಬೆಂಗಳೂರಿನ ಪೊಲೀಸ್ ತರಬೇತಿ ಕೇಂದ್ರದ ಡಿಐಜಿಪಿ ಡಿ.ದೇವರಾಜ್ ಮಾತನಾಡಿ, ‘ಆದಿಮ ಕೇಂದ್ರವನ್ನು ಅನೇಕರು ಸೇರಿ ಕಟ್ಟಿದ್ದಾರೆ. ಎನ್.ಮುನಿಸ್ವಾಮಿ, ಹ.ಮಾ.ರಾಮಚಂದ್ರ ಹಾಗೂ ತಂಡ ಕೇಂದ್ರವನ್ನು ಮುನ್ನೆಡೆಸಿಕೊಂಡು ಹೋಗುತ್ತಿದೆ. ಅಂಧರ ಕವಿಗೋಷ್ಠಿ ನಡೆದಿರುವುದು ಮತ್ತೊಂದು ವಿಶೇಷ. ಹಲವು ಸಮಾಜಮುಖಿ ಕಾರ್ಯಕ್ರಮ ರೂಪಿಸಿ ಸಮಾಜಕ್ಕೆ ಮಾದರಿಯಾಗಿದೆ’ ಎಂದು ಶ್ಲಾಘಿಸಿದರು.

ಆದಿಮ ಕೇಂದ್ರಕ್ಕೆ ವಸತಿಗೃಹ, ಗ್ರಂಥಾಲಯ ನಿರ್ಮಿಸಿಕೊಡುವ ಭರವಸೆ ಕೊಟ್ಟಿದ್ದೇನೆ. ಅದಕ್ಕೆ ಸಂಬಂಧಿಸಿ ಯೋಜನೆಯೂ ಸಿದ್ಧವಾಗಿದೆ. ನಾಟಕಕಕ್ಕೆ ಖಾಕಿಯೊಳಗಿನ ಸಂತ ಎಂಬ ಶೀರ್ಷಿಕೆ ಕೊಟ್ಟಿರುವುದು ಚೆನ್ನಾಗಿದೆ ಎಂದರು.

ಮಧುಕರ್ ಶೆಟ್ಟಿಯವರ ಒಡನಾಟ, ಅವರೊಂದಿಗೆ ಕೆಲಸ ಮಾಡಿದ ದಿನಗಳು, ಇನ್ನಿತರ ಪೊಲೀಸ್ ಅಧಿಕಾರಿಗಳು ಮತ್ತು ಅವರ ಸೇವೆಯನ್ನು ಸ್ಮರಿಸಿಕೊಂಡರು.

ಮಧುಕರ್ ಸರಳ ಜೀವನ ನಡೆಸಿದವರು. ನೌಕರರ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದರು. ಅವರಿಗೆ ಮೂಲ ಸೌಕರ್ಯಗಳನ್ನು ಕಲ್ಪಿಸಿಕೊಡುವಲ್ಲಿ ಇವರ ಪಾತ್ರ ದೊಡ್ಡದು. ಕೈಲಾಗುವ ಸಹಾಯ ಮಾಡುವುದು ಎಲ್ಲಾ ಧರ್ಮಗಳಿಗಿಂತ ದೊಡ್ಡದು. ಅನವಶ್ಯಕವಾಗಿ ಬೇರೆಯವರನ್ನು ನೋಯಿಸುವುದು ಪಾಪದ ಕೆಲಸ. ಅವರ ಅಕಾಲಿಕ ಅಗಲಿಕೆ ಈ ನಾಡಿಗೆ ತುಂಬಲಾರದ ನಷ್ಟ ಎಂದರು.

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಸುರಕ್ಷತೆ ಹಾಗೂ ಜಾಗೃತ ವಿಭಾಗದ ನಿರ್ದೇಶಕ ಅಬ್ದುಲ್ ಅಹದ್ ಮಾತನಾಡಿ, ‘ಸಾಂಸ್ಕೃತಿ ಪ್ರಜ್ಞೆ ಇಲ್ಲದೆ ಹೋದರೆ ಸಮಾಜ ಬೇರೆ ದಿಕ್ಕಿಗೆ ಹೋಗುವ ಸಾಧ್ಯತೆ ಇರುತ್ತದೆ. ಆದಿಮ ಕೇಂದ್ರದ ಹಿಂದೆ ಇರುವ ಶಕ್ತಿಗಳು, ವ್ಯಕ್ತಿಗಳು ಅಭಿನಂದನೆಗೆ ಅರ್ಹರು. ಇಲ್ಲಿ ನಾಟಕ ಪ್ರದರ್ಶನ ನೀಡಿದವರು ನಮ್ಮ ಸಂಸ್ಥೆಯ ನೌಕರರು’ ಎಂದು ಹೇಳಿದರು.

ಬೆಂಗಳೂರಿನ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಕನ್ನಡ ಸಹಾಯಕ ಪ್ರಾಧ್ಯಾಪಕ ನಾರಾಯಣ್ ಕ್ಯಾಸಂಬಳ್ಳಿ ಮಾತನಾಡಿದರು.

ಅತಿಥಿಗಳನ್ನು ಆದಿಮ ಸನ್ಮಾನಿಸಿ ಗೌರವಿಸಿತು. ಆದಿಮ ಆಶಯ ಗೀತೆ ಹರೀಶ್ ಹಾಗೂ ತಂಡ ಹಾಡಿತು. ಕುಪ್ನಳ್ಳಿ ಭೈರಪ್ಪ ಕಾರ್ಯಕ್ರಮ ನಿರೂಪಣೆ ನಡೆಸಿಕೊಟ್ಟರು.

ಕಾರ್ಯಕ್ರಮದಲ್ಲಿ ವೇದಿಕೆಯಲ್ಲಿ ಆದಿಮ ಅಧ್ಯಕ್ಷ ಎನ್. ಮುನಿಸ್ವಾಮಿ, ಕಾರ್ಯದರ್ಶಿ ಹ.ಮಾ.ರಾಮಚಂದ್ರ, ಗಂಗನಬೀಡು ವೆಂಕಟಸ್ವಾಮಿ, ಕಾಳಿದಾಸ್, ಬಾಲಾಜಿ ಪ್ರಿಂಟರ್ಸ್ ಶ್ರೀನಿವಾಸ್, ನಾರಾಯಣಸ್ವಾಮಿ, ಬಿ.ವಿ.ನಂಜುಂಡಪ್ಪ, ಯುವ ಮುಖಂಡರಾದ ವಕ್ಕಲೇರಿ ರಾಜಪ್ಪ, ವರದೇನಹಳ್ಳಿ ವೆಂಕಟೇಶ್, ಮುನೇಶ್, ಕೆಎಂಎಫ್ ನಾಗರಾಜ್, ಕಾಜಿಕಲ್ಲಳ್ಳಿ ಬಾಬು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260603-18-620239443

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.