ಬಂಗಾರಪೇಟೆ: ಅಂತರ್ಜಲ ಮಟ್ಟ ಹೆಚ್ಚಿಸಿ, ಬರಗಾಲದಲ್ಲಿ ಕೃಷಿಗೆ ಜೀವ ತುಂಬಬೇಕೆಂಬ ಆಶಯದೊಂದಿಗೆ ಸರ್ಕಾರ ಜಾರಿಗೆ ತಂದಿರುವ ಕೃಷಿ ಹೊಂಡ ಯೋಜನೆ ಸುರಕ್ಷತಾ ನಿಯಮ ಪಾಲಿಸದ ಹಿನ್ನೆಲೆ ಅಮಾಯಕ ಮಕ್ಕಳು ಹಾಗೂ ಜಾನುವಾರುಗಳಿಗೆ ಮೃತ್ಯುಕೂಪವಾಗಿವೆ.

ಕೃಷಿ ಇಲಾಖೆಯ ನಿಯಮಾವಳಿಗಳ ಪ್ರಕಾರ, ಪ್ರತಿಯೊಂದು ಕೃಷಿ ಹೊಂಡದ ಸುತ್ತಲೂ ಕಡ್ಡಾಯವಾಗಿ 6 ಅಡಿ ಎತ್ತರದ ತಂತಿ ಬೇಲಿ ಇರಬೇಕು. ಹೊಂಡದ ನಾಲ್ಕು ಮೂಲೆಗಳಲ್ಲಿ ಹತ್ತಲು ಅನುಕೂಲವಾಗುವಂತೆ ನೈಲಾನ್ ಹಗ್ಗ ಅಥವಾ ಏಣಿ ವ್ಯವಸ್ಥೆ ಇರಬೇಕು. ಆದರೆ, ತಾಲ್ಲೂಕಿನ ಬಹುತೇಕ ಕೃಷಿ ಹೊಂಡಗಳಲ್ಲಿ ಇವು ಕೇವಲ ಕಾಗದದ ಮೇಲಿನ ನಿಯಮಗಳಾಗಿ ಉಳಿದಿವೆ. ಶೇ 80ರಷ್ಟು ಹೊಂಡಗಳಿಗೆ ಬೇಲಿಯೇ ಇಲ್ಲದೆ, ತೆರೆದ ಸಾವಿನ ಬಲೆಗಳಂತೆ ಗೋಚರಿಸುತ್ತಿವೆ.

ಹೊಂಡಗಳಲ್ಲಿ ನೀರು ಇಂಗದಂತೆ ತಡೆಯಲು ಅಳವಡಿಸಲಾಗಿರುವ ಪ್ಲಾಸ್ಟಿಕ್ ಲೈನಿಂಗ್ ಅತಿ ಹೆಚ್ಚಿನ ಜಾರಿಕೆಯನ್ನು ಹೊಂದಿದೆ. ಆಕಸ್ಮಿಕವಾಗಿ ಮಗು ಅಥವಾ ಪ್ರಾಣಿ ಹೊಂಡಕ್ಕೆ ಬಿದ್ದರೆ, ಮೇಲೆ ಬರಲು ಪ್ರಯತ್ನಿಸಿದಷ್ಟೂ ಕೆಳಕ್ಕೆ ಜಾರುತ್ತವೆ. ಇದರಿಂದ ಉಸಿರುಗಟ್ಟಿ ಸಾಯುತ್ತಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಸಹಾಯಧನ ಹಣ ಪಡೆದ ನಂತರ ರೈತರು ಬೇಲಿ ಹಾಕುವ ಗೋಜಿಗೆ ಹೋಗುತ್ತಿಲ್ಲ. ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸದೆ ವರದಿ ನೀಡುತ್ತಿದ್ದಾರೆ. ಕಳೆದ ಎರಡು ವರ್ಷಗಳಲ್ಲಿ ತಾಲ್ಲೂಕಿನ ವಿವಿಧೆಡೆ ಕೃಷಿ ಹೊಂಡಕ್ಕೆ ಬಿದ್ದು ಐದಕ್ಕೂ ಹೆಚ್ಚು ಮಕ್ಕಳು ಪ್ರಾಣ ಕಳೆದುಕೊಂಡಿದ್ದಾರೆ. ನೂರಾರು ಜಾನುವಾರುಗಳು ಜಲಸಮಾಧಿಯಾಗಿವೆ. ಹೊಂಡದ ಆಳ ಮತ್ತು ಅಪಾಯದ ಬಗ್ಗೆ ಎಚ್ಚರಿಸುವ ಯಾವುದೇ ನಾಮಫಲಕಗಳು ಸ್ಥಳದಲ್ಲಿ ಕಂಡುಬರುತ್ತಿಲ್ಲ. ಕೂಡಲೇ ಕೃಷಿ ಇಲಾಖೆ ಹಾಗೂ ಗ್ರಾಮ ಪಂಚಾಯಿತಿ ಅಧಿಕಾರಿಗಳು ಜಂಟಿ ಸರ್ವೆ ನಡೆಸಿ, ಸುರಕ್ಷತಾ ಕ್ರಮ ಅಳವಡಿಸದ ಹೊಂಡಗಳ ಮಾಲೀಕರಿಗೆ ದಂಡ ವಿಧಿಸಬೇಕು. ಜೀವಹಾನಿಯಾದಲ್ಲಿ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡುವ ಕಟ್ಟುನಿಟ್ಟಿನ ನಿಯಮ ಜಾರಿಗೆ ತರಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260512-18-1510698484

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.