ಕೋಲಾರ: ‘ನಾನು ಎಂಜಿನಿಯರಿಂಗ್ ಪದವಿ ಮುಗಿಸಿದ್ದು 2019ರಲ್ಲಿ. ಆ ನಂತರ ಯುಪಿಎಸ್ಸಿ ಪರೀಕ್ಷೆಗೆ ಸತತ ಏಳು ವರ್ಷ ಶ್ರಮ ಹಾಕಿದೆ. ಯಶಸ್ಸು ಸಿಗದಿದ್ದಾಗ ಬೇಸರವಾಗುತಿತ್ತು. ಸ್ಪರ್ಧಾತ್ಮಕ ಪರೀಕ್ಷೆ ಸಿದ್ಧತೆ ಕೈಬಿಟ್ಟು ಯಾವುದಾದರೂ ಕಂಪನಿಯಲ್ಲಿ ಉದ್ಯೋಗಕ್ಕೆ ಸೇರಿ ದುಡಿಯೋಣ ಎನಿಸುತಿತ್ತು. ಮತ್ತೆ ಧೈರ್ಯ ತಂದುಕೊಂಡು ಸಿದ್ಧತೆ ಮುಂದುವರಿಸುತ್ತಿದ್ದೆ. ಆ ಪರಿಶ್ರಮಕ್ಕೆ ಕೊನೆಗೂ ಯಶಸ್ಸು ಸಿಕ್ಕಿದೆ...’

–ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್ಸಿ) ನಡೆಸಿದ ಭಾರತೀಯ ಅರಣ್ಯ ಸೇವೆ (ಐಎಫ್ಎಸ್) 2025ನೇ ಸಾಲಿನ ಪರೀಕ್ಷೆಯಲ್ಲಿ ಆರನೇ ರ್ಯಾಂಕ್ ಪಡೆದಿರುವ ಕೋಲಾರದ ಸಾಧಕ ಎ.ಅನೂಪ್ ರೆಡ್ಡಿ ಮಾತುಗಳಿವು.

ದಕ್ಷಿಣ ಕನ್ನಡದ ಸುರತ್ಕಲ್ನ ರಾಷ್ಟ್ರೀಯ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎನ್ಐಟಿ) ಮಹಾವಿದ್ಯಾಲಯದಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ಪೂರೈಸಿರುವ ಅವರು ಸತತ 6ನೇ ಪ್ರಯತ್ನದಲ್ಲಿ ಈ ಸಾಧನೆ ಮಾಡಿದ್ದಾರೆ.

ಈ ಅವಧಿಯಲ್ಲಿ ನನ್ನ ಜೊತೆ ಓದಿದ ಹಲವರಿಗೆ ಕೆಲಸ ಸಿಕ್ಕಿತ್ತು. ಅವರೆಲ್ಲಾ ಉದ್ಯೋಗದಲ್ಲಿರುವುದನ್ನು ನೋಡಿ ಬೇಸರವಾಗುತಿತ್ತು. ನನ್ನ ಆಯ್ಕೆ ಸರಿ ಇದೆಯೋ ಇಲ್ಲವೋ ಎಂಬ ಗೊಂದಲಕ್ಕೆ ಒಳಗಾಗಿದ್ದೆ. ಈ ಸಲ ಪಾಸ್ ಆಗದಿದ್ದರೆ ಯುಪಿಎಸ್ಸಿ ಆಸೆ ಬಿಟ್ಟು ಬೇರೆ ಉದ್ಯೋಗಕ್ಕೆ ಹೋಗುತಿದ್ದೆ. ಆದರೆ, ಪೋಷಕರು ಹಾಗೂ ಸೋದರತ್ತೆಯ ಪ್ರೋತ್ಸಾಹದಿಂದ ನನಗೆ ರ್ಯಾಂಕ್ ಬಂದಿದೆ. ಏಳು ವರ್ಷ ಕಾದಿದ್ದಕ್ಕೂ ಫಲ ಸಿಕ್ಕಿದೆ ಎಂದು ‘ಪ್ರಜಾವಾಣಿ’ ಜೊತೆ ಖುಷಿ ಹಂಚಿಕೊಂಡರು.

ನಗರದ ಟೇಕಲ್ ರಸ್ತೆಯ ಪಿ.ಸಿ.ಬಡಾವಣೆಯಲ್ಲಿ ನೆಲೆಸಿರುವ ಬಿ.ಆಂಜನೇಯರೆಡ್ಡಿ ಹಾಗೂ ಎಂ.ಶೋಭಾ ಅವರ ಪುತ್ರರಾಗಿರುವ ಅನೂಪ್ ನಗರದ ಚಿನ್ಮಯ ವಿದ್ಯಾಮಂದಿರದಲ್ಲಿ ಪ್ರೌಢಶಾಲೆ ಹಾಗೂ ಸಹ್ಯಾದ್ರಿ ಕಾಲೇಜಿನಲ್ಲಿ ಪಿಯುಸಿ ಓದಿದ್ದಾರೆ. ಎಸ್ಎಸ್ಎಲ್ಸಿಯಲ್ಲಿ ಶೇ 98.56 ಅಂಕ ಹಾಗೂ ದ್ವಿತೀಯ ಪಿಯುಸಿಯಲ್ಲಿ ಶೇ 96.5 ಅಂಕ ಪಡೆದಿದ್ದರು. ತಂದೆ ಮಹೀಂದ್ರಾ ಶೋ ರೂಂನಲ್ಲಿ ಜನರಲ್ ಮ್ಯಾನೇಜರ್ ಆಗಿದ್ದು, ತಾಯಿ ಗೃಹಿಣಿ. ಸಹೋದರ ತರುಣ್ ರೆಡ್ಡಿ ಸದ್ಯ ಸಹ್ಯಾದ್ರಿ ಪದವಿ ಕಾಲೇಜಿನಲ್ಲಿ ವಾಣಿಜ್ಯ ಪದವಿಯಲ್ಲಿ (ದ್ವಿತೀಯ ವರ್ಷ) ಓದುತ್ತಿದ್ದಾರೆ. ಇವರ ಸೋದರತ್ತೆ ನಾಗವೇಣಿ ತಹಶೀಲ್ದಾರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಎಂಜಿನಿಯರಿಂಗ್ ಓದುವಾಗ ಕ್ಯಾಂಪಸ್ ಸೆಲೆಕ್ಷನ್ನಲ್ಲಿ ಯಶಸ್ವಿಯಾಗಲಿಲ್ಲ. ನಂತರ ಬೆಂಗಳೂರು ಸೇರಿಕೊಂಡು ಯುಪಿಎಸ್ಸಿ ಪರೀಕ್ಷೆಗೆ ಸಿದ್ಧತೆ ಆರಂಭಿಸಿದೆ. ಇನ್ಸೈಟ್ಸ್ ಐಎಎಸ್ ಸಂಸ್ಥೆಯಲ್ಲಿ ಕೋಚಿಂಗ್ಗೆ ಸೇರಿದೆ. ನಂತರ ಕೋವಿಡ್ ಕಾರಣ ಮನೆಯಲ್ಲಿಯೇ ಆನ್ಲೈನ್ನಲ್ಲಿ ತರಬೇತಿ ಪಡೆದೆ. ಬಳಿಕ ಬೆಂಗಳೂರಿನಲ್ಲಿ ಸ್ನೇಹಿತರ ಜೊತೆ ರೂಮ್ ಮಾಡಿಕೊಂಡು ಅಭ್ಯಾಸ ಮುಂದುವರಿಸಿದೆ. ಆದರೆ, ಸತತ ನಾಲ್ಕು ಯತ್ನದಲ್ಲೂ ಯುಪಿಎಸ್ಸಿ ಪರೀಕ್ಷೆಯಲ್ಲಿ ಯಶಸ್ಸು ಸಿಗಲಿಲ್ಲ. ಆಗ ತುಂಬಾ ಬೇಸರವಾಯಿತು ಎಂದು ಅನೂಪ್ ಹೇಳಿದರು.

ಈ ಹಂತದಲ್ಲಿ ಯುಪಿಎಸ್ಸಿ ಸಿದ್ಧತೆ ಬಿಟ್ಟುಬಿಡಬೇಕು ಎನಿಸಿತು. ಯಾವುದಾದರೂ ಬೇರೆ ಉದ್ಯೋಗ ಹುಡುಕಿಕೊಳ್ಳುವ ಯೋಚನೆ ಬಂತು. ಬೇರೆ ಬೇರೆ ಕಂಪನಿಗಳಿಗೆ ಸಂದರ್ಶನ ಕೂಡ ಕೊಟ್ಟಿದ್ದೆ. ಆದರೆ, ಪೋಷಕರು ಧೈರ್ಯ ತುಂಬಿದರು. ಹೀಗಾಗಿ, ಮತ್ತೊಂದು ಯತ್ನ ಮಾಡೋಣ ಎನಿಸಿತು. ಆ ನಿರ್ಧಾರ ಫಲ ಕೊಟ್ಟಿತು. 2024ರಲ್ಲಿ ಐಎಫ್ಎಸ್ ಪರೀಕ್ಷೆಯ ಸಂದರ್ಶನದವರೆಗೆ ಹೋಗಿದ್ದೆ. ಅದು ಭರವಸೆ ಮೂಡಿಸಿತು. ಈಗ ಆರನೇ ರ್ಯಾಂಕ್ ಬಂದಿರುವುದು ಸಹಜವಾಗಿಯೇ ಖುಷಿ ಉಂಟು ಮಾಡಿದೆ. ಪೋಷಕರೂ ಸಂಭ್ರಮದಲ್ಲಿದ್ದಾರೆ. ನಾಗರಿಕ ಸೇವಾ ಹುದ್ದೆ ಪಡೆಯಲು ಪ್ರಯತ್ನ ಮುಂದುವರಿಸುವೆ ಎಂದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260511-18-1167506574

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.