ಕೋಲಾರ: ಜಾತಿ ವ್ಯವಸ್ಥೆಯ ಅಮಾನವೀಯ ಸಂಕೋಲೆ ಮೆಟ್ಟಿ ನಿಂತು ದೇಶದ ಅತ್ಯುನ್ನತ ಸ್ಥಾನಕ್ಕೇರಿದ ಡಾ.ಬಾಬು ಜಗಜೀವನ ರಾಂ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಕೇವಲ ಒಂದು ಸಮುದಾಯದ ನಾಯಕರಲ್ಲ. ಅವರು ಇಡೀ ದೇಶದ ಅಂತಃಸಾಕ್ಷಿಯನ್ನು ಎಚ್ಚರಿಸಿದ ಮಹಾನ್ ಶಕ್ತಿಗಳು ಎಂದು ಜಿಲ್ಲಾಧಿಕಾರಿ ಎಂ.ಆರ್.ರವಿ ಬಣ್ಣಿಸಿದರು.

ನಗರದ ಟಿ. ಚನ್ನಯ್ಯ ರಂಗಮಂದಿರದಲ್ಲಿ ಭಾನುವಾರ ಜಿಲ್ಲಾಡಳಿತ ಹಾಗೂ ಸಮಾಜ ಕಲ್ಯಾಣ ಇಲಾಖೆ ಆಯೋಜಿಸಿದ್ದ ಡಾ. ಬಾಬು ಜಗಜೀವನ ರಾಂ ಅವರ 119ನೇ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಬಾಬೂಜಿ ತಮ್ಮ ವೃತ್ತಿ ಜೀವನದಲ್ಲಿ ಅನುಭವಿಸಿದ ನೋವುಗಳು ಮತ್ತು ಎದುರಿಸಿದ ಸವಾಲುಗಳನ್ನು ಸ್ಮರಿಸಿದ ಜಿಲ್ಲಾಧಿಕಾರಿ, ‘ಅಂತಹ ಕಠಿಣ ಪರಿಸ್ಥಿತಿಯಲ್ಲೂ ಅವರು ದೇಶದ ಶ್ರೇಷ್ಠ ಮಟ್ಟಕ್ಕೆ ಬೆಳೆದದ್ದು ಇಂದಿನ ಪೀಳಿಗೆಗೆ ಮಾದರಿ’ ಎಂದರು.

ಮನುಷ್ಯ ಹುಟ್ಟುವಾಗ ಮನುಷ್ಯನಾಗಿಯೇ ಹುಟ್ಟುತ್ತಾನೆ, ಆದರೆ ಸಮಾಜ ಅವನ ಮೇಲೆ ಜಾತಿಯ ಲೇಬಲ್ ಹಚ್ಚುತ್ತದೆ. ಜಾತಿ ಎಂಬುದು ನಾಮಪದವಾಗಿದ್ದರೆ ಒಪ್ಪಬಹುದು, ಆದರೆ ಅದು ಕ್ರಿಯಾಪದವಾಗಿ ‘ಜಾತೀಯತೆ’ಯಾಗಿ ಬದಲಾದಾಗ ವ್ಯವಸ್ಥೆ ಅಮಾನವೀಯವಾಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.

ಅಂಬೇಡ್ಕರ್ ಮತ್ತು ಬಾಬು ಜಗಜೀವನ ರಾಂ ನಡುವೆ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿದ್ದಿರಬಹುದು. ಆದರೆ, ಅದು ವ್ಯಕ್ತಿಗತ ದ್ವೇಷವಾಗಿರಲಿಲ್ಲ. ಒಂದೇ ತಾಯಿಯ ಮಕ್ಕಳಲ್ಲಿ ಭಿನ್ನಾಭಿಪ್ರಾಯವಿರುವಂತೆ ಸಾರ್ವಜನಿಕ ಜೀವನದಲ್ಲಿ ಅದು ಸಹಜ. ಇತಿಹಾಸದ ವಿದ್ಯಾರ್ಥಿಗಳಾಗಿ ನಾವು ಸಂಘಟಿತ ಹೋರಾಟದ ಪಾಠ ಕಲಿಯಬೇಕು ಎಂದು ಕರೆ ನೀಡಿದರು.

‘ಎಲ್ಲಾದರೂ ಇರು ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು’ ಎಂಬ ಕುವೆಂಪು ಅವರ ವಾಣಿಯಂತೆ, ಸಿದ್ದಲಿಂಗಯ್ಯನವರು ಹೇಳಿದ ‘ಏನಾದರೂ ಆಗು ಮೊದಲು ಮಾನವನಾಗು’ ಎಂಬ ತತ್ವ ನಮಗೆ ದಾರಿದೀಪವಾಗಬೇಕು. ಶೋಷಿತರ ಮತ್ತು ದಮನಿತರ ಧ್ವನಿಯಾಗಿ ಕೆಲಸ ಮಾಡುವುದೇ ನಿಜವಾದ ಮಾನವೀಯತೆ ಎಂದರು.

ಈ ಬಾರಿಯ ಜಯಂತಿಯನ್ನು ಕೇವಲ ಆಚರಣೆಗೆ ಸೀಮಿತಗೊಳಿಸದೆ, ಅರ್ಥಪೂರ್ಣವಾಗಿಸಲು ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತಿಗಳಿಂದ ಸ್ತಬ್ಧಚಿತ್ರಗಳನ್ನು ತರಿಸುವ ನಿರ್ಧಾರ ಮಾಡಲಾಗಿತ್ತು. ಅಲ್ಲದೆ, ಬಾಬು ಜಗಜೀವನ ರಾಂ ಅವರ ಜೀವನ ಚರಿತ್ರೆಯ ಕುರಿತು ಸಣ್ಣ ಹೊತ್ತಿಗೆಯನ್ನು ಪ್ರಕಟಿಸುವ ಮೂಲಕ ಯುವ ಪೀಳಿಗೆಗೆ ಅವರ ವಿಚಾರಗಳನ್ನು ತಲುಪಿಸುವ ಪ್ರಯತ್ನ ಮಾಡಲಾಗಿದೆ ಎಂದು ತಿಳಿಸಿದರು.

ಚಿಂತಕ ಎಂ.ನಾರಾಯಣಸ್ವಾಮಿ ತಮ್ಮ ಉಪನ್ಯಾಸದಲ್ಲಿ ‘ಸಮಾಜದಲ್ಲಿ ಇಂದು ಪ್ರತಿ ಸಮುದಾಯ ತನ್ನದೇ ಆದ ಸಾಂಸ್ಕೃತಿಕ ಮತ್ತು ಚಾರಿತ್ರಿಕ ನಾಯಕರನ್ನು ಹುಡುಕಿಕೊಳ್ಳುತ್ತಿರುವುದು ಉತ್ತಮ ಬೆಳವಣಿಗೆ. ಆದರೆ, ಈ ಪ್ರಕ್ರಿಯೆಯು ಇತರ ಸಮುದಾಯಗಳೊಂದಿಗೆ ಸಂಘರ್ಷಕ್ಕೆ ದಾರಿ ಮಾಡಿಕೊಡಬಾರದು. ನಾಯಕರನ್ನು ಕೇವಲ ಒಂದು ಜಾತಿಗೆ ಸೀಮಿತಗೊಳಿಸದೆ, ಅವರಲ್ಲಿರುವ ಸಾರ್ವತ್ರಿಕ ಮೌಲ್ಯಗಳನ್ನು ನಾವು ಅಳವಡಿಸಿಕೊಳ್ಳಬೇಕು’ ಎಂದು ಪ್ರತಿಪಾದಿಸಿದರು.

ಮಾದಿಗ ಸಮುದಾಯದ ಘನವಂತ ಇತಿಹಾಸವನ್ನು ಸ್ಮರಿಸಿದ ಅವರು, ರಾಮಾಯಣದ ಜಾಂಬವಂತನಿಂದ ಹಿಡಿದು, ಚಾಲುಕ್ಯರ ಕಾಲದ ಮಾತಂಗ ರಾಜರವರೆಗೆ ಸಮುದಾಯದ ಉಲ್ಲೇಖಗಳಿವೆ ಎಂದರು.

12ನೇ ಶತಮಾನದ ಶರಣ ಅರಳಯ್ಯನವರು ತಮ್ಮ ತೊಡೆಯ ಚರ್ಮದಿಂದ ಬಸವಣ್ಣನವರಿಗೆ ಪಾದರಕ್ಷೆ ಮಾಡಿಕೊಟ್ಟ ಪ್ರಸಂಗವನ್ನು ನೆನಪಿಸುತ್ತಾ, ಬಸವಣ್ಣನವರು ಆ ಪಾದರಕ್ಷೆಯನ್ನು ತಲೆಯ ಮೇಲೆ ಹೊತ್ತುಕೊಳ್ಳುವ ಮೂಲಕ ಶ್ರಮ ಸಂಸ್ಕೃತಿಗೆ ಗೌರವ ನೀಡಿದ್ದರು ಎಂದು ವಿವರಿಸಿದರು.

ಇಂತಹ ಶ್ರೀಮಂತ ಇತಿಹಾಸವಿದ್ದರೂ ಸಮುದಾಯವು ಇಂದು ಅಸ್ಪೃಶ್ಯತೆಯಿಂದ ಊರ ಹೊರಗಿರಲು ಕಾರಣವೇನು ಎಂಬುದನ್ನು ಅಂಬೇಡ್ಕರ್ ಅವರ ‘ಬ್ರೋಕನ್ ಮೆನ್’ ಸಿದ್ಧಾಂತದ ಮೂಲಕ ಆತ್ಮವಿಮರ್ಶೆ ಮಾಡಿಕೊಳ್ಳಬೇಕು ಎಂದರು.

ಬಾಬು ಜಗಜೀವನ್ ರಾಮ್ ಅವರನ್ನು ‘ಮೃದು ಅಂಬೇಡ್ಕರ್’ ಎಂದು ಬಣ್ಣಿಸಿದ ಅವರು, ದೇಶದ ನಿರ್ಮಾಣದಲ್ಲಿ ಅವರ ಪಾತ್ರ ಅಪಾರ ಎಂದು ಕೊಂಡಾಡಿದರು.

ದೇಶದ ಕಾರ್ಮಿಕ ಕಾನೂನುಗಳಿಗೆ ಬಲ ನೀಡಿದ ಶಿಲ್ಪಿ. 1974ರ ಭೀಕರ ಬರಗಾಲದ ಸಮಯದಲ್ಲಿ ಕೃಷಿಯಲ್ಲಿ ಹೊಸ ತಂತ್ರಜ್ಞಾನ ಮತ್ತು ರಸಗೊಬ್ಬರಗಳನ್ನು ಪರಿಚಯಿಸುವ ಮೂಲಕ ದೇಶವನ್ನು ಆಹಾರ ಸ್ವಾವಲಂಬನೆಯತ್ತ ಮುನ್ನಡೆಸಿದರು.

ದಲಿತ ಸಮುದಾಯಗಳಲ್ಲಿ ಆವೇಶ ಹೆಚ್ಚಾಗಿರುತ್ತದೆ, ಆದರೆ ಆಲೋಚನೆ ಕಡಿಮೆಯಿರುತ್ತದೆ ಎಂಬ ಮಾತನ್ನು ಉಲ್ಲೇಖಿಸಿದ ಅವರು, ‘ನಮಗೆ ಆವೇಶಕ್ಕಿಂತ ಆಲೋಚನೆ ಮುಖ್ಯ. ಇಡಬ್ಲ್ಯೂಎಸ್ ಮೀಸಲಾತಿಯನ್ನು ಮೇಲ್ವರ್ಗದವರು ಎ.ಸಿ ರೂಮಿನಲ್ಲಿ ಕುಳಿತು ಪಡೆದರು. ಆದರೆ, ನಮ್ಮ ಒಳ ಮೀಸಲಾತಿ ಹೋರಾಟ 35 ವರ್ಷಗಳಿಂದ ಬೀದಿಯಲ್ಲಿದೆ. ಇದಕ್ಕೆ ಕಾರಣ ನಮ್ಮಲ್ಲಿ ಆಲೋಚನಾ ಶಕ್ತಿಯ ಕೊರತೆ’ ಎಂದು ಮಾರ್ಮಿಕವಾಗಿ ನುಡಿದರು.

ಉಪವಿಭಾಗಾಧಿಕಾರಿ ಜಂಬಗಿ ರೇಣುಕಾಪ್ರಸಾದ್ ದಿಲೀಪ್ ಅವರು, ದೇಶದ ಸರ್ವತೋಮುಖ ಅಭಿವೃದ್ಧಿಗೆ ಬಾಬು ಜಗಜೀವನ ರಾಂ ಅವರ ಕೊಡುಗೆ ಅನನ್ಯವಾದುದು ಎಂದು ಸ್ಮರಿಸಿದರು.

ಹವಾಮಾನ ವೈಪರೀತ್ಯ ಹಾಗೂ ಬರಗಾಲದ ಸಂದರ್ಭದಲ್ಲಿ ದೇಶ ಅನುಭವಿಸುತ್ತಿದ್ದ ಆಹಾರದ ಕ್ಷಾಮವನ್ನು ಹೋಗಲಾಡಿಸಲು ಬಾಬು ಜಗಜೀವನ ರಾಂ ಅವರು ಪಟ್ಟ ಶ್ರಮ ದೊಡ್ಡದು. ದೀರ್ಘಕಾಲ ಕ್ಯಾಬಿನೆಟ್ ಮಂತ್ರಿಯಾಗಿ ಸೇವೆ ಸಲ್ಲಿಸಿದ ಅವರು ದೇಶದಲ್ಲಿ ಆಹಾರ ಭದ್ರತೆ ಮತ್ತು ಕ್ಷೀರ ಕ್ರಾಂತಿಗೆ ಬಲವಾದ ಅಡಿಪಾಯ ಹಾಕಿದರು ಎಂದು ನೆನಪಿಸಿದರು.ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹನೀಯರಿಗೆ ಹಾಗೂ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಲಾಯಿತು.

ಜಿಲ್ಲಾ ಪಂಚಾಯಿತಿ ಸಿಇಒ ಡಾ.ಪ್ರವೀಣ್ ಪಿ.ಬಾಗೇವಾಡಿ, ಹೆಚ್ಚುವರಿ ಜಿಲ್ಲಾಧಿಕಾರಿ ಎಸ್.ಎಂ.ಮಂಗಳಾ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿಶಂಕರ್, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಎಂ.ಶ್ರೀನಿವಾಸನ್, ಸಮಾಜದ ಮುಖಂಡರಾದ ಚಂದ್ರಶೇಖರ್, ಬೆಳಗಾನಹಳ್ಳಿ ಮುನಿವೆಂಕಟಪ್ಪ, ಪಂಡಿತ್ ಮುನಿವೆಂಕಟಪ್ಪ, ಸಾಹುಕಾರ ಶಂಕರಪ್ಪ ಸೇರಿದಂತೆ ದಲಿತ ಮುಖಂಡರು, ವಿವಿಧ ಸಂಘಟನೆ ಮುಖಂಡರು ಇದ್ದರು

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260406-18-975744945

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.