ಬಂಗಾರಪೇಟೆ: ತಾಲ್ಲೂಕಿನ ತ್ಯಾರನಹಳ್ಳಿ ಗ್ರಾಮದಲ್ಲಿ ಹೊಸದಾಗಿ ನಿರ್ಮಿಸಲಾದ ಬೀರೇಶ್ವರ ದೇವಾಲಯದ ವಿಗ್ರಹಗಳ ಪುನರ್ ಪ್ರಾಣ ಪ್ರತಿಷ್ಠಾಪನಾ ಮಹೋತ್ಸವವು ವೈಭವ ಹಾಗೂ ಭಕ್ತಿಪೂರ್ವಕವಾಗಿ ಗುರುವಾರ ಜರುಗಿತು.

ಊಸರಳ್ಳಿ ಮಠದ ರೇವಣಾರಾಧ್ಯ ಸ್ವಾಮೀಜಿ ಸಾನಿಧ್ಯದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಬಿರೇಶ್ವರ, ಪಾರ್ವತಾಂಬೆ, ಮಹಾಗಣಪತಿ ಹಾಗೂ ಬಸವೇಶ್ವರ ಸ್ವಾಮಿಯ ನೂತನ ವಿಗ್ರಹಗಳನ್ನು ಪ್ರತಿಷ್ಠಾಪಿಸಲಾಯಿತು. ಮೂರು ದಿನ ನಡೆದ ಈ ಧಾರ್ಮಿಕ ಕಾರ್ಯದಲ್ಲಿ ಆಗಮಿಕರು ವೇದಘೋಷ ಹಾಗೂ ಮಂತ್ರೋಚ್ಛಾರಗಳ ಮೂಲಕ ಹೋಮ-ಹವನಗಳನ್ನು ನೆರವೇರಿಸಿದರು.

ಸಿದ್ದೇಶ್ವರ, ಬೀರೇಶ್ವರ ಮತ್ತು ವೀರ ಮುದ್ದಮ್ಮ ಟ್ರಸ್ಟ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಈ ಕಾರ್ಯಕ್ರಮದಲ್ಲಿ ಹಾಲುಮತ (ಕುರುಬ) ಸಮುದಾಯದ ನೂರಾರು ಭಕ್ತರು ಪಾಲ್ಗೊಂಡಿದ್ದರು. ವಿಶೇಷವಾಗಿ ಹತ್ತಾರು ದಂಪತಿಗಳು ಹೋಮ-ಹವನಗಳಲ್ಲಿ ಪಾಲ್ಗೊಂಡರು.

ಟ್ರಸ್ಟ್ನ ಪ್ರಮುಖ ಮುಖಂಡರು, ಕೋಲಕಾರರು, ಕಂಬಿ ಯಜಮಾನರು ಹಾಗೂ ಗ್ರಾಮದ ಸಮಸ್ತ ಮುಖಂಡರ ನೇತೃತ್ವದಲ್ಲಿ ಇಡೀ ಕಾರ್ಯಕ್ರಮ ಅಚ್ಚುಕಟ್ಟಾಗಿ ನಡೆಯಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260508-18-1918688107

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.