ಬಂಗಾರಪೇಟೆ: ತಾಲ್ಲೂಕಿನ ಕೀಲುಕೊಪ್ಪ ಗ್ರಾಮದಲ್ಲಿ ಶನಿವಾರ ರಾತ್ರಿ ಮದ್ಯಪಾನ ಮಾಡುವಾಗ ಶುರುವಾಗ ಗಲಾಟೆಯು ವಿಕೋಪಕ್ಕೆ ತಿರುಗಿ, ಎದುರಾಳಿ ಗುಂಪೊಂದು ನಾಲ್ವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ, ಕೊಲೆಗೆ ಯತ್ನಿಸಿದೆ.

ಈ ಸಂಬಂಧ ಬೂದಿಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಾನೂನು ಸಂಘರ್ಷಕ್ಕೆ ಒಳಗಾದ ರೋಹಿತ್ (17)ನನ್ನು ಬಾಲ ನ್ಯಾಯಾಂಗ ಮಂಡಳಿಗೆ ಒಪ್ಪಿಸಲಾಗಿದೆ. ಉಳಿದಂತೆ ರಾಜಶೇಖರ್ (23), ಚಂದ್ರಪ್ಪ (60) ಮತ್ತು ವೇಣು (23)ನನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

ಗಾಯಾಳುಗಳಾದ ಮಹೇಶ್, ಯಶವಂತ್, ಪ್ರಶಾಂತ್ ಮತ್ತು ಆಕಾಶ್ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಏನಿದು ಘಟನೆ: ಕೀಲುಕೊಪ್ಪ ಗ್ರಾಮದ ಯಶವಂತ್, ಆಕಾಶ್ ಹಾಗೂ ಪ್ರಶಾಂತ್ ಎಂಬುವರು ಪೇಂಟಿಂಗ್ ಕೆಲಸ ಮುಗಿಸಿ ಶನಿವಾರ ಸಂಜೆ ಗ್ರಾಮದ ಸಮೀಪದ ಬಾರ್ ಒಂದರಲ್ಲಿ ಮದ್ಯಪಾನ ಮಾಡುತ್ತಿದ್ದಾಗ ರೋಹಿತ್ ಮತ್ತು ಆತನ ಸ್ನೇಹಿತರು ಮಹೇಶ್ ಜೊತೆ ಜಗಳ ತೆಗೆದರು. ರಾತ್ರಿ 10.30ರ ಸುಮಾರಿಗೆ ಗ್ರಾಮದಲ್ಲಿ ಮಾರಿಯಮ್ಮ ದೇವಿ ಉತ್ಸವ ನಡೆಯುತ್ತಿದ್ದಾಗಲೂ ಆರೋಪಿಗಳು ಮತ್ತೆ ಗಲಾಟೆಗೆ ಬಂದಿದ್ದರು. ಆಗಲೂ ಹಿರಿಯರು ಬುದ್ಧಿ ಹೇಳಿ ಕಳುಹಿಸಿದ್ದರು. ಆದರೆ, ಯಶವಂತ್ ಮತ್ತು ಮಹೇಶ್ ಮನೆಗೆ ಮರಳುತ್ತಿದ್ದಾಗ ದ್ವಿಚಕ್ರ ವಾಹನದಲ್ಲಿ ಬಂದ ನಾಲ್ವರು, ಯಶವಂತ್ ಮತ್ತುಮಹೇಶ್ ಅವರನ್ನು ಅಡ್ಡಗಟ್ಟಿದರು.

ಅಲ್ಲದೆ, ತಾವು ತಂದಿದ್ದ ಮಚ್ಚಿನಿಂದ ಮಹೇಶ್ ಅವರ ಮೇಲೆ ಹಲ್ಲೆ ಮಾಡಿದ್ದು, ಕಣ್ಣಿನ ಬಳಿ ಗಾಯವಾಗಿದೆ. ಇದನ್ನು ತಡೆಯಲು ಹೋದ ಯಶವಂತ್ ಅವರ ಕೆನ್ನೆಗೂ ಆರೋಪಿಗಳು ಹೊಡೆದಿದ್ದಾರೆ. ಈ ವೇಳೆ ಸ್ಥಳಕ್ಕೆ ಬಂದ ಆಕಾಶ್ ಮತ್ತು ಅಭಿಲಾಷ್ ಅವರ ಮೇಲೂ ಮಚ್ಚಿನಿಂದ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260511-18-1844758333

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.