ಬಂಗಾರಪೇಟೆ: ಪಟ್ಟಣದ ಗಂಗಮ್ಮನಪಾಳ್ಯದ ಚಂದ್ರಾರೆಡ್ಡಿ ಲೇಔಟ್ನಲ್ಲಿರುವ ಖಾಲಿ ಜಾಗದಲ್ಲಿ ಕ್ರಿಕೆಟ್ ಆಡುವ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ಕೋಮುಗಳ ನಡುವೆ ನಡೆದ ಗಲಾಟೆಯಲ್ಲಿ ಮೂವರು ಗಾಯಗೊಂಡಿದ್ದು, ಐವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಗಂಗಮ್ಮನ ಪಾಳ್ಯದ ನಿವಾಸಿಗಳಾದ ಸುನೀಲ್ (33), ವಿನೋದ್ ಕುಮಾರ್ (33), ನವೀನ್ ಕುಮಾರ್ (35), ಸುದೀಪ್ (24) ಹಾಗೂ ಪವನ್ (23) ಬಂಧಿತ ಆರೋಪಿಗಳು. ಇವರನ್ನು ವಿಚಾರಣೆ ನಡೆಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಗಂಗಮ್ಮನಪಾಳ್ಯದ ಚಂದ್ರಾರೆಡ್ಡಿ ಲೇಔಟ್ನಲ್ಲಿರುವ ಕೆಜಿಎಫ್ ಗಾಂಧಿ ಎಂಬುವವರಿಗೆ ಸೇರಿದ ಖಾಲಿ ಜಾಗದಲ್ಲಿ ಸೋಮವಾರ ಸ್ಥಳೀಯ ಯುವಕರು ಕ್ರಿಕ್ರೆಟ್ ಆಡುತ್ತಿದ್ದರು. ಈ ಸಮಯದಲ್ಲಿ ಇದೇ ಜಾಗದಲ್ಲಿ ಯುವಕರ ತಂಡವೊಂದು ಪದೇ ಪದೇ ಬೈಕಿನಲ್ಲಿ ಓಡಾಡುತ್ತಿತ್ತು. ಈ ವೇಳೆ ಎರಡೂ ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದು, ಬಳಿಕ ಅದು ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿತು. ಗಲಾಟೆ ತೀವ್ರಗೊಂಡು ಕ್ರಿಕೆಟ್ ಆಡುತ್ತಿದ್ದ ಯುವಕರು ಬ್ಯಾಟ್ನಿಂದ ಮತ್ತೊಂದು ಗುಂಪಿನ ಯುವಕರ ಮೇಲೆ ಹಲ್ಲೆ ನಡೆಸಿದ್ದಾರೆ.

ಹಲ್ಲೆಗೊಳಗಾದ ಸಿ.ರಹೀಂ ಕಾಂಪೌಂಡ್ ನಿವಾಸಿಗಳಾದ ಟೆಂಪೊ ಚಾಲಕ ಇಮ್ರಾನ್ ಪಾಷಾ (31), ಸೈಯದ್ ಸಮೀರ್ (32) ಮತ್ತು ಸೈಯದ್ ಆರೀಫ್ (28) ಗಾಯಗೊಂಡಿದ್ದು, ಬಂಗಾರಪೇಟೆಯ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಘಟನಾ ಸ್ಥಳದಲ್ಲಿ ಸದ್ಯ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಸೂಕ್ತ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260527-18-1203217877

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.