ಬಂಗಾರಪೇಟೆ: ಒಂದು ಕಾಲದಲ್ಲಿ ಹಸಿನ ಹೊದಿಕೆಯ ನಡುವೆ ಕನ್ನಡಿಯಂತೆ ಹೊಳೆಯುತ್ತಿದ್ದ ಪೋಲೇನಹಳ್ಳಿ ಗ್ರಾಮದ ಚಿನ್ನಯ್ಯನ ಕೆರೆಯು ಸುತ್ತಮುತ್ತಲಿನ ನೂರಾರು ಎಕರೆ ಜಮೀನಿಗೆ ಜಲಮೂಲವಾಗಿತ್ತು. ಆದರೆ, ಇದೀಗ ಭೂಮಾಫಿಯಾದ ಕಪಿಮುಷ್ಠಿಯಲ್ಲಿ ಸಿಲುಕಿದ್ದು, ಉಸಿರುಗಟ್ಟುವ ಪರಿಸ್ಥಿತಿ ನಿರ್ಮಾಣವಾಗಿದೆ.

ತಾಲ್ಲೂಕಿನ ದೋಣಿಮಡಗು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೋಲೇನಹಳ್ಳಿ ಗ್ರಾಮದ ಸರ್ವೆ ನಂಬರ್ 34ರಲ್ಲಿ ಸುಮಾರು 15 ಎಕರೆಗೂ ಅಧಿಕ ವಿಸ್ತೀರ್ಣ ಹೊಂದಿರುವ ಈ ಕೆರೆಯು, ಗ್ರಾಮದ ಪಾಲಿನ ಜೀವನಾಡಿಯಾಗಿತ್ತು. ಆದರೆ, ಕಳೆದ ಕೆಲವು ವರ್ಷಗಳಿಂದ ಈ ಕೆರೆಯ ನೈಸರ್ಗಿಕ ಗಡಿಗಳು ಮಾಯವಾಗುತ್ತಿವೆ. ಪ್ರಭಾವಿ ವ್ಯಕ್ತಿಗಳ ಕಣ್ಣು ಈ ಕೆರೆಯ ಮೇಲೆ ಬಿದ್ದಿದ್ದು, ಹಂತಹಂತವಾಗಿ ಕೆರೆ ಒಡಲನ್ನು ಆಕ್ರಮಿಸಿಕೊಳ್ಳಲಾಗುತ್ತಿದೆ ಎಂಬ ಗಂಭೀರ ಆರೋಪಗಳು ಕೇಳಿಬರುತ್ತಿವೆ.

ಕೆರೆಯ ಪಕ್ಕದ ಜಮೀನಿನ ಮಾಲೀಕರು ತಡೆಗೋಡೆಗಳನ್ನು ನಿರ್ಮಿಸಿಕೊಳ್ಳುವ ಮೂಲಕ ಕೆರೆಯ ವಿಸ್ತೀರ್ಣವನ್ನು ಕುಗ್ಗಿಸುತ್ತಿದ್ದಾರೆ. 15 ಎಕರೆ ವಿಸ್ತೀರ್ಣದಲ್ಲಿದ್ದ ಕೆರೆಯ ಅರ್ಧದಷ್ಟು ಭಾಗ ಅತಿಕ್ರಮಣವಾದಂತೆ ಕಂಡುಬರುತ್ತಿದೆ. ಕೆರೆಗೆ ನೀರು ಹರಿದುಬರುವ ನೈಸರ್ಗಿಕ ಮಾರ್ಗಗಳಾದ ರಾಜಕಾಲುವೆಯನ್ನು ಮುಚ್ಚಿ ಒತ್ತುವರಿ ಮಾಡಿಕೊಳ್ಳಲಾಗಿದೆ. ಇದರಿಂದಾಗಿ ಕೆರೆಯ ಜಲಮೂಲಗಳೇ ಬಂದ್ ಆದಂತೆ ಆಗಿದೆ ಎಂದು ಗ್ರಾಮಸ್ಥರು ದೂರಿದರು.

ಈ ವಿಚಾರದಲ್ಲಿ ಜಿಲ್ಲಾಧಿಕಾರಿ ಮಧ್ಯ ಪ್ರವೇಶ ಮಾಡಿ, ಸರ್ವೆ ನಂಬರ್ 34ರ ಕೆರೆಯ ಜಾಗವನ್ನು ಮತ್ತೆ ಸರ್ವೆ ಮಾಡಿಸಿ, ಗಡಿ ಗುರುತಿಸಬೇಕು. ಅಕ್ರಮವಾಗಿ ಕೆರೆ ಅಂಗಳದಲ್ಲಿ ನಿರ್ಮಿಸಲಾದ ಕಟ್ಟಡ ಅಥವಾ ಕೃಷಿ ಚಟುವಟಿಕೆಗಳನ್ನು ತೆರವುಗೊಳಿಸಬೇಕು. ಕೆರೆಯ ಸುತ್ತ ಫೆನ್ಸಿಂಗ್ ಹಾಕಿ, ಕೆರೆಯ ಜಾಗ ಅತಿಕ್ರಮಣವಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಸರ್ಕಾರದ ಕೆರೆ ಸಂರಕ್ಷಣಾ ಕಾಯ್ದೆಯಡಿ ಕೆರೆಗಳನ್ನು ರಕ್ಷಿಸುವುದು ಜಿಲ್ಲಾಡಳಿತದ ಕರ್ತವ್ಯ. ಪೋಲೇನಹಳ್ಳಿ ಚಿನ್ನಯ್ಯನ ಕೆರೆ ಉಳಿಸಿಕೊಳ್ಳುವುದು ಕೇವಲ ಪರಿಸರದ ದೃಷ್ಟಿಯಿಂದಷ್ಟೇ ಅಲ್ಲದೆ, ಈ ಭಾಗದ ರೈತರ ಭವಿಷ್ಯದ ಪ್ರಶ್ನೆಯೂ ಆಗಿದೆ ಎಂದು ಅನಿವಾಸಿ ಭಾರತೀಯ ವಿನೋದ್ ಕುಮಾರ್ ಹೇಳಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260321-18-1274444199

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.