ಬಂಗಾರಪೇಟೆ: ನಗರದ ಪ್ರಸಿದ್ಧ ಧರ್ಮರಾಯಸ್ವಾಮಿ ದೇವಾಲಯದ ಆವರಣದಲ್ಲಿ ನಿರ್ಮಾಣವಾಗುತ್ತಿರುವ ಸಮುದಾಯ ಭವನಕ್ಕೆ ಸಂಸದರ ಪ್ರಾದೇಶಿಕ ಅಭಿವೃದ್ಧಿ ನಿಧಿಯಿಂದ ಘೋಷಣೆಯಾಗಿದ್ದ ಅನುದಾನದ ಎರಡನೇ ಕಂತಿನ ಚೆಕ್ ಅನ್ನು ಗುರುವಾರ ಸಮುದಾಯದ ಮುಖಂಡರಿಗೆ ಹಸ್ತಾಂತರಿಸಲಾಯಿತು.

ಸಮುದಾಯ ಭವನದ ನಿರ್ಮಾಣಕ್ಕಾಗಿ ಒಟ್ಟು ₹11 ಲಕ್ಷ ಅನುದಾನ ಮಂಜೂರಾಗಿದೆ. ಈ ಯೋಜನೆಯಡಿ ಈಗಾಗಲೇ ಮೊದಲ ಹಂತದಲ್ಲಿ ₹ 1.98 ಲಕ್ಷ ನೀಡಲಾಗಿತ್ತು. 2ನೇ ಹಂತದಲ್ಲಿ ₹ 1 ಲಕ್ಷ ಚೆಕ್ ಅನ್ನು ವಿತರಿಸಲಾಗಿದೆ. ಸಂಸದರ ಪರವಾಗಿ ಶೈಲಜಾ ಮುನಿಸ್ವಾಮಿ ಅವರು ಗುರುವಾರ ದೇವಾಲಯದ ಆವರಣದಲ್ಲಿ ಮುಖಂಡರಿಗೆ ಚೆಕ್ ಅನ್ನು ಅಧಿಕೃತವಾಗಿ ಹಸ್ತಾಂತರಿಸಿದರು.

ಕಪಾಲಿ ಶಂಕರ್, ಬಿಂದು ಮಾಧವ್, ಸಂದೀಪ್, ದೇಶಿಹಳ್ಳಿ ಶ್ರೀನಿವಾಸ್, ಅಂಬರೀಶ್, ಷಣ್ಮುಗಂ, ಕುಮರೇಶನ್, ಜಯರಾಮ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260411-18-679010380

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.