ಬಂಗಾರಪೇಟೆ: ನಕಲಿ ದಾಖಲೆ ಸೃಷ್ಟಿಸಿ ಸರ್ಕಾರಿ ಕೆರೆ ಜಾಗವನ್ನು ತಮ್ಮ ಹೆಸರಿಗೆ ಮಾಡಿಕೊಂಡಿದ್ದ ಖಾಸಗಿ ವ್ಯಕ್ತಿಗಳ ಪಹಣಿ ರದ್ದುಗೊಳಿಸಿ, ಜಮೀನನ್ನು ಸರ್ಕಾರಿ ಕೆರೆ ಎಂದು ಉಪವಿಭಾಗಾಧಿಕಾರಿ ಜಂಬಗಿ ರೇಣುಕಾ ಪ್ರಸಾದ್ ದೀಲಿಪ್ ದಾಖಲಿಸಲು ಸೂಚಿಸಿದ್ದಾರೆ.

ತಾಲ್ಲೂಕಿನ ಕಾಮಸಮುದ್ರ ಹೋಬಳಿಯ ಯಳಚಮಂದೆ ಗ್ರಾಮದಲ್ಲಿ ಕೆಲ ಪ್ರಭಾವಿ ವ್ಯಕ್ತಿಗಳು ನಕಲಿ ದಾಖಲೆ ಸೃಷ್ಟಿಸಿ 16 ಎಕರೆ 16 ಗುಂಟೆ ವಿಸ್ತೀರ್ಣದ ಸರ್ಕಾರಿ ಕೆರೆ ಜಮೀನನ್ನು ತಮ್ಮ ಹೆಸರಿಗೆ ಮಾಡಿಕೊಂಡಿದ್ದರು. ಇದರ ವಿರುದ್ಧ ರೈತ ಸಂಘದ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ನಳಿನಿ ಗೌಡ ಅವರು ಲೋಕಾಯುಕ್ತ ನ್ಯಾಯಾಲಯದಲ್ಲಿ ಸುದೀರ್ಘ ಹೋರಾಟ ನಡೆಸಿದ್ದರು. ಕೆರೆ ಉಳಿಸುವಂತೆ ಅವರು ಸಲ್ಲಿಸಿದ್ದ ದೂರಿನ ಅನ್ವಯ ತನಿಖೆ ಚುರುಕುಗೊಂಡಿತ್ತು. ಪ್ರಕರಣದ ವಿಚಾರಣೆ ನಡೆಸಿದ ತಹಶೀಲ್ದಾರರು, 16 ಎಕರೆ 16 ಗುಂಟೆ ಜಮೀನು ಮೂಲತಃ ಸರ್ಕಾರಿ ಕೆರೆ ಎಂಬುದನ್ನು ದೃಢಪಡಿಸಿದ್ದರು.

ದಾಖಲೆಗಳ ಪರಿಶೀಲನೆಯಲ್ಲಿ ಈ ಕೆರೆ ಜಮೀನಿನಲ್ಲಿ ಮಲ್ಲಿಕಾ ಬೇಗಂ (5 ಎಕರೆ 36 ಗುಂಟೆ), ಆಯಿಷಾ ಸುಲ್ತಾನ (4 ಎಕರೆ) ಮತ್ತು ಮೊಹಮ್ಮದ್ ಅಫ್ರೋಜ್ ಪಾಷ (6 ಎಕರೆ 20 ಗುಂಟೆ) ಎಂಬುವವರ ಹೆಸರಿಗೆ ಅನಧಿಕೃತವಾಗಿ ಪಹಣಿ ನಮೂದಾಗಿರುವುದು ಕಂಡುಬಂದಿತ್ತು. ಇವರಿಗೆ ಜಮೀನು ಮಂಜೂರಾದ ಬಗ್ಗೆ ಯಾವುದೇ ಸರ್ಕಾರಿ ದಾಖಲೆಗಳು ಲಭ್ಯವಿರಲಿಲ್ಲ.

ತಹಶೀಲ್ದಾರರು ನೀಡಿದ ವರದಿಯ ಆಧಾರದ ಮೇಲೆ ಕೆರೆ ಜಮೀನಿನ ಅಕ್ರಮ ಪಹಣಿ ರದ್ದುಗೊಳಿಸಲು ಎಸಿ ಕೋರ್ಟ್ ನಿರ್ಧರಿಸಿತ್ತು. ಭೂ ಕಂದಾಯ ಕಾಯ್ದೆ ನಿಯಮಗಳ ಪ್ರಕಾರ ಕೆರೆ ಅಥವಾ ಸಾರ್ವಜನಿಕ ಜಲಮೂಲಗಳನ್ನು ಯಾವುದೇ ಖಾಸಗಿ ವ್ಯಕ್ತಿಗಳಿಗೆ ಹಂಚಿಕೆ ಮಾಡಲು ಅಥವಾ ಮಂಜೂರು ಮಾಡಲು ಅವಕಾಶವಿಲ್ಲ. ಏಪ್ರಿಲ್ 29 ರಂದು ಹೊರಡಿಸಿದ ಆದೇಶದಲ್ಲಿ, ಅಕ್ರಮ ಪಹಣಿಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ರದ್ದುಗೊಳಿಸಿ, ಕಂದಾಯ ದಾಖಲೆಗಳಲ್ಲಿ ಪುನಃ ಸರ್ಕಾರಿ ಕೆರೆ ಎಂದು ನಮೂದಿಸಲಾಗಿದೆ.

ಕಾಗದದಲ್ಲಿ ಕೆರೆ ಜಮೀನು ಸರ್ಕಾರಕ್ಕೆ ಮರಳಿದೆ. ಆದರೆ, ಸ್ಥಳದಲ್ಲಿ ಇನ್ನೂ ಒತ್ತುವರಿ ಮುಂದುವರಿದಿದೆ. ತಾಲ್ಲೂಕು ಆಡಳಿತ ಕೂಡಲೇ ಕಾರ್ಯಾಚರಣೆ ನಡೆಸಿ ಒತ್ತುವರಿ ತೆರವುಗೊಳಿಸಬೇಕು. ಜೊತೆಗೆ ಬಯೋ-ಫೆನ್ಸಿಂಗ್ ಹಾಕುವ ಮೂಲಕ ಕೆರೆಯನ್ನು ಶಾಶ್ವತವಾಗಿ ಸಂರಕ್ಷಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260507-18-1459391318

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.