ಬಂಗಾರಪೇಟೆ: ಒಂದು ಕಾಲದಲ್ಲಿ ಸಾವಿರಾರು ಎಕರೆ ಕೃಷಿ ಭೂಮಿಗೆ ನೀರು ಹರಿಸುತ್ತಿದ್ದ, ಸಾವಿರಾರು ಜಾನುವಾರುಗಳ ದಾಹ ತಣಿಸುತ್ತಿದ್ದ ಕೇತಗಾನಹಳ್ಳಿ ಗ್ರಾಮದ ದೊಡ್ಡ ಕೆರೆ ಇಂದು ಅನಾಥವಾಗಿದೆ.

ದಶಕಗಳ ಕಾಲ ಈ ಭಾಗದ ರೈತರ ಪಾಲಿನ ಜೀವನಾಡಿಯಾಗಿದ್ದ ಈ ಜಲಮೂಲ, ಇಂದು ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಸಮರ್ಪಕ ನಿರ್ವಹಣೆ ಕೊರತೆಯಿಂದಾಗಿ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳುವ ಭೀತಿಯಲ್ಲಿದೆ.

ತಾಲ್ಲೂಕಿನ ಕಾಮಸಮುದ್ರ ಹೋಬಳಿಯ ಕೇತಗಾನಹಳ್ಳಿ ಗ್ರಾಮದಲ್ಲಿ 46 ಎಕರೆ ಪ್ರದೇಶದಲ್ಲಿರುವ ದೊಡ್ಡ ಕೆರೆಯೂ ಒಂದು ಕಾಲದಲ್ಲಿ ಸುತ್ತಮುತ್ತಲಿನ ಇಪ್ಪತ್ತು ಹಳ್ಳಿಗಳಿಗೆ ಅಂತರ್ಜಲದ ಪ್ರಮುಖ ಗಣಿಯಾಗಿತ್ತು. ಈ ಕೆರೆ ಕಟ್ಟೆ ಒಡೆದು ಹೋಗಿದ್ದು, ಮಳೆಗಾಲದಲ್ಲಿ ಶೇಖರಣೆಯಾಗಬೇಕಾದ ನೀರು ಸರಾಗವಾಗಿ ಹರಿದು ವ್ಯರ್ಥವಾಗುತ್ತಿದೆ. ಹಾಗಾಗಿ ಕೆರೆಯಲ್ಲಿ ಹೂಳು ತುಂಬಿ ಗಿಡಗಂಟಿ ಬೆಳೆದು ನಿಂತಿವೆ.

ಕೆರೆಯ ಒಳಭಾಗದಲ್ಲಿ ಇಂದು ನೀರಿಗಿಂತ ಹೆಚ್ಚಾಗಿ ಜಾಲಿ ಗಿಡ ಹಾಗೂ ಮುಳ್ಳಿನ ಪೊದೆಗಳು ಆವರಿಸಿವೆ. ಇದರಿಂದ ಕೆರೆಯ ಸೌಂದರ್ಯವೂ ನಾಶವಾಗಿದ್ದಲ್ಲದೆ, ಒಳ ವಿಸ್ತೀರ್ಣವನ್ನೂ ನುಂಗಿ ಹಾಕುತ್ತಿದೆ. ವರ್ಷದಿಂದ ವರ್ಷಕ್ಕೆ ಹೂಳು ಮತ್ತು ಗಿಡಗಳ ಪ್ರಮಾಣ ಹೆಚ್ಚಾಗುತ್ತಾ ಕೆರೆಯ ಶೇಖರಣಾ ಸಾಮರ್ಥ್ಯ ಕ್ಷೀಣಿಸುತ್ತಿದೆ. ಒಂದು ಕಾಲದ ವಿಶಾಲವಾದ ಜಲರಾಶಿಯ ಜಾಗದಲ್ಲಿ ಇಂದು ಕೇವಲ ಒಣಗಿದ ಮುಳ್ಳಿನ ಗಿಡಗಳು ಮಾತ್ರ ಕಾಣಿಸುತ್ತಿರುವುದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ.

ಕೆರೆ ಕಟ್ಟೆ ಒಡೆದು 70 ವರ್ಷ ಕಳೆದರೂ ಇನ್ನೂ ದುರಸ್ತಿಯಾಗಿಲ್ಲ. ಹಾಗಾಗಿ ಮಳೆಗಾಲದಲ್ಲಿ ಸಂಗ್ರಹವಾಗಬೇಕಾದ ನೀರು ವ್ಯರ್ಥವಾಗಿ ಹರಿದು ಹೋಗುತ್ತಿದೆ. ಕೆರೆಯಲ್ಲಿ ನೀರು ನಿಲ್ಲದ ಕಾರಣ, ಸುತ್ತಮುತ್ತಲಿನ ಗ್ರಾಮಗಳ ಅಂತರ್ಜಲ ಮಟ್ಟ ಪಾತಾಳಕ್ಕೆ ಕುಸಿದಿದೆ. ಇದರಿಂದಾಗಿ ಈ ಭಾಗದ ರೈತರ ಪಾಲಿನ ಆಸರೆಯಾಗಿದ್ದ ಕೊಳವೆಬಾವಿಗಳು ಸಂಪೂರ್ಣವಾಗಿ ಬತ್ತಿ ಹೋಗುತ್ತಿವೆ. ತೋಟಗಳು ಮತ್ತು ಬೆಳೆಗಳು ನೀರಿನಲ್ಲದೆ ಒಣಗುತ್ತಿವೆ. ಅನಿವಾರ್ಯವಾಗಿ ರೈತರು ಕೃಷಿ ಚಟುವಟಿಕೆಗಳಿಗಾಗಿ ಕೇವಲ ಆಕಾಶ ನೋಡುವಂತಾಗಿದೆ. ಮಳೆಯನ್ನೇ ನಂಬಿ ಬದುಕುವ ದುಸ್ಥಿತಿ ಈ ಭಾಗದಲ್ಲಿ ಎದುರಾಗಿದೆ.

ನಮ್ಮ ಹಿರಿಯರು ಈ ಕೆರೆ ನಂಬಿ ಸಾವಿರಾರು ಎಕರೆ ಭೂಮಿಯಲ್ಲಿ ಬಂಗಾರದ ಬೆಳೆ ಬೆಳೆಯುತ್ತಿದ್ದರು. ಆದರೆ, ಇಂದು ನಮ್ಮ ಕಣ್ಣೆದುರಿಗೆ ನೀರು ಹರಿದು ಹೋದರೂ ಶೇಖರಿಸಲಾಗದ ಸ್ಥಿತಿ ಇದೆ. ಅಧಿಕಾರಿಗಳಿಗೆ ಈ ಬಗ್ಗೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂಬುದು ಕೇತಗಾನಹಳ್ಳಿ ಗ್ರಾಮಸ್ಥರ ಅಳಲಾಗಿದೆ.

ಪ್ರತಿ ಬಾರಿ ಚುನಾವಣೆ ಬಂದಾಗಲೂ ಜನಪ್ರತಿನಿಧಿಗಳು ಕೆರೆ ಅಭಿವೃದ್ಧಿಯ ಭರವಸೆ ನೀಡುತ್ತಾರೆ. ಆದರೆ, ಚುನಾವಣೆ ಮುಗಿದ ಮೇಲೆ ಕೇತಗಾನಹಳ್ಳಿ ಕೆರೆಯತ್ತ ಯಾರೂ ಮುಖ ಮಾಡುವುದಿಲ್ಲ. ಅಧಿಕಾರಿಗಳ ಈ ನಿರ್ಲಕ್ಷ್ಯದಿಂದಾಗಿ ಒಂದು ಕಾಲದಲ್ಲಿ ಸಮೃದ್ಧವಾಗಿದ್ದ ಜಲಮೂಲ ಇಂದು ಅನಾಥವಾಗಿದೆ. ಹೀಗೆಯೇ ಮುಂದುವರಿದರೆ ಕೇತಗಾನಹಳ್ಳಿ ಮಾತ್ರವಲ್ಲದೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕುಡಿಯುವ ನೀರಿಗೂ ಹಾಹಾಕಾರ ಉಂಟಾಗುವ ಸಾಧ್ಯತೆ ಇದೆ. ಕೆರೆಯ ಅಸ್ತಿತ್ವ ಅಳಿಸಿಹೋದರೆ ಈ ಭಾಗದ ಕೃಷಿ ಚಟುವಟಿಕೆಗಳು ಸಂಪೂರ್ಣ ಸ್ಥಗಿತಗೊಳ್ಳಲಿವೆ. ಈ ನಿಟ್ಟಿನಲ್ಲಿ ಸರ್ಕಾರ ಮತ್ತು ಜಿಲ್ಲಾಡಳಿತ ಕೂಡಲೇ ಎಚ್ಚೆತ್ತು ವಿಶೇಷ ಅನುದಾನದಡಿ ಕೇತಗಾನಹಳ್ಳಿ ದೊಡ್ಡ ಕೆರೆಯ ಕಟ್ಟೆ ದುರಸ್ತಿಗೊಳಿಸಿ, ಹೂಳು ತೆಗೆಸುವ ಕೆಲಸ ಮಾಡಬೇಕೆಂದು ಸ್ಥಳೀಯರ ಒತ್ತಾಯಿಸಿದರು.

ಮುಂದಿನ ಪೀಳಿಗೆಗೆ ಕೆರೆ ಇತಿಹಾಸವಾಗಲಿದೆ

ನಮ್ಮ ಕೆರೆಗೆ ಈಗ ಕಟ್ಟೆಯಿಲ್ಲ. ಹೂಳು ತೆಗೆಯದ ಕಾರಣ ಹೊಟ್ಟೆಯೂ ಇಲ್ಲ. ಸ್ವಲ್ಪ ಮಳೆ ಬಂದರೂ ಒಡೆದ ಜಾಗದಿಂದ ನೀರು ಹೊರಹೋಗುತ್ತಿದೆ. ಹಾಗಾಗಿ ಸರ್ಕಾರ ತಕ್ಷಣವೇ ಎಚ್ಚೆತ್ತು ಕೆರೆಯ ಕಟ್ಟೆಯನ್ನು ಕಟ್ಟಬೇಕು. ಇಲ್ಲದಿದ್ದರೆ ಮುಂದಿನ ಪೀಳಿಗೆಗೆ ಈ ಕೆರೆ ಕೇವಲ ಇತಿಹಾಸವಾಗಲಿದೆ.

–ಪಿಚ್ಚಹಳ್ಳಿ ಗೋವಿಂದರಾಜಲು, ಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ

ಕುಡಿಯುವ ನೀರು ಸಿಗುವುದಿಲ್ಲ

ನಮ್ಮ ಹಿರಿಯರ ಕಾಲದಲ್ಲಿ ಈ ಕೆರೆ ತುಂಬಿ ಕೋಡಿ ಬಿದ್ದರೆ ಇಡೀ ಗ್ರಾಮವೇ ಸಂಭ್ರಮಿಸುತ್ತಿತ್ತು. ಆದರೆ, ಇಂದು ಕಟ್ಟೆ ಒಡೆದು ಹನಿ ನೀರು ನಿಲ್ಲುತ್ತಿಲ್ಲ. ಸರ್ಕಾರ ಕೂಡಲೇ ಎಚ್ಚೆತ್ತು ಕೆರೆ ದುರಸ್ತಿ ಮಾಡದಿದ್ದರೆ ಮುಂದಿನ ದಿನಗಳಲ್ಲಿ ನಮಗೆ ಕುಡಿಯುವ ನೀರೂ ಸಿಗುವುದಿಲ್ಲ.

–ರವಿ ಕುಮಾರ್, ಕೇತಗಾನಗಳ್ಳಿ ರೈತ

ದುರಸ್ತಿ ಮಾಡಿದ್ದರೆ ಭೂಮಿ ತಣ್ಣಗಿರುತ್ತಿತ್ತು

ಮಳೆ ಸುರಿದಾಗ ಈ ಬಾರಿ ನಮ್ಮ ಕೆರೆ ತುಂಬುತ್ತದೆ ಎಂಬ ಆಸೆ ಚಿಗುರುತ್ತದೆ. ಆದರೆ, ಕೆರೆಗೆ ಬಂದ ನೀರು ನಿಲ್ಲದೆ ಹರಿದು ಹೋಗುವುದನ್ನು ನೋಡಿದಾಗ ಎದೆ ಚುರುಕ್ ಎನ್ನುತ್ತದೆ. ಒಂದು ಸಣ್ಣ ದುರಸ್ತಿ ಕಾರ್ಯ ನಡೆದಿದ್ದರೆ ಇಂದು ಸಾವಿರಾರು ಎಕರೆ ಭೂಮಿಗೆ ನೀರು ಹರಿಯುತ್ತಿತ್ತು. ನಮ್ಮ ತೋಟಗಳು ಒಣಗುತ್ತಿವೆ, ಬಾವಿಗಳು ಬತ್ತುತ್ತಿವೆ. ಹರಿಯುವ ನೀರನ್ನು ಹಿಡಿದಿಡುವ ಶಕ್ತಿ ನಮಗಿಲ್ಲ, ಮಾಡುವ ಮನಸ್ಸು ಸರ್ಕಾರಕ್ಕಿಲ್ಲ.

–ಮಂಜುಳ ಶ್ರೀನಿವಾಸ್, ಮಾಜಿ ಗ್ರಾ.ಪಂ.ಅಧ್ಯಕ್ಷೆ ಕೇತಗಾನಹಳ್ಳಿ

ಜಲಮೂಲಕ್ಕೆ ಮರುಜೀವ ನೀಡಿ

ಅಧಿಕಾರಿಗಳ ಪಾಲಿಗೆ ಇದು ಕೇವಲ ಒಂದು ದುರಸ್ತಿ ಕೆಲಸ. ಆದರೆ, ಕೇತಗಾನಹಳ್ಳಿ ಗ್ರಾಮ ಪಂಚಾಯಿತಿ ರೈತರಿಗೆ ಇದು ಅವರ ಮುಂದಿನ ಪೀಳಿಗೆಯ ಭವಿಷ್ಯ. ಸರ್ಕಾರ ಈಗಲಾದರೂ ಎಚ್ಚೆತ್ತು ಈ ಜಲಮೂಲಕ್ಕೆ ಮರುಜೀವ ನೀಡದಿದ್ದರೆ, ಹಸಿರು ಹೊದಿಕೆಯ ಈ ಪ್ರದೇಶವು ಮರಳುಗಾಡಾಗಿ ಪರಿಣಮಿಸುವುದರಲ್ಲಿ ಸಂಶಯವಿಲ್ಲ.

–ನರಸಿಂಹಮೂರ್ತಿ, ರಾಜ್ಯಾಧ್ಯಕ್ಷ, ಜೈ ಭುವನೇಶ್ವರಿ ಕರುನಾಡು ಸೇನೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.