ಬಂಗಾರಪೇಟೆ: ತಾಲ್ಲೂಕಿನಲ್ಲಿ ಕಳೆದ ಎರಡು ತಿಂಗಳಿಂದ ಪರವಾನಗಿ ಭೂಮಾಪಕರು ವಿವಿಧ ಬೇಡಿಕೆ ಈಡೇರಿಕೆಗಾಗಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರವು ಸಾರ್ವಜನಿಕರ ನಿದ್ದೆಗೆಡಿಸಿದೆ. ಭೂಮಾಪನ ಇಲಾಖೆಯ ಸೇವೆಗಳು ಸಂಪೂರ್ಣ ಸ್ಥಗಿತಗೊಂಡಿದ್ದು, ಜಮೀನು ವ್ಯವಹಾರ ಹಾಗೂ ಸರ್ಕಾರಿ ಕೆಲಸಗಳಿಗಾಗಿ ರೈತರು ನಿತ್ಯ ಕಚೇರಿಗೆ ಅಲೆಯುವಂತಾಗಿದೆ.

ತಾಲ್ಲೂಕಿನಲ್ಲಿ ಒಟ್ಟು 15 ಮಂದಿ ಪರವಾನಗಿ ಭೂಮಾಪಕರಿದ್ದು, ಇವರೆಲ್ಲರೂ ಕರ್ತವ್ಯಕ್ಕೆ ಹಾಜರಾಗದ ಹಿನ್ನೆಲೆ ಸಾವಿರಾರು ಅರ್ಜಿಗಳು ವಿಲೇವಾರಿಯಾಗದೆ ಕಚೇರಿಯ ಕಪಾಟು ಸೇರಿವೆ. 11ಇ ಸ್ಕೆಚ್ 434 ಅರ್ಜಿಗಳು, ತತ್ಕಾಲ್ ಪೋಡಿ 434, ಹದ್ದುಬಸ್ತು 539, ದರಖಾಸ್ತು 288, ಇತರೆ ಕೆಲಸಗಳು 20 ಅರ್ಜಿಗಳು ಬಾಕಿ ಇವೆ ಎಂದು ಭೂಮಾಪನ ಇಲಾಖೆಯ ಮೇಲ್ವಿಚಾರಕ ನಾಗಾರ್ಜುನ್ ಅವರು ಮಾಹಿತಿ ನೀಡಿದ್ದಾರೆ.

ಜಮೀನು ಖರೀದಿ, ನಿವೇಶನ ಮಾರಾಟ ಅಥವಾ ಪಿತ್ರಾರ್ಜಿತ ಆಸ್ತಿ ಹಂಚಿಕೆ ಮಾಡಿಕೊಳ್ಳಲು ಭೂಮಾಪನ ಇಲಾಖೆಯ ನಕ್ಷೆ ಮತ್ತು ಹದ್ದುಬಸ್ತು ಅತ್ಯಗತ್ಯ. ಆದರೆ, ಎರಡು ತಿಂಗಳಿಂದ ಸರ್ವೆ ಕಾರ್ಯ ನಡೆಯದ ಹಿನ್ನೆಲೆ ನೋಂದಣಿ ಪ್ರಕ್ರಿಯೆಗಳು ಕುಂಠಿತಗೊಂಡಿವೆ. ಇದರಿಂದಾಗಿ ಬ್ಯಾಂಕ್ ಸಾಲ ಪಡೆಯಲು ಇಚ್ಛಿಸುವವರಿಗೆ ಹಾಗೂ ತುರ್ತು ಆರ್ಥಿಕ ಅಗತ್ಯತೆ ಇರುವವರಿಗೆ ಭಾರೀ ಹೊಡೆತ ಬಿದ್ದಿದೆ.

ಪರವಾನಗಿ ಭೂಮಾಪಕರು ಮುಷ್ಕರದಲ್ಲಿ ತೊಡಗಿರುವುದರಿಂದ ತಾಂತ್ರಿಕ ಕೆಲಸಗಳು ವಿಳಂಬವಾಗುತ್ತಿವೆ. ಸದ್ಯಕ್ಕೆ 1,700ಕ್ಕೂ ಅಧಿಕ ಅರ್ಜಿಗಳು ವಿಲೇವಾರಿಯಾಗದೆ ಬಾಕಿ ಇವೆ ಎಂದು ತಿಳಿಸಿದರು.

ಅರ್ಜಿ ಸಲ್ಲಿಸಿ ತಿಂಗಳುಗಳೇ ಕಳೆದರೂ ಯಾವುದೇ ಪ್ರಗತಿಯಾಗಿಲ್ಲ. ಅಧಿಕಾರಿಗಳನ್ನು ಕೇಳಿದರೆ ಮುಷ್ಕರದ ನೆಪ ಹೇಳುತ್ತಾರೆ. ಸರ್ಕಾರ ಮತ್ತು ಭೂಮಾಪಕರ ನಡುವಿನ ಸಂಘರ್ಷದಲ್ಲಿ ಸಾಮಾನ್ಯ ಜನರು ಬಲಿಯಾಗುತ್ತಿದ್ದಾರೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪೋಡಿ, ಹದ್ದುಬಸ್ತು ಮತ್ತು ದಾರಿ ನಕ್ಷೆಯಂತಹ ಮೂಲಭೂತ ಕೆಲಸಗಳಿಲ್ಲದೆ ಗ್ರಾಮೀಣ ಭಾಗದ ಜನರು ಕಚೇರಿಗೆ ಅಲೆಯುವಂತಾಗಿದೆ. ಮುಷ್ಕರ ಇನ್ನೂ ಮುಂದುವರಿದರೆ ಬಾಕಿ ಅರ್ಜಿಗಳ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಭೀತಿ ಎದುರಾಗಿದೆ.

ಕಚೇರಿಗೆ ಅಲೆಯುವುದೇ ಕೆಲಸವಾಗಿದೆ

ಹಳ್ಳಿಯಿಂದ ದಿನವೂ ಬಸ್ ಚಾರ್ಜ್ ಹಾಕಿಕೊಂಡು ತಾಲ್ಲೂಕು ಕಚೇರಿಗೆ ಬರುತ್ತೇವೆ. ಇಲ್ಲಿಗೆ ಬಂದರೆ ಯಾರೂ ಸರಿಯಾದ ಮಾಹಿತಿ ನೀಡುತ್ತಿಲ್ಲ. ಬರಿಗೈಲಿ ವಾಪಸ್ ಹೋಗುವುದು ಅನಿವಾರ್ಯವಾಗಿದೆ. ಬಡವರಿಗೆ ಕಚೇರಿಗೆ ಅಲೆದಾಡುವುದೇ ದೊಡ್ಡ ಹೊರೆಯಾಗಿದೆ.

ನಾಗಪ್ಪ, ತಳೂರು

ಜಮೀನು ಖರೀದಿ, ಮಾರಾಟ ಸ್ಥಗಿತ

ಮಗಳ ಮದುವೆ ಹಾಗೂ ತುರ್ತು ಚಿಕಿತ್ಸೆಗಾಗಿ ಜಮೀನು ಮಾರಾಟ ಮಾಡಲು ಹೋದರೆ ಹದ್ದುಬಸ್ತು ಮತ್ತು ನಕ್ಷೆ ಕಡ್ಡಾಯವಾಗಿಬೇಕು. ಈಗ ಸರ್ವೆ ಕೆಲಸಗಳು ನಡೆಯದ ಹಿನ್ನೆಲೆ ಖರೀದಿ-ಮಾರಾಟ ಸ್ಥಗಿತಗೊಂಡಿದೆ. ಸರ್ಕಾರ ಕೂಡಲೇ ಭೂಮಾಪಕರ ಬೇಡಿಕೆ ಈಡೇರಿಸಿ ಕೆಲಸ ಆರಂಭಿಸುವಂತೆ ಮಾಡಬೇಕು.

ನಾರಾಯಣಸ್ವಾಮಿ, ಸ್ಥಳೀಯ

ಮುಷ್ಕರದಿಂದ ರೈತರ ಬದುಕು ಬೀದಿಗೆ

ಮಳೆಗಾಲ ಆರಂಭವಾಗುವ ಮುನ್ನ ಕೃಷಿ ಚಟುವಟಿಕೆಗಳಿಗೆ ಹಣದ ಅಗತ್ಯವಿದೆ. ಜಮೀನು ಅಡಮಾನವಿಟ್ಟು ಬ್ಯಾಂಕ್ ಸಾಲ ಪಡೆಯಲು ಹೋದರೆ 11ಇ ಸ್ಕೆಚ್ ಇಲ್ಲದೆ ಸಾಲ ನೀಡುತ್ತಿಲ್ಲ. ಎರಡು ತಿಂಗಳಿಂದ ಅರ್ಜಿ ಹಾಕಿ ಕಾಯುತ್ತಿದ್ದೇವೆ, ಮುಷ್ಕರದಿಂದ ನಮ್ಮ ಬದುಕು ಬೀದಿಗೆ ಬಂದಂತಾಗಿದೆ.

ಮುನಿವೆಂಕಟಪ್ಪ, ರೈತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.