ಬೇತಮಂಗಲ: ಐತಿಹಾಸಿಕ ಹಿನ್ನೆಲೆಯುಳ್ಳ ಬೇತಮಂಗಲ ದ್ರೌಪತಾಂಭ ಸಮೇತ ಧರ್ಮರಾಯಸ್ವಾಮಿ 116ನೇ ವರ್ಷದ ಕರಗ ಮಹೋತ್ಸವ ಶನಿವಾರ ರಾತ್ರಿ ಅತ್ಯಂತ ವಿಜೃಂಭಣೆಯಿಂದ ನೆರವೇರಿತು. ಕರಗ ಪೂಜಾರಿ ಕೃಷ್ಣಮೂರ್ತಿ ಸತತ 24 ಗಂಟೆ ಕರಗ ಹೊತ್ತು ಸಾಗಿ ಅಗ್ನಿ ಕುಂಡ ಪ್ರವೇಶಿಸಿದರು. ಶುಕ್ರವಾರ ರಾತ್ರಿ ಆರಂಭವಾದ ಕರಗ ಸಂಚಾರ ಶನಿವಾರ ರಾತ್ರಿ 11ಗಂಟೆವರೆಗೂ ಮುಂದುವರಿಯಿತು.

ಕರಗ ಬೇತಮಂಗಲ ಗ್ರಾಮದ ಹಳೆ ಬಡಾವಣೆ ಮತ್ತು ಹೊಸ ಬಡಾವಣೆ ಪ್ರತಿಯೊಂದು ಬೀದಿಗಳಲ್ಲಿ ಸಂಚರಿಸಿತು. ದಾರಿಯುದ್ದಕ್ಕೂ ಭಕ್ತಾದಿಗಳು ಪೂಜೆ ಸಲ್ಲಿಸಿ, ಹಣ್ಣು-ಕಾಯಿ ಅರ್ಪಿಸಿ ದೇವಿ ಕೃಪೆಗೆ ಪಾತ್ರರಾದರು.

ವಹ್ನಿಕುಲದ ವೀರಕುಮಾರರು ಸಾಂಪ್ರದಾಯಿಕ ಶಸ್ತ್ರಗಳೊಂದಿಗೆ ಪೂಜೆ ಸಲ್ಲಿಸಿ ಕರಗಕ್ಕೆ ಸಾಥ್ ನೀಡಿದರು. ಈ ಅದ್ಭುತ ಕ್ಷಣಗಳನ್ನು ಕಣ್ಣಾರೆ ವೀಕ್ಷಿಸಲು ವಿವಿಧ ಜಿಲ್ಲೆ ಹಾಗೂ ನೆರೆಯ ರಾಜ್ಯಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ಅಗ್ನಿಕುಂಡ ಪ್ರವೇಶದ ವೇಳೆ ಭಕ್ತರ ಹರ್ಷೋದ್ಗಾರ ಮುಗಿಲು ಮುಟ್ಟಿತ್ತು. ಬೇತಮಂಗಲ ಪೊಲೀಸ್ ಇಲಾಖೆ ಮತ್ತು ಗ್ರಾಮಸ್ಥರು ಯಾವುದೇ ಅಹಿತಕರ ಘಟನೆ ನಡೆಯದಂತೆ ವ್ಯವಸ್ಥಿತವಾಗಿ ಉತ್ಸವವನ್ನು ಯಶಸ್ವಿಗೊಳಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260330-18-1198812285

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.