ಬೇತಮಂಗಲ: ಇಲ್ಲಿನ ಪ್ರಸಿದ್ಧ ಕರಗ ಮಹೋತ್ಸವವು ಭಕ್ತಿ ಮತ್ತು ಸಡಗರದೊಂದಿಗೆ ಜರುಗಿತು. ಹಲವು ದಿನಗಳಿಂದ ನಡೆಯುತ್ತಿದ್ದ ಈ ಧಾರ್ಮಿಕ ಉತ್ಸವಕ್ಕೆ ಸೋಮವಾರ ನಡೆದ ವಸಂತೋತ್ಸವದೊಂದಿಗೆ ವಿದ್ಯುಕ್ತ ತೆರೆ ಕಂಡಿತು.

ಸೋಮವಾರ ಸಂಜೆ 4 ಕ್ಕೆ ನಡೆದ ಒನಕೆ ಕರಗ ಮಹೋತ್ಸವ ಪ್ರಮುಖ ಆಕರ್ಷಣೆಯಾಗಿತ್ತು. ಕರಗ ಪೂಜಾರಿ ಕೃಷ್ಣಮೂರ್ತಿ ಅವರು ತಲೆಯ ಮೇಲೆ ಒನಕೆ ಹೊತ್ತು, ತಮಟೆ ಮತ್ತು ಮೇಳಗಳ ಶಬ್ದಕ್ಕೆ ಅದ್ಭುತವಾಗಿ ನೃತ್ಯ ಪ್ರದರ್ಶಿಸಿದರು.

ಭಾನುವಾರ ರಾತ್ರಿ ಪೋತಲರಾಜು ಗಾವು ಸೇವೆ ಅದ್ದೂರಿಯಾಗಿ ನಡೆಯಿತು. ಗಾವು ಸೇವೆ ವೀಕ್ಷಿಸಲು ಸುತ್ತಮುತ್ತಲ ಗ್ರಾಮಗಳಿಂದ ಸಾವಿರಾರು ಭಕ್ತರು ಆಗಮಿಸಿದ್ದರು.

ಧ್ವಜಾರೋಹಣ ಮೂಲಕ ಚಾಲನೆಗೊಂಡ ಕರಗ, ಹಸಿ ಕರಗ, ದೀಪೋತ್ಸವ ಹಾಗೂ ವಸಂತೋತ್ಸವದೊಂದಿಗೆ ವಿದ್ಯುಕ್ತ ತೆರೆ ಕಂಡಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260331-18-1734397346

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.