ಬೇತಮಂಗಲ: ಕಳೆದ ಎರಡು ದಿನಗಳಿಂದ ಬೇತಮಂಗಲ ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ಸಾಧಾರಣ ಮಳೆಯಾಗಿದ್ದು, ಭಾನುವಾರ ತಡರಾತ್ರಿ ಸುರಿದ ಸಾಧಾರಣ ಮಳೆಯಿಂದಾಗಿ ಇಡೀ ರಾತ್ರಿ ವಾತಾವರಣ ತಂಪಾಗಿದೆ.

ಸೋಮವಾರ ಸಂಜೆ ಕೂಡ ಮಳೆ ಸುರಿದಿದ್ದು, ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ಸಾರ್ವಜನಿಕರು ಹಾಗೂ ದ್ವಿಚಕ್ರ ವಾಹನ ಸವಾರರು ಕೆಲಕಾಲ ಮಳೆಯಲ್ಲಿ ನೆನೆಯಬೇಕಾಯಿತು.

ಸಾಧಾರಣ ಮಳೆಯು ಕೃಷಿ ಚಟುವಟಿಕೆಗಳಿಗೆ ಪೂರಕವಾಗಿದ್ದು, ಮುಖ್ಯವಾಗಿ ಮಾವು ಮತ್ತು ಟೊಮೆಟೊ ಬೆಳೆಗಾರರಲ್ಲಿ ಆಶಾವಾದ ಮೂಡಿಸಿದೆ. ಧೂಳಿನಿಂದ ಕೂಡಿದ್ದ ರಸ್ತೆಗಳು ಮಳೆಯಿಂದಾಗಿ ಸ್ವಚ್ಛಗೊಂಡಿದೆ. ಒಟ್ಟಾರೆ ಪರಿಸರದಲ್ಲಿ ತಂಪಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260505-18-352692490

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.