ಕೋಲಾರ: ರಾಜ್ಯದ ಇತಿಹಾಸದಲ್ಲೇ ಇಂತಹ ಭ್ರಷ್ಟ ಸರ್ಕಾರ ಮತ್ತೊಂದಿಲ್ಲ. ಆದರೂ ಮೂರು ವರ್ಷಗಳ ಸಾಧನಾ ಸಮಾವೇಶಕ್ಕೆ ಮುಂದಾಗಿರುವುದು ನಾಚಿಕೆಗೇಡಿನ ಸಂಗತಿ. ರಾಜ್ಯದಲ್ಲಿ ನಾಳೆಯೇ ಚುನಾವಣೆ ನಡೆದರೂ ಎನ್ಡಿಎ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ಮಾಜಿ ಸಂಸದ ಎಸ್.ಮುನಿಸ್ವಾಮಿ ತಿಳಿಸಿದರು.

ನಗರ ಹೊರವಲಯದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜ್ಯದಲ್ಲಿ ಕಳೆದ ಮೂರು ವರ್ಷಗಳಲ್ಲಿ ಯಾವುದೇ ರೀತಿಯ ಅಭಿವೃದ್ಧಿ ಕೆಲಸ ನಡೆದಿಲ್ಲ. ಇವರು ಸರ್ಕಾರ ನಡೆಯಲು ನಾಲಾಯಕ್. ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು’ ಎಂದು ಆಗ್ರಹಿಸಿದರು.

ಲೆಕ್ಕವಿಲ್ಲದಷ್ಟು ಭ್ರಷ್ಟಾಚಾರ ಪ್ರಕರಣಗಳು ನಡೆದಿದ್ದು ಅನೇಕ ಶಾಸಕರು, ಸಚಿವರು ಜೈಲಿಗೆ ಹೋಗಿದ್ದಾರೆ, ಇನ್ನು ಕೆಲವರು ಜಾಮೀನು ಮೇಲೆ ಹೊರಗಿದ್ದಾರೆ. ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ₹80 ಕೋಟಿ ಹಗರಣ ಒಪ್ಪಿಕೊಂಡ ಸಿದ್ದರಾಮಯ್ಯ ರಾಜೀನಾಮೆ ನೀಡದೆ ನಾಚಿಕೆಯಿಲ್ಲದೆ ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರಿಯುತ್ತಿದ್ದಾರೆ. ‘ಮುಡಾ’ದಲ್ಲಿಯೂ ಇದೇ ರೀತಿ ಸತ್ಯಾಂಶ ಹೊರಬಿದ್ದು ನಿವೇಶನಗಳನ್ನು ವಾಪಸ್ಸು ನೀಡಿ ತಮ್ಮ ಸ್ಥಾನ ದುರುಪಯೋಗಪಡಿಸಿಕೊಂಡಿದ್ದರು ಎಂದು ಟೀಕಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಗೃಹಲಕ್ಷ್ಮಿ ಯೋಜನೆಯ ಸಂಬಂಧ ಸಾವಿರಾರು ಕೋಟಿ ಹಣ ದುರುಪಯೋಗ ಮಾಡಿದ್ದು ಸದನದಲ್ಲಿ ಉತ್ತರ ನೀಡದೆ ಪರಾರಿ ಯಾಗಿದ್ದರು. ಸರ್ಕಾರಿ ನೌಕರರಿಗೆ ಸರಿಯಾದ ಸಮಯಕ್ಕೆ ವೇತನ ಸಿಗುತ್ತಿಲ್ಲ. ಅಂಗನವಾಡಿ ಕಾರ್ಯಕರ್ತೆಯರಿಗೆ 6 ತಿಂಗಳಿಂದ ವೇತನವಿಲ್ಲ. ಕೇಂದ್ರದ ಯೋಜನೆಗಳಿಗೂ ₹100ರಿಂದ 200 ಕೋಟಿ ಅನುದಾನದ ಪಾಲು ನೀಡದ ಮಟ್ಟಕ್ಕೆ ಸರ್ಕಾರ ದಿವಾಳಿಯಾಗಿದೆ. ಜಲಜೀವನ ಮಿಷನ್ ಕಾಮಗಾರಿ ಅರ್ಧಂಬರ್ಧ ಆಗಿದೆ ಎಂದರು.

ಎತ್ತಿನಹೊಳೆ ಯೋಜನೆ ಕೋಲಾರ, ಚಿಕ್ಕಬಳ್ಳಾಪುರಕ್ಕೆ ಎಂದು ರೂಪಿಸಿ ಮತ ಬ್ಯಾಂಕ್ಗಾಗಿ ಬೇರೆ ಬೇರೆ ಭಾಗಗಳ ಹೆಸರು ಸೇರ್ಪಡೆ ಮಾಡಿದರು. ಕೆ.ಸಿ ವ್ಯಾಲಿ ಯೋಜನೆಯ 3ನೇ ಹಂತದ ಶುದ್ಧೀಕರಣ ಮೂಲೆ ಗುಂಪಾಗಿದೆ. ಸರ್ಕಾರಿ ವೈದ್ಯಕೀಯ ಕಾಲೇಜು ಬಾರಲೇ ಇಲ್ಲ ಎಂದರು.

₹7.5 ಲಕ್ಷ ಕೋಟಿ ಸಾಲವಿದ್ದು ಪ್ರತಿಯೊಬ್ಬರ ಮೇಲೆ ಸಾಲ ಹೊರಿಸಿರುವ ರಾಜ್ಯ ಸರ್ಕಾರದವರು, ಬಾಗಲಕೋಟೆ, ದಾವಣಗೆರೆ ದಕ್ಷಿಣ ಉಪಚುನಾವಣೆಯಲ್ಲೂ ಹಣದ ಹೊಳೆಯನ್ನೇ ಹರಿಸಿ ಗೆದ್ದಿದ್ದಾರೆ. ಹೀಗಾಗಿ, ಅವರು ಒಂದೇ ಒಂದು ದಿನವೂ ಅಧಿಕಾರದಲ್ಲಿದ್ದು, ಸರ್ಕಾರ ನಡೆಸಲು ನಾಲಾಯಕ್ ಎಂದು ಕಿಡಿಕಾರಿದರು.

ಹಿಂದೂಗಳ ಮೆರವಣಿಗೆ ಮೇಲೆ ಮದರಸಾ ಮೇಲೆ ನಿಂತು ಕಲ್ಲು ಹೊಡೆಯುವ ಮಕ್ಕಳು ಯಾರು? ಇತ್ತೀಚೆಗೆ ರೈಲು ನಿಲ್ದಾಣದಲ್ಲಿ ಸಿಕ್ಕ ಮಕ್ಕಳನ್ನು ಸಚಿವ ಜಮೀರ್ ಅಹಮದ್ ಮೂರು ಬಸ್ ಕಳಿಸಿ ಕರೆದುಕೊಂಡು ಹೋಗುತ್ತಾರೆ. ಅವರೆಲ್ಲರೂ ಜಮೀರ್ ಮಕ್ಕಳೇ? ಪ್ರಕರಣ ದಾಖಲಿಸಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಓಂಶಕ್ತಿ ಚಲಪತಿ ಮಾತನಾಡಿ, ‘ಮೂರು ವರ್ಷಗಳ ಸಾಧನಾ ಸಮಾವೇಶಕ್ಕೆ ಮುಂದಾಗಿರುವ ಕಾಂಗ್ರೆಸ್ ಸರ್ಕಾರದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ನಾ ಕೊಡೆ ನೀ ಬಿಡೆ ಎಂದು ಹಗ್ಗಜಗ್ಗಾಟ ನಡೆಯುತ್ತಿದೆ. ರೈತರ ಆತ್ಮಹತ್ಯೆಯಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ’ ಎಂದು ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ವಿಜಯ್ ಕುಮಾರ್, ಕೃಷ್ಣಮೂರ್ತಿ, ಸಾ.ಮಾ.ಅನಿಲ್, ಎನ್.ಎಸ್.ಪ್ರವೀಣ್ ಗೌಡ, ತಿಮ್ಮರಾಯಪ್ಪ, ಅಪ್ಪಿ ನಾರಾಯಣಸ್ವಾಮಿ, ಬಾಲಾಜಿ, ಸುರೇಶ್, ಸುಧಾಕರ್, ಗೋವಿಂದ್, ಅಂಬರೀಶ್, ವೆಂಕಟೇಶ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260520-18-1685973176

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.