ಕೋಲಾರ: ಈ ತಿಂಗಳೊಳಗೆ ರಾಜ್ಯ ಸಚಿವ ಸಂಪುಟ ವಿಸ್ತರಣೆಯಾಗುವ ನಿರೀಕ್ಷೆ ಇದ್ದು, ಸುಮಾರು 15 ಸಚಿವರನ್ನು ಕೈಬಿಟ್ಟು ಹೊಸಬರಿಗೆ ಅವಕಾಶ ಕಲ್ಪಿಸುವ ಭರವಸೆ ಇದೆ. ಕೋಲಾರ ಜಿಲ್ಲೆಗೂ ಸಚಿವ ಸ್ಥಾನ ಕಲ್ಪಿಸಬೇಕೆಂದು ಮನವಿ ಮಾಡಿದ್ದೇವೆ. ಪಕ್ಷದ ವರಿಷ್ಠರು ಸಕಾರಾತ್ಮವಾಗಿ ಸ್ಪಂದಿಸಿದ್ದಾರೆ ಎಂದು ಬಂಗಾರಪೇಟೆ ಕಾಂಗ್ರೆಸ್ ಶಾಸಕ ಎಸ್.ಎನ್.ನಾರಾಯಣಸ್ವಾಮಿ ತಿಳಿಸಿದರು.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ರಾಜ್ಯ ಸರ್ಕಾರ ಎರಡೂವರೆ ವರ್ಷ ಪೂರೈಸಿದ ನಂತರ ಸಚಿವ ಸಂಪುಟ ವಿಸ್ತರಣೆ ಮಾಡುವುದಾಗಿ ಪಕ್ಷದ ವರಿಷ್ಠರು ಹೇಳಿದ್ದರು. ಈಗ ಮೂರು ವರ್ಷಗಳು ಮುಗಿದಿದ್ದು, ಈ ತಿಂಗಳೊಳಗೆ ಆ ಪ್ರಕ್ರಿಯೆ ನಡೆಯುವ ನಿರೀಕ್ಷೆ ಇದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಪ್ರಧಾನ ಕಾರ್ಯದರ್ಶಿಗಳಾದ ವೇಣುಗೋಪಾಲ್ ಹಾಗೂ ಸುರ್ಜೇವಾಲಾ ಅವರನ್ನು ಭೇಟಿ ಮಾಡಿ ಈ ಸಂಬಂಧ ಚರ್ಚಿಸಲಿದ್ದಾರೆ. ನಾವು ದೆಹಲಿಗೆ ಮೇ 29ರ ನಂತರ ಹೋಗುತ್ತೇವೆ’ ಎಂದರು.

ರಾಜ್ಯದಲ್ಲಿ ಅಭಿವೃದ್ಧಿಯೇ ನಡೆದಿಲ್ಲ ಎಂಬ ಬಿಜೆಪಿ ಆರೋಪಕ್ಕೆ ಪ್ರತಿಕ್ರಿಯಿಸಿ, ‘ಐದು ಗ್ಯಾರಂಟಿ ಯೋಜನೆಗಳು ಅಲ್ಲದೆ; ಮೂರು ವರ್ಷಗಳಲ್ಲಿ ರಾಜ್ಯದಲ್ಲಿ ಬಹಳಷ್ಟು ಅಭಿವೃದ್ಧಿ ಕಾರ್ಯಗಳು ನಡೆದಿವೆ. ಸಾಧನಾ ಸಮಾವೇಶದಲ್ಲಿ ಅಭಿವೃದ್ಧಿ ಕಾರ್ಯಗಳ ಪಟ್ಟಿ ಕೂಡ ನೀಡಿದ್ದೇವೆ. ಇದು ವಿರೋಧ ಪಕ್ಷಗಳ ಮುಖಂಡರ ಕಣ್ಣಿಗೆ ಕಾಣುತ್ತಿಲ್ಲವೇ’ ಎಂದು ಪ್ರಶ್ನಿಸಿದರು.

ಪ್ರತಿಯೊಬ್ಬರ ಖಾತೆಗೆ ₹15 ಲಕ್ಷ ಹಾಕುವುದಾಗಿ ಮೋದಿ ಹೇಳಿದ್ದು ಸಾಕಾರಗೊಂಡಿತೇ? ಭರವಸೆ ನೀಡಿದಂತೆ ವರ್ಷಕ್ಕೆ 2 ಕೋಟಿ ಉದ್ಯೋಗ ನೀಡಿದರೆ? ರೈತರ ಸಾಲ ಮನ್ನಾ ಮಾಡಿದರೇ? ಬಿಜೆಪಿಯವರು ಬರೀ ಗಿಮ್ಮಿಕ್ ಮಾಡುತ್ತಲೇ ಸರ್ಕಾರ ನಡೆಸುತ್ತಿದ್ದಾರೆ. ನಮ್ಮ ಸರ್ಕಾರದಲ್ಲಿ ಸಿದ್ದರಾಮಯ್ಯ ನೀಡುತ್ತಿರುವ ಗ್ಯಾರಂಟಿ ಜನಗಳಿಗೆ ತಲುಪುತ್ತಿಲ್ಲವೇ? ಮಹಿಳೆಯರು ಬಸ್ಸಿನಲ್ಲಿ ಉಚಿತವಾಗಿ ಪ್ರಯಾಣ ಮಾಡುತ್ತಿಲ್ಲವೇ? ಯಜಮಾನಿಯರಿಗೆ ತಿಂಗಳಿಗೆ ₹2 ಸಾವಿರ ಸಿಗುತ್ತಿಲ್ಲವೇ? ಒಂದೆರಡು ತಿಂಗಳು ಹೆಚ್ಚುಕಡಿಮೆ ಆಗಬಹುದು ಎಂದು ಕೇಳಿದರು.

ಬಿಜೆಪಿಯ ಬಸವರಾಜ ಬೊಮ್ಮಾಯಿ ಸರ್ಕಾರದ ಅವಧಿಯಲ್ಲಿ ₹1.36 ಲಕ್ಷ ಕೋಟಿ ಕಾಮಗಾರಿಗಳಿಗೆ ಕಾರ್ಯಾದೇಶ ಕೊಟ್ಟು ಹೋಗಿದ್ದರು. ಅದಕ್ಕೂ ನಮ್ಮ ಸರ್ಕಾರವೇ ನಮ್ಮ ಹಣ ಕೊಡುತ್ತಿದೆ. 2 ಲಕ್ಷ ಮನೆಗಳಿಗೆ ಬಿಲ್ ಕೊಟ್ಟು ಹಣ ಬಾಕಿ ಇಟ್ಟು ಹೋಗಿದ್ದರು. ಅದಕ್ಕೂ ನಾವೇ ಹಣ ಕೊಟ್ಟಿದ್ದೇವೆ ಎಂದು ತಿರುಗೇಟು ನೀಡಿದರು.

ಈ ವಾರದಲ್ಲಿ ಮೂರು ಬಾರಿ ಪೆಟ್ರೋಲ್, ಡೀಸೆಲ್ ದರ ಹೆಚ್ಚಿಸಿದ್ದಾರೆ. ನಿಧಾನವಾಗಿ ವಿಷಪ್ರಶಾನ ಮಾಡುತ್ತಿದ್ದು, ಜನ ನರಳಿ ನರಳಿ ಸಾಯುತ್ತಿದ್ದಾರೆ. ಅಡುಗೆ ಅನಿಲ ದರ ಸಾವಿರ ದಾಟಿದೆ, ವಾಣಿಜ್ಯ ಅನಿಲ ದರ ₹3 ಸಾವಿರ ದಾಟಿದೆ. ಡಾಲರ್ ಮೌಲ್ಯ 100ರ ಗಡಿಯಲ್ಲಿದೆ. ಆರ್ಥಿಕ ಹೊಣೆಗಾರಿಕೆ ನಿರ್ವಹಣೆಯಲ್ಲಿ ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ದೂರಿದರು.

ಸಾರ್ವಜನಿಕ ಉದ್ಯಮಗಳನ್ನುಮಾರಾಟದಲ್ಲಿ ತೊಡಗಿದ್ದಾರೆ. ಈ ದೇಶವನ್ನೂ ಮೋದಿ ಮಾರಾಟ ಮಾಡಿಬಿಡುತ್ತಾರೆ. ಏನಾದರೂ ಟೀಕಿಸಿದರೆ ಪಾಕಿಸ್ತಾನ ತೋರಿಸುತ್ತಾರೆ, ಜೈ ಶ್ರೀರಾಮ್ ಎನ್ನುತ್ತಾರೆ. ನಾವೂ ಹಿಂದೂಗಳು. ಬಿಜೆಪಿಯದ್ದು ಡೋಂಗಿ ರಾಜಕಾರಣ. ರಾಜ್ಯದಲ್ಲಿ 2028ಕ್ಕೂ ಕಾಂಗ್ರೆಸ್ನದ್ದೇ ಸರ್ಕಾರ ಎಂದು ಹೇಳಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260524-18-958217152

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.