ಕೋಲಾರ: ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನ ಬಲಮುಂದೆ ಗ್ರಾಮದಲ್ಲಿನ 10 ಜಾತಿ ಪ್ರಮಾಣಪತ್ರಗಳನ್ನು ಜಿಲ್ಲಾ ಜಾತಿ ಪರಿಶೀಲನೆ ಸಮಿತಿ ರದ್ದು ಮಾಡಿದೆ.

ಜಿಲ್ಲಾಧಿಕಾರಿ ಎಂ.ಆರ್.ರವಿ ಅಧ್ಯಕ್ಷತೆಯಲ್ಲಿ ನಡೆದ ಸಮಿತಿ ಸಭೆಯು ಒಟ್ಟು 11 ಜಾತಿ ಪ್ರಮಾಣಪತ್ರ ರದ್ದತಿಗೆ ಮಹತ್ವದ ತೀರ್ಮಾನ ಕೈಗೊಂಡಿದೆ.

ಜಾತಿ ಪ್ರಮಾಣಪತ್ರಗಳ ಸಿಂಧುತ್ವದ ಕುರಿತು ದಾಖಲೆಗಳ ಕೂಲಂಕಷ ವಿಚಾರಣೆ ನಡೆಸಿದ ಜಿಲ್ಲಾ ಜಾತಿ ಪರಿಶೀಲನೆ ಸಮಿತಿಯು ನಿಜವಾದ ಅರ್ಹ ಫಲಾನುಭವಿಗಳಿಗೆ ಸರ್ಕಾರದ ಸೌಲಭ್ಯ ದೊರಕಿಸುವ ನಿಟ್ಟಿನಲ್ಲಿ ಈ ಕ್ರಮ ವಹಿಸಿದೆ.

ಸಭೆಯಲ್ಲಿ ಮಂಡಿಸಲಾದ ಒಟ್ಟು 24 ಪರಿಶಿಷ್ಟ ಜಾತಿ/ಪಂಗಡಗಳ ಸಿಂಧುತ್ವ ಪ್ರಕರಣಗಳ ಪೈಕಿ ಬಲಮಂದೆ ಗ್ರಾಮದ 10 ಪ್ರಕರಣಗಳಲ್ಲಿ ಪಡೆದಿರುವ ಪರಿಶಿಷ್ಟ ಪಂಗಡ ಪ್ರಮಾಣ ಪತ್ರಗಳನ್ನು ಹಾಗೂ ಕೋಲಾರ ನಗರದ 1 ಪ್ರಕರಣದಲ್ಲಿ ಪಡೆರುವ ಪರಿಶಿಷ್ಟ ಜಾತಿ ಪ್ರಮಾಣ ಪತ್ರವನ್ನು ಸಮಿತಿಯು ರದ್ದುಗೊಳಿಸಿದೆ.

ಅರ್ಹರಲ್ಲದಿದ್ದರೂ ಮೀಸಲಾತಿ ಹಾಗೂ ಸೌಲಭ್ಯ ದುರುಪಯೋಗಪಡಿಸಿಕೊಳ್ಳಲು ಯತ್ನಿಸಿದ ಬಂಗಾರಪೇಟೆ ತಾಲ್ಲೂಕಿನ ಬಲಮಂದೆ ಗ್ರಾಮದ ಈ.ಶ್ರೀರಾಮ ಬಿನ್ ಈರಪ್ಪ, ಬಿ.ಆರ್.ಮಲ್ಲಪ್ಪ ಬಿನ್ ಎಸ್.ರಾಮಪ್ಪ, ಪ್ರಭಾಕರ ಬಿನ್ ಗೋವಿಂದಪ್ಪ, ಲೋಕೇಶ್ ಬಿನ್ ಈರಪ್ಪ, ಡಿ.ಮಲ್ಲೇಶ್ ಬಿನ್ ದೊಡ್ಡಮುನಿಯಪ್ಪ, ಕಿಟ್ಟಪ್ಪ ಬಿನ್ ಚಂದ್ರಪ್ಪ, ಶಿವಶಂಕರ್ ಬಿನ್ ಬುಚ್ಚಪ್ಪ, ಬಿ.ವಿ.ರಮೇಶ್ ಕುಮಾರ್ ಬಿನ್ ಬಿ.ಎಂ.ವೆಂಕಟೇಶಪ್ಪ, ವೆಂಕಟಸ್ವಾಮಿ ಬಿನ್ ನಾರಾಯಣಪ್ಪ, ಬಿ.ಆರ್.ಮಂಜುನಾಥ್ ಬಿನ್ ರಾಮಪ್ಪ, ಪ್ರಕರಣಗಳಲ್ಲಿ ಪಡೆದ ಪರಿಶಿಷ್ಟ ಪಂಗಡ ಪ್ರಮಾಣಪತ್ರಗಳನ್ನು ಸಮಿತಿಯು ರದ್ದುಗೊಳಿಸಿದೆ.

ಕೋಲಾರ ನಗರದ ವೀರಾಂಜನೇಯನಗರದ ಕೃಷ್ಣಪ್ಪ ಬಿನ್ ವೆಂಕಟೇಶಪ್ಪ ಅವರ ಪ್ರಕರಣದಲ್ಲಿಯೂ ಪರಿಶಿಷ್ಟ ಜಾತಿ ಪ್ರಮಾಣಪತ್ರ ರದ್ದುಗೊಳಿಸಿದೆ.

ಇನ್ನು ವಿಚಾರಣಾ ಹಂತದಲ್ಲಿರುವ ಉಳಿದ ಪ್ರಕರಣಗಳನ್ನು ತ್ವರಿತವಾಗಿ ಪರಿಶೀಲಿಸಿ ಮುಂದಿನ ಸಭೆಯಲ್ಲಿ ಸಮಿತಿಯ ಮುಂದಿಡಲು ನಾಗರಿಕಹಕ್ಕು ಜಾರಿ ನಿರ್ದೇಶನಾಲಾಯಕ್ಕೆ ಸೂಚಿಸಲಾಗಿದೆ.

ಅರ್ಹರಿಗೆ ಮಾತ್ರ ಸರ್ಕಾರದ ಸೌಲತ್ತುಗಳು ಹಾಗೂ ಉದ್ಯೋಗ ಮೀಸಲಾತಿ ತಲುಪಬೇಕು ಎಂಬ ನಿಟ್ಟಿನಲ್ಲಿ ಜಿಲ್ಲಾಡಳಿತವು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ ಎಂದು ಜಿಲ್ಲಾಡಳಿತ ಪ್ರಕಟಣೆಯಲ್ಲಿ ತಿಳಿಸಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260530-18-700626859

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.