ಕೋಲಾರ: ಸಮಾಜದಲ್ಲಿ ಟೀಕೆಗಳಿಗೆ ಯಾರೂ ಹೊರತಲ್ಲ, ಸಾರ್ವಜನಿಕ ಜೀವನದಲ್ಲಿ ನಿಂದಕರು ಇರಲೇಬೇಕು. ನಿಂದನೆಗೆ, ಅಪಮಾನಕ್ಕೆ ಒಳಗಾದಾಗ ಮಾತ್ರ ಸನ್ಮಾನಕ್ಕೆ ಅರ್ಥಬರುತ್ತದೆ. ಆದರೆ ಜಾತಿಯ ಹೆಸರಲ್ಲಿ ನಿಂದನೆ, ದೌರ್ಜನ್ಯ, ಅಪಮಾನ ನಡೆಯಬಾರದು. ಕೇವಲ ಜಾತಿ ಕಾರಣಕ್ಕಾಗಿ ಒಬ್ಬ ವ್ಯಕ್ತಿಯನ್ನು ಅವಹೇಳನ ಮಾಡುವುದು, ನಿಕೃಷ್ಟವಾಗಿ ಕಾಣುವುದು ಅತ್ಯಂತ ಅಮಾನುಷ ಕೃತ್ಯ ಹಾಗೂ ಸಂವಿಧಾನ ವಿರೋಧಿ ನಡೆ ಎಂದು ಜಿಲ್ಲಾಧಿಕಾರಿ ಎಂ.ಆರ್.ರವಿ ಅಭಿಪ್ರಾಯಪಟ್ಟರು.

ಅರಿವು ಭಾರತ ಸಂಸ್ಥೆ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ‘ಅಸ್ಪೃಶ್ಯತೆ ನಿರ್ಮೂಲನೆಯಲ್ಲಿ 12 ವರ್ಷ– ಒಂದು ಅವಲೋಕನ’ ಕಾರ್ಯಕ್ರಮದಲ್ಲಿ ‘ಬಿಯಾಂಡ್ ಬ್ಯಾರಿಯರ್ಸ್’ ಕೃತಿ ಬಿಡುಗಡೆ ಮಾಡಿ ಅವರು ಮಾತನಾಡಿದರು.

ಸಮಸಮಾಜ ನಿರ್ಮಿಸಬೇಕು, ಜಾತಿ ಮುಕ್ತ ಸಮಾಜ ನಿರ್ಮಿಸಬೇಕು ಎಂದು ಹೇಳುತ್ತಿರುತ್ತೇವೆ. ಆದರೆ ಅದಕ್ಕೆ ನಿರ್ದಿಷ್ಟ ಮಾನದಂಡ, ನೀಲಿನಕ್ಷೆ ಇಲ್ಲ. ಹೇಗೆ ನಿರ್ಮಿಸಬೇಕು, ಮನುಷ್ಯರಾಗುವ ಬಗೆ ಹೇಗೆ ಎಂಬುದನ್ನು ಯಾರೂ ಹೇಳಿಕೊಟ್ಟಿಲ್ಲ. ಕ್ರೌರ್ಯ, ಸ್ವಾರ್ಥ ತುಂಬಿರುವ ಸಮಾಜ ಕಾಣುತ್ತಿದ್ದೇವೆ. ಇದನ್ನು ಸರಿಪಡಿಸುವುದಾದರೂ ಹೇಗೆ? ಇಂಥ ಸಮಯದಲ್ಲಿ ಜಿಲ್ಲೆಯಲ್ಲಿ ದಾರಿ ದೀಪ, ಆಶಾಕಿರಣವಾಗಿರುವುದೇ ಅರಿವು ಭಾರತ. ಅರಿವು ಭಾರತ ನಿಂತ ನೀರಾಗಬಾರದು; ಬದಲಾಗಿ ಅದು ಹರಿಯವ ಭಾರತ ಆಗಬೇಕು. ಜಾತಿ ಹೆಸರಲ್ಲಿ ನಡೆಯುತ್ತಿರುವ ದೌರ್ಜನ್ಯಕ್ಕೆ ಒಂದಲ್ಲ ಒಂದು ದಿನ ಅಂತ್ಯ ಸಿಗಲಿದೆ ಎಂದು ಆಶಾವಾದ ವ್ಯಕ್ತಪಡಿಸಿದರು.

ಅರಿವು ಭಾರತ ಒಂದು ತಂಡವಾಗಿ ಕೆಲಸ ಮಾಡಬೇಕು. ಕಾರ್ಯಕ್ರಮ ನಡೆಸಿದ ಬಳಿಕ ಆ ಗ್ರಾಮದಲ್ಲಿನ ಪರಿಣಾಮವನ್ನು ಅಧ್ಯಯನ ಮಾಡಬೇಕು. ಈವರೆಗೆ ಯಾವುದೇ ಗ್ರಾಮ ಅಸ್ಪೃಶ್ಯತೆ ಮುಕ್ತ ಎಂದು ಘೋಷಣೆ ಮಾಡಿಕೊಂಡಿಲ್ಲ. ಒಂದು ಗ್ರಾಮದಲ್ಲಿನ ಒಂದು ಮನೆ ಸರಿ ಹೋದರೆ ಸಾಲದು; ಉಳಿದ ಮನೆಗಳೂ ಸರಿಹೋಗಬೇಕು. ಆಗ ಮಾತ್ರ ಕಾರ್ಯಕ್ರಮ ಯಶಸ್ಸು ಕಾಣುತ್ತದೆ. ಪ್ರತಿ ಗ್ರಾಮರತ್ನರು ಎಲ್ಲಾ ಮನೆಗಳಿಗೆ ಹೋಗಿ ಅರಿವು ಮೂಡಿಸಿ ಅಸ್ಪೃಶ್ಯತೆ ಮುಕ್ತ ಗ್ರಾಮ ಎಂದು ಘೋಷಿಸಬೇಕು. ಮುಂದಿನ 50 ವರ್ಷಗಳ ಮುನ್ನೋಟ ಇರಬೇಕು. ಪ್ರತಿ ಗ್ರಾಮರತ್ನಗಳನ್ನು ಕೋಲಾರ ರತ್ನಗಳನ್ನಾಗಿ ಮಾಡಬೇಕು. ಅವು ಮುಂದೆ ಕರ್ನಾಟಕ ರತ್ನ, ಭಾರತ ರತ್ನಗಳಾಗಬೇಕು ಎಂದು ಸಲಹೆ ನೀಡಿದರು.

ಬೆಂಗಳೂರಿನ ಪ್ರಜಾಪರಿವರ್ತನಾ ಸಂಘಟನೆಯ ಅಧ್ಯಕ್ಷ ಬಿ.ಗೋಪಾಲ್ ಮಾತನಾಡಿ, ‘ಅಸ್ಪೃಶ್ಯತೆ ಎನ್ನುವುದು ಸಾವಿರಾರು ವರ್ಷಗಳಿಂದ ಇದೆ, ಈಗಲೂ ತಾಂಡವವಾಡುತ್ತಿದೆ. ನಗರಗಳಲ್ಲಿ ತಿಪ್ಪೆಯನ್ನು ಅಲಂಕಾರ ಮಾಡಿದಂತಿವೆ. ಶ್ರೀಮಂತರು ಪಕ್ಕಾ ಜಾತಿವಾದಿಗಳಾಗಿದ್ದಾರೆ. ಇದನ್ನು ನಿವಾರಣೆ ಮಾಡಲು 100 ವರ್ಷಗಳೇ ಬೇಕು. ಈ ನಿಟ್ಟಿನಲ್ಲಿ ಅರಿವು ಶಿವಪ್ಪ ಅವರಂಥವರು ಪ್ರಯತ್ನ ನಡೆಸಿದ್ದಾರೆ. ಎಲ್ಲಾ ಕಡೆ ಇಂಥ ಪ್ರಯತ್ನ ನಡೆಯಬೇಕಿದೆ’ ಎಂದರು.

ಕರ್ನಾಟಕ ಸಾಹಿತ್ಯ ಪರಿಷತ್ ಅಧ್ಯಕ್ಷ ಎಲ್.ಎನ್.ಮುಕುಂದರಾಜ್ ಮಾತನಾಡಿ, ‘ಅರಿವು ಭಾರತ ಚಳವಳಿಯ ರೂಪದಲ್ಲಿ ನಡೆಯುತ್ತಿದೆ. ಅಸ್ಪೃಶ್ಯತೆ ಶಾಪವಾಗಿದೆ. ದಲಿತರ ಹಕ್ಕು, ಸಾಮರ್ಥ್ಯ ದಮನ ಮಾಡಲು ಈ ಪಿಡುಗನ್ನು ಇನ್ನೂ ಆಚರಿಸಲಾಗುತ್ತಿದೆ. ಮೂಲನಿವಾಸಿಗಳ ಶಕ್ತಿ, ಪ್ರತಿಭೆ ಹತ್ತಿಕ್ಕುವ ಪ್ರಯತ್ನ ಇದಾಗಿದೆ. ಇದೊಂದು ಅಮಾನವೀಯ ಪದ್ಧತಿ’ ಎಂದರು.

ಅರಿವು ಭಾರತ ಸಂಸ್ಥೆಯ ಅರಿವು ಶಿವಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ‘ಅರಿವು ಭಾರತದ 12 ವರ್ಷಗಳ ಮೈಲಿಗಲ್ಲು ನೆನಪಿಸಿಕೊಳ್ಳುವ ಕಾರ್ಯಕ್ರಮವಿದು. ಕರ್ನಾಟಕವಲ್ಲದೇ ಆಂಧ್ರ ಹಾಗೂ ತಮಿಳುನಾಡಿನಲ್ಲೂ ‘ಸಮತೆಯ ಟೀ’ ಕಾರ್ಯಕ್ರಮ ನಡೆಸಿದ್ದೇವೆ. 400ಕ್ಕೂ ಅಧಿಕ ಹಳ್ಳಿಗಳಲ್ಲಿ ಗೃಹಪ್ರವೇಶ ಕಾರ್ಯಕ್ರಮ ರೂಪಿಸಿದ್ದೇವೆ. ದೇವಸ್ಥಾನ ಪ್ರವೇಶ ಕಾರ್ಯಕ್ರಮ, ಪ್ರತಿಜ್ಞಾವಿಧಿ ನಡೆಸಿದ್ದೇವೆ. 1,300ಕ್ಕೂ ಅಧಿಕ ದೇಗುಲಗಳ ಮುಂದೆ ಮುಕ್ತ ಪ್ರವೇಶದ ಫಲಕ ಹಾಕಿಸಿದ್ದೇವೆ. ಇದಕ್ಕೆ ಜಿಲ್ಲಾಧಿಕಾರಿ ಎಂ.ಆರ್.ರವಿ ನೀಡಿದ ಸಹಕಾರ ಕಾರಣ' ಎಂದರು.

ಈ ಕಾರ್ಯಕ್ರಮದಲ್ಲಿ ‘ಗ್ರಾಮರತ್ನ’ ಪುರಸ್ಕೃತರನ್ನು ಸನ್ಮಾನಿಸಲಾಯಿತು. ಎಂ.ಆರ್.ರವಿ ರಚಿತ ಅರಿವು ಭಾರತದ ಗೀತೆಯನ್ನು ರಾಜಪ್ಪ ಹಾಡಿದರು. ಭೀಮಸೇನೆ ರಾಜ್ಯ ಅಧ್ಯಕ್ಷ ಪಂಡಿತ್ ಮುನಿವೆಂಕಟಪ್ಪ, ದಲಿತ ಮುಖಂಡ ಟಿ.ವಿಜಯಕುಮಾರ್, ಜನವಾದಿ ಮಹಿಳಾ ಸಂಘಟನೆಯ ವಿ.ಗೀತಾ, ಕಸಾಪ ಜಿಲ್ಲಾಧ್ಯಕ್ಷ ಎನ್.ಬಿ.ಗೋಪಾಲಗೌಡ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಎನ್.ವಿಜಯಲಕ್ಷ್ಮಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260413-18-522413179

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.