ಕೋಲಾರ: ದೇಶದಾದ್ಯಂತ ಜನಗಣತಿ–2027 ಎರಡು ಹಂತಗಳಲ್ಲಿ ನಡೆಯುತ್ತಿದ್ದು, ಮೊದಲ ಹಂತದ ಮನೆ ಪಟ್ಟಿ ಹಾಗೂ ಮನೆ ಗಣತಿ ಜಿಲ್ಲೆಯಲ್ಲಿ ಪೂರ್ಣಗೊಂಡಿದೆ. ಇನ್ನೂ ಆರು ದಿನಗಳು ಬಾಕಿ ಇರುವಾಗಲೇ ಶೇ 100 ಸಾಧನೆ ಮಾಡಿದ ಕೆಲವೇ ಜಿಲ್ಲೆಗಳಲ್ಲಿ ಕೋಲಾರವೂ ಒಂದು.

ಜಿಲ್ಲಾಧಿಕಾರಿ ಎಂ.ಆರ್.ರವಿ ನೇತೃತ್ವದಲ್ಲಿ ಏ.16ರಂದು ಮನೆ ಪಟ್ಟಿ, ಮನೆ ಗಣತಿ ಆರಂಭವಾಗಿತ್ತು. 3,426 ಗಣತಿ ಬ್ಲಾಕ್ಗಳ (ಹೌಸ್ ಲಿಸ್ಟಿಂಗ್ ಬ್ಲಾಕ್) ಮೂಲಕ 5,77,815 ಮನೆಗಳ ಗಣತಿ ನಡೆಸಲು ನಿಗದಿಪಡಿಸಲಾಗಿತ್ತು. ಒಂದು ಬ್ಲಾಕ್ ಅಂದರೆ ಸುಮಾರು 180 ರಿಂದ 200 ಮನೆಗಳು ಅಥವಾ ಅಂದಾಜು 800 ಜನರ ಜನಸಂಖ್ಯೆಯನ್ನು ಒಳಗೊಂಡಿರುತ್ತದೆ.

ಮೇ 15ವರೆಗೆ ಸಮಯಾವಕಾಶ ನೀಡಲಾಗಿತ್ತು. ಆದರೆ, ಕೋಲಾರ ಜಿಲ್ಲಾಡಳಿತವು ಈ ಬೃಹತ್ ಕಾರ್ಯವನ್ನು ನಿಗದಿಗಿಂತ ಮೊದಲೇ ಮುಗಿಸಿದೆ.

ಜಿಲ್ಲೆಯಾದ್ಯಂತ ಒಟ್ಟು 2,586 ಗಣತಿದಾರರು ಹಾಗೂ 427 ಮೇಲ್ವಿಚಾರಕರನ್ನು ನಿಯೋಜಿಸಲಾಗಿತ್ತು. ಈ ಸಂಬಂಧ ಮೂರು ದಿನಗಳ ತರಬೇತಿ ಕೂಡ ನೀಡಲಾಗಿತ್ತು. ಯಾವುದೇ ತುರ್ತು ಸಂದರ್ಭಗಳಿಗಾಗಿ ಶೇ 10 ರಷ್ಟು ಅಂದರೆ ಒಟ್ಟು 256 ಗಣತಿದಾರರು ಮತ್ತು 43 ಮೇಲ್ವಿಚಾರಕರನ್ನು ಮೀಸಲು ಸಿಬ್ಬಂದಿಯಾಗಿ ಇರಿಸಿಕೊಳ್ಳಲಾಗಿತ್ತು.

ಗಣತಿದಾರರು ಸಂಗ್ರಹಿಸಿದ ಮಾಹಿತಿಯನ್ನು ಮೇಲ್ವಿಚಾರಕರು ಪರಿಶೀಲಿಸಿ, ತಮ್ಮ ಲಾಗಿನ್ ಮೂಲಕ ಅಂತಿಮಗೊಳಿಸಿದ್ದಾರೆ. ಏ.1 ರಿಂದ 15ರವರೆಗೆ ಸ್ವಯಂ ಗಣತಿ ನಡೆದಿತ್ತು. ಆ ವೇಳೆ ಅನ್ಲೈನ್ ಪೋರ್ಟಲ್ ಮೂಲಕ ವೈಯಕ್ತಿಕ ಮಾಹಿತಿ ನೀಡಲು ಅವಕಾಶ ನೀಡಲಾಗಿತ್ತು. ಇದೇ ಮೊದಲ ಬಾರಿ ದೇಶದಲ್ಲಿ ಡಿಜಿಟಲ್ ಗಣತಿ ನಡೆಸಲಾಗುತ್ತಿದೆ.

ಸಾರ್ವಜನಿಕರು ಯಾವುದೇ ಆತಂಕವಿಲ್ಲದೆ ಗಣತಿದಾರರಿಗೆ ನಿಖರ ಮಾಹಿತಿ ನೀಡಿ ಈ ರಾಷ್ಟ್ರೀಯ ಕಾರ್ಯಕ್ಕೆ ಸಹಕರಿಸುವಂತೆ ಜಿಲ್ಲಾಧಿಕಾರಿ ಎಂ.ಆರ್.ರವಿ ನೇತೃತ್ವದಲ್ಲಿ ಜಾಗೃತಿ ಮೂಡಿಸಲಾಗಿತ್ತು.

ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಜಿಲ್ಲಾ ಜನಗಣತಿ ಸಮಿತಿ ರಚಿಸಲಾಗಿತ್ತು. ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ, ಹೆಚ್ಚುವರಿ ಜಿಲ್ಲಾಧಿಕಾರಿ ಹಾಗೂ ಉಪವಿಭಾಗಾಧಿಕಾರಿ ವಿವಿಧ ಹಂತದ ಜವಾಬ್ದಾರಿ ವಹಿಸಿಕೊಂಡಿದ್ದರು. ತಾಲ್ಲೂಕು ಮಟ್ಟದಲ್ಲಿ ತಹಶೀಲ್ದಾರರು ಮತ್ತು ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರನ್ನು 'ಚಾರ್ಜ್ ಅಧಿಕಾರಿ'ಗಳನ್ನಾಗಿ ನೇಮಿಸಲಾಗಿತ್ತು. ಆರಂಭದಲ್ಲಿ ವಿಳಂಬ ಮಾಡಿದ್ದ ಚಾರ್ಜ್ ಅಧಿಕಾರಿಗಳಾದ ತಹಶೀಲ್ದಾರ್ಗಳಿಗೆ ನೋಟಿಸ್ ಕೂಡ ನೀಡಿದ್ದರು. ನಂತರ ವೇಗ ಸಿಕ್ಕಿತು.

ಜೂನ್ನಿಂದ ಲೇಔಟ್ ಮ್ಯಾಪ್ಗಳನ್ನು ಅಪ್ಲೋಡ್ ಮಾಡುವುದು ಸೇರಿದಂತೆ ವಿವಿಧ ಪ್ರಕ್ರಿಯೆಗಳು ನಡೆಯಲಿವೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260510-18-442489503

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.