ಕೋಲಾರ: ದೇಶದಲ್ಲಿ ಜನಗಣತಿ–2027 ಎರಡು ಹಂತಗಳಲ್ಲಿ ನಡೆಯಲಿದ್ದು, ಮೊದಲ ಹಂತದ ಮನೆ ಪಟ್ಟಿ ಹಾಗೂ ಮನೆಗಣತಿಗೆ ನಗರದಲ್ಲಿ ಗುರುವಾರ ಚಾಲನೆ ಲಭಿಸಿತು.

ನಗರದ ಪಿ.ಸಿ.ಬಡಾವಣೆಯಲ್ಲಿ ನಗರಸಭೆ ಆಯುಕ್ತ ನವೀನಚಂದ್ರ ಮತ್ತು ಸಿಬ್ಬಂದಿ ಸಮ್ಮುಖದಲ್ಲಿ ಚಾಲನೆ ನೀಡಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಇಂಚರ ಗೋವಿಂದರಾಜು, ‘ರಾಜ್ಯ ಮತ್ತು ದೇಶದ ಆಡಳಿತ ವ್ಯವಸ್ಥೆಯಲ್ಲಿ ಸಮರ್ಪಕವಾದ ಯೋಜನೆಗಳನ್ನು ರೂಪಿಸಲು ನಿಖರವಾದ ಜನಗಣತಿ ದತ್ತಾಂಶಗಳು ಪ್ರಮುಖ ಪಾತ್ರವಹಿಸಲಿವೆ’ ಎಂದರು.

2011ರ ನಂತರ ಹಲವು ಸಮೀಕ್ಷೆಗಳು ನಡೆದಿದ್ದರೂ ಜನಗಣತಿ ಕಾರ್ಯ ಅಗಿರಲಿಲ್ಲ. ಯಾವುದೇ ಅಭಿವೃದ್ಧಿ ಕಾರ್ಯಕ್ರಮಗಳಿರಲಿ ಈ ಸಮಾಜಕ್ಕೆ ಅಗತ್ಯವಾದ ಯೋಜನೆ ರೂಪಿಸಬೇಕಾದರೆ ಜನಸಂಖ್ಯೆಯ ದತ್ತಾಂಶಗಳು ಅತ್ಯಗತ್ಯವಾಗಿರುತ್ತದೆ. ಮನೆಗಳ ಒಟ್ಟು ಕುಟುಂಬದ ಸದಸ್ಯರು, ಒಟ್ಟು ಆಸ್ತಿ, ಮನೆ, ನಿವೇಶನ, ವಾಹನಗಳು. ಟಿ.ವಿ. ಫ್ರಿಜ್, ನಗದು, ಚಿನ್ನಾಭರಣ ಇತ್ಯಾದಿ ವಿವರಗಳನ್ನು ಪ್ರಾಮಾಣಿಕವಾಗಿ ನೀಡಬೇಕು ಎಂದು ಹೇಳಿದರು.

ರಾಜ್ಯದ ಜನಸಂಖ್ಯೆ 6.5 ಕೋಟಿ ಎಂದು ಅಂದಾಜಿಸಿದ್ದು, ಇದರಲ್ಲಿ ಬಿಪಿಎಲ್ ಪಡಿತರ ಚೀಟಿ ಹೊಂದಿರುವವರ ಸಂಖ್ಯೆ 4.76 ಕೋಟಿ ಅಗಿರುವುದು ವಿಪರ್ಯಾಸವಾಗಿದೆ. ಇದು ಆರ್ಹತೆ ಪರಿಶೀಲನೆ ಹಾಗೂ ಯೋಜನೆಗಳ ಅನುಷ್ಠಾನದಲ್ಲಿ ಅಸಮರ್ಪಕತೆ ತೋರಿಸುತ್ತದೆ. ನಿಜವಾದ ಫಲಾನುಭವಿಗಳಿಗೆ ಸೌಲಭ್ಯಗಳು ತಲುಪಲು ನಿಖರವಾದ ದತ್ತಾಂಶದ ಅತ್ಯಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.

ಆಯುಕ್ತ ನವೀನಚಂದ್ರ ಮಾತನಾಡಿ, ‘ಜನಗಣತಿ ಅಂಗವಾಗಿ ಮೊದಲು ಮನೆಪಟ್ಟಿ ಮತ್ತು ಮನೆ ಗಣತಿ ಕಾರ್ಯಕ್ರಮವನ್ನು ಮೇ 15 ವರೆಗೆ ಆಯೋಜಿಸಲಾಗಿದೆ. ಏ.1 ರಿಂದ 15ರವರೆಗೆ ಸ್ವಯಂ ಗಣತಿ ನಡೆದಿದೆ. ಅನ್ಲೈನ್ ಪೋರ್ಟಲ್ ಮೂಲಕ ವೈಯಕ್ತಿಕ ಮಾಹಿತಿ ನೀಡಲು ಅವಕಾಶ ನೀಡಲಾಗಿತ್ತು’ ಎಂದರು.

ಜನಗಣತಿ ಕಾರ್ಯಕ್ರಮದಲ್ಲಿ ನಗರಸಭೆ ಕಂದಾಯ ಅಧಿಕಾರಿ ವೇಣುಗೋಪಾಲ್, ರಾಜೇಶ್ವರಿ ಮತ್ತು ಸಿಬ್ಬಂದಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260417-18-108339169

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.