ಕೋಲಾರ: ಆದಿಮ ಸಾಂಸ್ಕೃತಿಕ ಕೇಂದ್ರ ಹಮ್ಮಿಕೊಂಡಿದ್ದ ಶಿಬಿರವು ಮಕ್ಕಳ ಸೃಜನಶೀಲಕ್ಕೆ ಮುನ್ನುಡಿ ಬರೆದಿದೆ ಎಂದು ಜಿಲ್ಲಾಧಿಕಾರಿ ಎಂ.ಆರ್.ರವಿ ಹೇಳಿದರು.

ತಾಲ್ಲೂಕಿನ ತೇರಹಳ್ಳಿ ಬೆಟ್ಟದ ಶಿವಗಂಗೆಯಲ್ಲಿ ಆದಿಮ ಸಾಂಸ್ಕೃತಿಕ ಕೇಂದ್ರದ ಮಕ್ಕಳ ಬೇಸಿಗೆ ಶಿಬಿರ ಮಕ್ಕಳ ಮೇಳ- 2026 ಸಮಾರೋಪದಲ್ಲಿ ಅವರು ಮಾತನಾಡಿದರು.

ಮಗುವಿನೊಂದಿಗೆ ಮತ್ತೊಂದು ಮಗುವನ್ನು ಹೋಲಿಕೆ ಮಾಡುವುದು ಬಿಡಿ. ಮಕ್ಕಳು ಅವರ ಪಾಡಿಗೆ ಬೆಳೆಯಲು, ನೈಸರ್ಗಿಕವಾಗಿ ಅರಳಲು ಬಿಡಬೇಕು. ಪೋಷಕರು ತಮ್ಮಲ್ಲಿನ ಆಸೆಗಳನ್ನು ಮಕ್ಕಳ ಮೇಲೆ ಹೊರೆಸುವ ದುಸ್ಸಾಹಸ ಮಾಡಬೇಡ. ಎಲ್ಲ ಮಕ್ಕಳೂ ಬುದ್ಧಿವಂತರೇ ಆಗಿರುತ್ತಾರೆ ಎಂದರು.

ಜಾತಿ ಜಾತಿಗಳ ನಡುವೆ ಇರುವ ತಾರತಮ್ಯಗಳು ಹೋಗಬೇಕಾದರೆ ದೊಡ್ಡವರಲ್ಲಿನ ಸಣ್ಣತನಗಳು ಬಿಡಬೇಕು. ವಯಸ್ಸಾದವೆರೆಲ್ಲಾ ಪ್ರಬುದ್ಧರಾಗಿಲ್ಲ. ಅದನ್ನು ಈ ಮಕ್ಕಳಿಂದ ನೋಡಿ ಕಲಿಯಬೇಕಾಗುತ್ತದೆ. ಕೇವಲ ವೈದ್ಯರು, ಎಂಜಿನಿಯರ್, ಐಎಎಸ್, ಐಪಿಎಸ್ ಅಧಿಕಾರಿಗಳಿಂದಲೇ ದೇಶಕಟ್ಟಲು ಸಾಧ್ಯವಿಲ್ಲ. ಮನಸ್ಸಿನ ಒಳಗಿರುವ ಕೊಳಕನ್ನು ಹೊರಹಾಕಬೇಕು ಎಂದು ಹೇಳಿದರು.

ಸಂಸ್ಕೃತಿ ಚಿಂತಕ ನೆಲ್ಲುಕುಂಟೆ ವೆಂಕಟೇಶ್ ಪ್ರಶಸ್ತಿ ಪುರಸ್ಕೃತರನ್ನು ಅಭಿನಂದಿಸಿದರು. ಆದಿಮ ನಮ್ಮ ಪಾಲಿಗೆ ಬಯಲು ವಿಶ್ವವಿದ್ಯಾಲಯವೇ ಆಗಿದೆ. ಇಲ್ಲಿರುವವರೆಲ್ಲಾ ಬಯಲು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು, ಶಿಕ್ಷಕರು ಎಂದರು.

ಕನ್ನಡ ಪ್ರಾಧ್ಯಾಪಕ ರಾಜಪ್ಪ ದಳವಾಯಿ ಆದಿಮ ಬೆಳವಣಿಗೆ ಕುರಿತು ಮಾತನಾಡಿ, ‘ಇಸ್ಮಾಯಿಲ್ ಗೊನಾಳ್ ಆದಿಮದಲ್ಲಿ ಇದ್ದು ಅನೇಕ ನಾಟಕಗಳಿಗೆ ಸಂಗೀತ, ಗಾಯನ ನಡೆಸಿಕೊಟ್ಟಿದ್ದಾರೆ. ಹೀಗಾಗಿ, ಅವರ ಹೆಸರಲ್ಲಿ ಪ್ರಶಸ್ತಿ ನೀಡಲಾಗುತ್ತಿದೆ. ಪ್ರಶಸ್ತಿಯು ₹ 25 ಸಾವಿರ ನಗದು ಸ್ಮರಣಿಕೆ ಒಳಗೊಂಡಿದೆ. ಈ ಬಾರಿಯ ಪ್ರಶಸ್ತಿ ಪುರಸ್ಕೃತ ಪಿಂಜಾರ ಅಬ್ದುಲ್ ಸಾಬ್ ರಂಗಭೂಮಿಗೆ ನೀಡಿದ ಕೊಡುಗೆ ಅಪಾರ’ ಎಂದು ಹೇಳಿದರು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಪಿಂಜಾರ ಅಬ್ದುಲ್ ಸಾಬ್, ‘ಹೊಸಪೇಟೆಯ ಸಿದ್ಲಿಂಗ್ ಚೌಕಿ ಎಂಬ ಸ್ಲಂನಲ್ಲಿ ಹುಟ್ಟಿ ಬೆಳೆದ ನಾನು, ಅಲ್ಲಿನ ಪರಿಸ್ಥಿತಿಗಳ ಗಮನಿಸಿ ನೊಂದ, ನಿರಾಶ್ರಿತ, ಓದು ನಿಲ್ಲಿಸಿದ ಮಕ್ಕಳೊಂದಿಗೆ ಭಾವಕ್ಯತಾ ವೇದಿಕೆ ಎಂಬ ತಂಡ ಕಟ್ಟಿದೆ. ಬೀದಿಯಲ್ಲಿ ಬಟ್ಟೆ ಹಾಸಿ ಪ್ರೇಕ್ಷಕರು ನೀಡಿದ್ದನ್ನು ಸ್ವೀಕರಿಸಿ ತಂಡದ ಯುವಕರನ್ನು ವಿದ್ಯಾವಂತರಾಗಿ ಮಾಡಿದ್ದು, ಅವರೀಗ ವಿವಿಧ ಉದ್ಯೋಗ ಮಾಡುತ್ತಿದ್ದಾರೆ. ಇದೆಲ್ಲಾ ರಂಗಭೂಮಿಯಿಂದಲೇ ಸಾಧ್ಯವಾಯಿತು’ ಎಂದರು.

ಆದಿಮ ಕಾರ್ಯದರ್ಶಿ ಹ.ಮಾ.ರಾಮಚಂದ್ರ ಮಾತನಾಡಿ, ‘ಈ ನೆಲ ಅಚಲ, ಆಜೀವಿಕ, ಅವಧೂತ ಪರಂಪರೆಗೆ ಸೇರಿದ್ದಾಗಿದೆ. ಮಕ್ಕಳಲ್ಲಿನ ಬಹುವಿಧಧ ಬುದ್ಧಿವಂತಿಕೆಯನ್ನು ಹೊರತೆಗೆಯುವ ಕೆಲಸ ಆದಿಮ ಮಾಡುತ್ತಿದೆ. ವಿದ್ಯಾರ್ಥಿಗಳಿಗೆ ಹೇಳಬೇಕಾದ ಕ್ರಮವನ್ನು ಶಿಕ್ಷಕರು ಕಲಿಯಬೇಕು’ ಎಂದು ತಿಳಿಸಿದರು.

ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರ ಕೆ.ವಿ ಪ್ರಭಾಕರ್, ರಂಗಕಲಾವಿದೆ ದು.ಸರಸ್ವತಿ ಮಾತನಾಡಿ ಮಾತನಾಡಿದರು.

ಶಿಬಿರದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ 8 ರಿಂದ 14 ವರ್ಷದ ಸುಮಾರು 180 ಮಕ್ಕಳು ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ವಿವಿಧ ಪ್ರದರ್ಶನ ನೀಡಿ ಪ್ರೇಕ್ಷಕರ ಹಾಗೂ ಪೋಷಕರ ಗಮನ ಸೆಳೆದರು.

ಜಡೆ ಕೋಲಾಟ, ತಮಟೆ, ತಾಝಾ, ನಗಾರಿ, ತುಡುಮು, ಡೊಳ್ಳುಕುಣಿತ, ಕಂಸಾಳೆ, ಮರಗಾಲು ಕುಣಿತ, ಥಾಲಿ (ತಟ್ಟೆ) ನೃತ್ಯ, ವೀರಗಾಸೆ ಪ್ರದರ್ಶಿಸಲಾಯಿತು. ಎರಡು ನಾಟಕ ಪ್ರದರ್ಶನಗೊಂಡವು.

ಕಾರ್ಯಕ್ರಮದಲ್ಲಿ ವಸತಿ ಸಚಿವರ ಮಾಧ್ಯಮ ಸಲಹೆಗಾರ ಲಕ್ಷ್ಮಿನಾರಾಯಣ, ಆದಿಮ ಅಧ್ಯಕ್ಷ ಎನ್.ಮುನಿಸ್ವಾಮಿ, ಉಪಾಧ್ಯಕ್ಷ ಮಾರ್ಕೊಂಡಪ್ಪ, ಅಮರೇಶ್, ಕುಪ್ಪನಳ್ಳಿ ಎಂ ಭೈರಪ್ಪ, ನಾವೆಂಕಿ, ಶಿಬಿರದ ನಿರ್ದೇಶಕ ರಾಜಪ್ಪ ಡಿ.ಆರ್., ಶಿಬಿರದ ಸಂಯೋಜಕ ಹರೀಶ್ ಕುಮಾರ್, ಕೆ.ವಿ.ಕಾಳಿದಾಸ, ಆದಿಮ ರಂಗಶಿಕ್ಷಣ ಕೇಂದ್ರ ಆಡಳಿತಾಧಿಕಾರಿ ರಮೇಶ್ ಅಗ್ರಹಾರ, ಎಂ.ವೆಂಕಟಸ್ವಾಮಿ ಗಂಗನಬೀಡು, ಕೆ.ಎಂ.ನೀಲಕಂಠೇಗೌಡ, ಗೋವಿಂದಪ್ಪ, ತುರಾಂಡಹಳ್ಳಿ ಶ್ರೀನಿವಾಸ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260503-18-1486008279

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.