ಕೋಲಾರ: ಆದಿಮ ಸಾಂಸ್ಕೃತಿಕ ಕೇಂದ್ರದ ಆದಿಮ ಮಕ್ಕಳ ಮೇಳ-2026ರ ಸಮಾರೋಪ ಸಮಾರಂಭವನ್ನು ಶುಕ್ರವಾರ ಸಂಜೆ 6ಕ್ಕೆ ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯ ಕಲಾಸಕ್ತರು ಬಂದು ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಮಕ್ಕಳ ಶಿಬಿರದ ನಿರ್ದೇಶಕ ಹಾಗೂ ಜಾನಪದ ಗಾಯಕ ಡಿ.ಆರ್.ರಾಜಪ್ಪ ಮನವಿ ಮಾಡಿದರು.

ತಾಲ್ಲೂಕಿನ ತೇರಹಳ್ಲಿ ಬೆಟ್ಟದ ಶಿವಗಂಗೆಯ ಆದಿಮ ಸಾಂಸ್ಕೃತಿಕ ಕೇಂದ್ರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಮೇಳವು ಏ.4 ಅಂಬೇಡ್ಕರ್ ಜಯಂತಿಯಂದು ಪ್ರಾರಂಭವಾಗಿ ಮೇ 1 ಬುದ್ಧಪೂರ್ಣಿಮೆ ಅಂದು ಸಮಾರೋಪಗೊಳ್ಳುತ್ತಿದೆ ಎಂದರು.

ಚುಕ್ಕಿಮೇಳದಲ್ಲಿ ಭಾಗವಹಿಸಿರುವ 180 ಮಕ್ಕಳಿಗೆ 18 ದಿನ ವಿಶೇಷ ತರಬೇತಿ ನೀಡಲಾಗಿದೆ. ಸಮಾರಂಭದಲ್ಲಿ 12 ಪ್ರಕಾರದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಗಣ್ಯರು ಮತ್ತು ಸಾರ್ವಜನಿಕರ ಮುಂದೆ ಮಕ್ಕಳು ಪ್ರಸ್ತುತಪಡಿಸುತ್ತಾರೆ. ಜೊತೆಗೆ ಕೆ.ವಿ.ಕಾಳಿದಾಸ ರಚನೆಯ ಅಜ್ಜನ ಹೆಜ್ಜೆ ಜಾಡು ಹಾಗೂ ನಾವೆಂಕಿ ರಚನೆಯ ಕಿತ್ತಳೆ ಹಣ್ಣು ಎಂಬ ಎರಡು ನಾಟಕಗಳನ್ನು ಚಿಣ್ಣರು ನಡೆಸಿಕೊಡುತ್ತಾರೆ ಎಂದು ಮಾಹಿತಿ ನೀಡಿದರು.

ಆದಿಮ ಸಾಂಸ್ಕೃತಿಕ ಕೇಂದ್ರದ ಅಧ್ಯಕ್ಷ ಎನ್. ಮುನಿಸ್ವಾಮಿ, ‘ನೂರಾರು ಮಕ್ಕಳ ಪಾದಸ್ಪರ್ಶದಿಂದ 'ಆದಿಮ ಅಂಗಳ' ಚಿಣ್ಣರ ಕನಸಿನ ಲೋಕವೇ ಆಗಿದೆ. ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಅದಿಮ ಸಾಂಸ್ಕೃತಿಕ ಕೇಂದ್ರದ ಕಾರ್ಯದರ್ಶಿ ಹ.ಮಾ.ರಾಮಚಂದ್ರ ವಹಿಸುವರು. ಅತಿಥಿಗಳಾಗಿ ಜಿಲ್ಲಾಧಿಕಾರಿ ಎಂ.ಆರ್.ರವಿ, ಸಂಸ್ಕೃತಿ ಚಿಂತಕ ನೆಲ್ಲುಕುಂಟೆ ವೆಂಕಟೇಶ್, ರಾಜಪ್ಪ ದಳವಾಯಿ, ಹೋರಾಟಗಾರ್ತಿ ದು.ಸರಸ್ವತಿ ಭಾಗವಹಿಸುತ್ತಾರೆ ಎಂದು ವಿವರಿಸಿದರು.

ಆದಿಮ ಸಾಂಸ್ಕೃತಿಕ ಕೇಂದ್ರದ ಕಾರ್ಯದರ್ಶಿ ಹ.ಮಾ.ರಾಮಚಂದ್ರ, ‘ಸಾಂಸ್ಕೃತಿಕ ತಳಹದಿಯ ಮೇಲೆ ಮಕ್ಕಳಿಗೆ ಚರಿತ್ರೆಯನ್ನು ಅರಿಯುವ, ನೈತಿಕತೆ ಬೆಳೆಸುವ ಜೀವನ ಶಿಕ್ಷಣ ನೀಡಬೇಕಿದೆ. ಕಲಿಯುವ ಮಕ್ಕಳಿಗೆ ಮನೋಲ್ಲಾಸದ ಮೂಲಕ ಕಲಿಸುವ ಬಗೆ ಅರಿಯಲು ಇದೊಂದು ಉತ್ತಮ ಅವಕಾಶ ಎಂಬುದು ಮನದಟ್ಟಾಗಿದೆ’ ಎಂದರು.

ಆದಿಮ ಕೇಂದ್ರದ ಸದಸ್ಯರಾದ ಎಂ.ಮಾರ್ಕಂಡೇಯ, ನೀಲಕಂಠ ಗೌಡ, ಶಿಬಿರದ ಸಂಯೋಜಕರಾದ ಕೆ.ವಿ.ಕಾಳಿದಾಸ, ಎಂ.ಹರೀಶ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260501-18-1858494580

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.