ಕೋಲಾರ: ತಾಲ್ಲೂಕಿನ ಚಿಟ್ನಹಳ್ಳಿಯ ಧರ್ಮರಾಯಸ್ವಾಮಿ ಹೂವಿನ ಕರಗ ಶನಿವಾರ ರಾತ್ರಿ ಅಪಾರ ಜನಸ್ತೋಮದ ಹರ್ಷೋದ್ಗಾರಗಳ ನಡುವೆ ವಿಜೃಂಭಣೆಯಿಂದ ನೆರವೇರಿತು.

ಐದು ವರ್ಷಗಳಿಂದ ನಡೆಯುತ್ತಿರುವ ಕರಗಮಹೋತ್ಸವದಲ್ಲಿ ಕರಗದ ಪೂಜಾರಿ ಕಾಕಿನತ್ತ ಬಾಲರಾಜ್ ಪಾಲ್ಗೊಳ್ಳುತ್ತಿದ್ದಾರೆ. ದೇವಾಲಯದ ಮುಂಭಾಗದ ಆವರಣದಲ್ಲಿ ಮಂಗಳ ವಾದ್ಯ, ಹಲಗೆಗಳ ಲಯಬದ್ದ ತಾಳಕ್ಕೆ ತಕ್ಕಂತೆ ಅವರು ನರ್ತಿಸಿದರು. ಈ ಮೂಲಕ ಬೃಹತ್ ಜನಸ್ತೋಮ ಹರ್ಷದಲ್ಲಿ ತಲ್ಲೀನರಾಗುವಂತೆ ಮಾಡಿದರು.

ವೀರ ಕುಮಾರರ ಗೋವಿಂದಾ ಗೋವಿಂದಾ ಉದ್ಗಾರಗಳ ನಡುವೆ ನಡೆದ ಕರಗ ನೃತ್ಯಕ್ಕೆ ಜನರ ಶಿಳ್ಳೆ ಮತ್ತು ಜೈಕಾರಗಳ ಕರತಾಡನ ಮುಗಿಲು ಮುಟ್ಟಿತ್ತು. ಬಾಲರಾಜ್ ತಮ್ಮ ಅನುಭವವನ್ನು ಕೃತಿಗಿಳಿಸಿ ನೃತ್ಯ ಪ್ರದರ್ಶಿಸಿದರು.

ಚಿಟ್ನಹಳ್ಳಿಯ ತಿಗಳ ಜನಾಂಗ ಕರಗವನ್ನು ಅತ್ಯಂತ ಸಾಂಪ್ರದಾಯಿಕವಾಗಿ ಹಾಗೂ ಭಕ್ತಿಯಿಂದ ನಡೆಸಿಕೊಂಡು ಬರುತ್ತಿದೆ. ಸಮಾಜದ ಅನೇಕ ಮಂದಿ ಕರಗಕ್ಕೆ ಪೂಜೆ ಸಲ್ಲಿಸಿ ಭಕ್ತಿ ಪ್ರದರ್ಶಿಸಿದರು. ಗ್ರಾಮದ ವಿವಿಧ ಬೀದಿಗಳಲ್ಲಿ ಸಂಚರಿಸಿದ ಕರಗಕ್ಕೆ ಜನತೆ ಪೂಜೆ ಸಲ್ಲಿಸಿದರು. ಇದಾದ ನಂತರ ಶನಿವಾರ ಮಧ್ಯಾಹ್ನ ದೇವಾಲಯದ ಮುಂಭಾಗ ಅಗ್ನಿಕುಂಡ ಪ್ರವೇಶ ನಡೆಯಿತು.

ಗ್ರಾಮದಲ್ಲಿ ಅಷ್ಟಮೂರ್ತಮ್ಮ, ದ್ರೌಪತಮ್ಮ, ಧರ್ಮರಾಯಸ್ವಾಮಿ, ವೇಣುಗೋಪಾಲಸ್ವಾಮಿ, ಆಂಜನೇಯಸ್ವಾಮಿ, ರೇಣುಕಾಯಲ್ಲಮ್ಮ ದೇವರುಗಳ ಪುಷ್ಪಪಲ್ಲಕ್ಕಿ ಉತ್ಸವವೂ ನಡೆಯಿತು. ಭಾರತ ಪಠಣವನ್ನು ಪೂಜಾರಿ ವೇಮಗಲ್ ನಾರಾಯಣಸ್ವಾಮಿ ನಡೆಸಿಕೊಟ್ಟರು. ಕರಗ ಮಹೋತ್ಸವದಲ್ಲಿ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಭೇಟಿ ನೀಡಿದ್ದರು.

ಗ್ರಾಮದ ಗೌಡ ಸಿ.ಎಂ.ನಾಗರಾಜ್, ಸಿ.ಚಂದ್ರು, ಸಿ.ಎನ್.ಮುನಿಯಪ್ಪ, ಸಿ.ಎನ್.ಸುಬ್ರಮಣಿ, ಚೌಡರೆಡ್ಡಿ, ಸಿ.ಎನ್.ಮುನಿವೆಂಕಟರೆಡ್ಡಿ, ಆಂಜಿನಪ್ಪ, ಸಿ.ಇ.ನಾರಾಯಣಸ್ವಾಮಿ, ಯಜಮಾನ್ ಮುರುಗೇಶ್, ಕೃಷ್ಣಪ್ಪ, ಚಂದ್ರು, ಮಂಜುನಾಥ್, ನಾರಾಯಣಸ್ವಾಮಿ, ಸಿ.ವಿ.ಸೋಮೇಶ್, ಸುರೇಶ್, ರಾಮಚಂದ್ರ, ರಾಧಾಕೃಷ್ಣ, ಸಿ.ವಿ.ಸೋಮೇಶ್, ಪುರುಷೋತ್ತಮ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260511-18-1049698835

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.