ಕೋಲಾರ: ನಿವೇಶನ ವಿಚಾರವಾಗಿ ನಗರಸಭೆ ಕಚೇರಿ ಆವರಣದಲ್ಲಿ ₹ 15 ಸಾವಿರ ಲಂಚ ಪಡೆಯುತ್ತಿದ್ದ ವೇಳೆ ಕಾರ್ಯಾಚರಣೆ ನಡೆಸಿದ ಲೋಕಾಯುಕ್ತ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಕೋಲಾರ ನಗರಸಭೆಯ ರಾಜಸ್ವ ನಿರೀಕ್ಷಕ ಕಿರಣ್ ಕುಮಾರ್ ಎನ್., ಬಿಲ್ ಕಲೆಕ್ಟರ್ ನಟರಾಜ್ ಹಾಗೂ ಅವರ ಪರವಾಗಿ ಅನಧಿಕೃತವಾಗಿ ಕೆಲಸ ಮಾಡುತ್ತಿದ್ದ ವೆಂಕಟೇಶಪ್ಪ ಎಂಬುವರು ಬಂಧಿತ ಆರೋಪಿಗಳು. ಇವರ ಮೇಲೆ ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ-1988ರಡಿ (ತಿದ್ದುಪಡಿ-2018) ಮಂಗಳವಾರ ಪ್ರಕರಣ ದಾಖಲಿಸಿದ್ದಾರೆ.

ತಾಲ್ಲೂಕಿನ ಕಸಬಾ ಹೋಬಳಿಯ ಸುಲ್ತಾನ್ ತಿಪ್ಪಸಂದ್ರದ ವ್ಯಕ್ತಿಗೆ ಸೇರಿದ ಬಾಬತ್ತು ಗ್ರಾಮದ ಸರ್ವೆ ನಂ.81 ರಲ್ಲಿ 100x70 ಅಡಿಗಳ ನಿವೇಶನದ ಸ್ಥಳವನ್ನು ಪರಿಶೀಲಿಸಿ ವರದಿ ನೀಡಲು ತಿಂಗಳ ಹಿಂದೆ ಬಲವಂತವಾಗಿ ದೂರುದಾರ ಮತ್ತು ಅವರ ಅಳಿಯ ಮುನಾವರ್ ಅವರಿಂದ ₹ 8 ಸಾವಿರ ಪಡೆದಿದ್ದ ಆರೋಪಿಗಳು ಕೆಲಸ ಮಾಡಿಕೊಟ್ಟಿರಲಿಲ್ಲ.

ಅಲ್ಲದೆ, ಪುನಃ ₹ 20 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಸಂಬಂಧ ಮಾಲೀಕರು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಅದರಂತೆ ₹ 15 ಸಾವಿರವನ್ನು ಕೋಲಾರ ನಗರಸಭೆ ಕಾರ್ಯಾಲಯದ ಆವರಣದಲ್ಲಿ ಅಧಿಕಾರಿಗಳ ಪರವಾಗಿ ವೆಂಕಟೇಶಪ್ಪ ಎಂಬುವರು ತೆಗೆದುಕೊಂಡಿದ್ದಾರೆ.

ಆಗ ಲೋಕಾಯುಕ್ತ ಪೊಲೀಸ್ ಜಿಲ್ಲಾ ಅಧೀಕ್ಷಕ ಆ್ಯಂಟೋನಿ ಜಾನ್ ಜೆ.ಕೆ. ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಸುನಿಲ್ ಕುಮಾರ್ ನೇತೃತ್ವದಲ್ಲಿ ಇನ್ಸ್ಪೆಕ್ಟರ್ ಅಂಜನಪ್ಪ ಈ ಕಾರ್ಯಾಚರಣೆ ನಡೆಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದ ಮೂವರು ಆರೋಪಿಗಳನ್ನು ದಸ್ತಗಿರಿ ಮಾಡಲಾಗಿದೆ. ಈ ಪ್ರಕರಣದಲ್ಲಿ ತನಿಖೆಯು ಮುಂದುವರಿದಿದೆ ಎಂದು ಆ್ಯಂಟೋನಿ ಜಾನ್ ತಿಳಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ಲೋಕಾಯುಕ್ತ ಸಿಬ್ಬಂದಿ ವಾಸು, ಮಂಜಪ್ಪ, ಎಸ್.ಆರ್.ದೇವಪ್ಪ, ಕಿಶೋರ್, ರಮೇಶ್, ನಾಗಭೂಷಣ, ಅಜಯ್, ನಫೀಜ್, ಶ್ರೀಧರ್ ಇ ದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260325-18-448548647

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.