ಕೋಲಾರ: ನಗರದ ವಿವಿಧ ಭಾಗಗಳಿಗೆ ಜಿಲ್ಲಾಧಿಕಾರಿ ಎಂ.ಆರ್.ರವಿ ಭೇಟಿ ನೀಡಿದಾಗ ಸಮಸ್ಯೆಗಳ ದರ್ಶನವಾಗಿದ್ದು, ಸಾರ್ವಜನಿಕರು ಸಹ ದೂರುಗಳ ಸುರಿಮಳೆಗರೆದರ.

ನಗರಸಭೆ, ನಗರಾಭಿವೃದ್ಧಿ ಕೋಶ ಅಧಿಕಾರಿಗಳೊಂದಿಗೆ ಕಾಲೇಜು ವೃತ್ತ, ಮೆಕ್ಕೆ ವೃತ್ತ, ಟೇಕಲ್ ರಸ್ತೆ, ಕ್ಲಾಕ್ ಟವರ್, ಎಂ.ಬಿ ರಸ್ತೆ, ಬಸ್ ನಿಲ್ದಾಣದ ವೃತ್ತಗಳಿಗೆ ಭೇಟಿ ನೀಡಿ ವೀಕ್ಷಿಸಿದರು.

ಭೇಟಿ ಸಮಯದಲ್ಲಿ ಅಂಗಡಿ ಮಳಿಗೆಗಳಿಂದ ಪಾದಚಾರಿ ಮಾರ್ಗ ಒತ್ತುವರಿ ಆಗಿರುವುದು, ಕಸದ ರಾಶಿ ಬಿದ್ದಿರುವುದು ಕಂಡು ಬಂತು. ಹೈಮಾಸ್ಟ್ ಲೈಟ್ಗಳ ನಿರ್ವಹಣೆಯಲ್ಲಿ ಸಮಸ್ಯೆ, ಅಸಮರ್ಪಕ ಕಸ ವಿಲೇವಾರಿ, ಯುಜಿಡಿ ಸಮಸ್ಯೆ, ವಾಹನಗಳ ದಟ್ಟಣೆ, ಅವೈಜ್ಞಾನಿಕ ಪಾರ್ಕಿಂಗ್, ಬೀದಿನಾಯಿಗಳ ಹಾವಳಿ, ಬೀದಿ ದೀಪ ಸಮಸ್ಯೆಗಳ ಕುರಿತಂತೆ ಜನರು ಜಿಲ್ಲಾಧಿಕಾರಿ ಗಮನಕ್ಕೆ ತಂದರು.

ನಗರದಲ್ಲಿ ಅಳವಡಿಕೆ ಮಾಡಲಾಗಿರುವ ಹೈಮಾಸ್ಟ್ ಲೈಟ್ಗಳ ನಿರ್ವಹಣೆ ಸಮರ್ಪಕವಾಗಿ ಆಗಬೇಕು, ಸಂಜೆ 6ಕ್ಕೆ ಉರಿಸಬೇಕು, ಬೆಳಿಗ್ಗೆ 6 ನಂತರ ಅದನ್ನು ಆಫ್ ಮಾಡಬೇಕು. ನಗರದ ಬಹುತೇಕ ಸಂಪರ್ಕ ರಸ್ತೆಗಳಲ್ಲಿ ಕತ್ತಲು ಇರುವ ಕುರಿತು ಜನ ಗಮನಕ್ಕೆ ತಂದಿದ್ದಾರೆ. ಕೆಲ ಕಂಬಗಳಲ್ಲಿ ಅನಗತ್ಯವಾಗಿ ಲೈಟ್ ಅಳವಡಿಸಲಾಗಿದ್ದು, ಅದನ್ನು ತೆಗೆದು ಕತ್ತಲಿರುವ ಕಡೆ ಅಳವಡಿಸಬೇಕು ಎಂದು ಎಂ.ಆರ್.ರವಿ, ನಗರಸಭೆಯ ಅಧಿಕಾರಿಗಳಿಗೆ ಸೂಚಿಸಿದರು.

ಕ್ಲಾಕ್ ಟವರ್ ವೃತ್ತದಲ್ಲಿ ವಾಹನಗಳ ದಟ್ಟಣೆ ಹೆಚ್ಚು ಇದೆ. ವೃತ್ತ ಬಿಟ್ಟು ಮುಂದಕ್ಕೆ ಬಸ್ಸುಗಳು ನಿಲುಗಡೆಯಾಗಬೇಕು. ಗ್ಯಾರೇಜ್ನವರು ರಸ್ತೆ ಮೇಲೆ ನಿಲ್ಲಿಸಿರುವ ವಾಹನಗಳನ್ನು ಒಳಕ್ಕೆ ನಿಲ್ಲಿಸಿಕೊಳ್ಳಲು ತಿಳಿ ಹೇಳಬೇಕು. ಆ ಮೂಲಕ ರಸ್ತೆಯಲ್ಲಿ ಸಂಚರಿಸುವ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು. ಸಂಚಾರ ಠಾಣೆ ಸಿಬ್ಬಂದಿ ಕಡ್ಡಾಯವಾಗಿ ವೃತ್ತಗಳಲ್ಲಿ ಇದ್ದು ವಾಹನ ಸವಾರರಿಗೆ ಜಾಗೃತಿ ಮೂಡಿಸಬೇಕು ಎಂದರು.

ನಗರ ಭಾಗದಲ್ಲಿರುವ ಬಾರ್ಗಳು ಸಮಯಕ್ಕೆ ಮೊದಲೇ ತೆರೆಯುವುದು, ತಡವಾಗಿ ಮುಚ್ಚುವುದನ್ನು ಮಾಡುತ್ತಿದ್ದಾರೆ. ಇದನ್ನು ಕೇಳುವವರೇ ಇಲ್ಲ ಎಂದು ಸಾರ್ವಜನಿಕರು ದೂರಿದರು. ಆಗ ಅಬಕಾರಿ ಉಪಆಯುಕ್ತರಿಗೆ ಜಿಲ್ಲಾಧಿಕಾರಿ ಕರೆ ಮಾಡಿ, ಕಾನೂನು ಉಲ್ಲಂಘಿಸಿದವರ ವಿರುದ್ಧ ಕ್ರಮಕೈಗೊಳ್ಳುವಂತೆ ಸೂಚಿಸಿದರು.

ಕೆಎಸ್ಆರ್ಟಿಸಿ ಬಸ್ ನಿಲ್ದಾಣದಿಂದ ಹೊರ ಬರುವ ಹಾಗೂ ನಿಲ್ದಾಣಕ್ಕೆ ಪ್ರವೇಶಿಸುವ ಬಸ್ಸುಗಳು ನಿಯಮ ಪಾಲನೆ ಮಾಡುತ್ತಿಲ್ಲವೆಂದು ಸಾರ್ವಜನಿಕರು ಗಮನಕ್ಕೆ ತರುತ್ತಿದ್ದಂತೆ, ಸಾರಿಗೆ ಸಂಸ್ಥೆ ವಿಭಾಗೀಯ ನಿಯಂತ್ರಣಾಧಿಕಾರಿ ಶ್ರೀನಾಥ್ ಅವರಿಗೆ ದೂರವಾಣಿ ಕರೆ ಮಾಡಿ, ಮಾರ್ಗಸೂಚಿಯಂತೆ ಸಂಚರಿಸಲು ಚಾಲಕರಿಗೆ ಸೂಚನೆ ನೀಡಬೇಕು ಎಂದರು.

ನಗರಸಭೆ ಪೌರಾಯುಕ್ತ ವೆಂಕಟೇಶ ನಾಗನೂರ, ವೃತ್ತನಿರೀಕ್ಷಕ ಸದಾಶಿವ, ಸಂಚಾರಿ ಪಿಎಸ್ಐ ಭಾರತಿ, ನವೀನ್ ಚಂದ್ರ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260521-18-31529967

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.