ಕೋಲಾರ: ಜಿಲ್ಲಾ ಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿಗೆ ಸದಸ್ಯರನ್ನು ಅರ್ಜಿ ಆಹ್ವಾನಿಸದೆ ಏಕಪಕ್ಷೀಯವಾಗಿ ನೇಮಿಸಲಾಗಿದೆ, ದಲಿತ ಸಂಘಟನೆಗಳನ್ನು ನಿರ್ಲಕ್ಷಿಸಲಾಗಿದೆ ಎಂದು ಆರೋಪಿಸಿ ವಿವಿಧ ದಲಿತ ಸಂಘಟನೆಗ ಮುಖಂಡರು ನಗರದ ಸಮಾಜ ಕಲ್ಯಾಣ ಇಲಾಖೆ ಕಚೇರಿ ಮುಂದೆ ಮಂಗಳವಾರ ಪ್ರತಿಭಟನೆ ನಡೆಸಿದರು.

ಕೂಡಲೇ ಸಮಿತಿಯನ್ನು ರದ್ದು ಮಾಡಿ, ಹೊಸ ಸಮಿತಿ ರಚಿಸಬೇಕು. ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಎಂ.ಶ್ರೀನಿವಾಸನ್ ಅವರನ್ನು ಮಾತೃ ಇಲಾಖೆಗೆ (ತೋಟಗಾರಿಕೆ ಇಲಾಖೆ) ವಾಪಸ್ ಕಳಿಸಬೇಕು ಎಂದು ಒತ್ತಾಯಿಸಿದರು.

‘ಜಿಲ್ಲಾ ಮಟ್ಟದಲ್ಲಿ ದಲಿತರ ಕುಂದುಕೊರತೆಗಳ ಬಗ್ಗೆ ಚರ್ಚೆ ನಡೆಸಲು ಇರುವ ಸಮಿತಿ ರಚನೆ ಸಂಬಂಧ ಪೂರ್ವಭಾವಿಯಾಗಿ ಪತ್ರಿಕಾ ಹೇಳಿಕೆಯಾಗಲಿ, ಅರ್ಜಿಗಳ ಅಹ್ವಾನವಾಗಲಿ ನಿಯಮಾನುಸಾರ ನಡೆಸಿಲ್ಲ. ಏಕಪಕ್ಷೀಯ ತೀರ್ಮಾನ ಕೈಗೊಳ್ಳಲಾಗಿದೆ. ಎಸ್ಸಿ, ಎಸ್ಟಿ, ಮಹಿಳೆಯರು, ಭೋವಿ ಸೇರಿದಂತೆ ಎಲ್ಲಾ ಸಮುದಾಯಕ್ಕೂ ಅವಕಾಶ ನೀಡಬೇಕಿತ್ತು. ಹೊಸದಾಗಿ ಸಮಿತಿ ರಚಿಸಬೇಕು, ಇಲ್ಲದಿದ್ದರೆ ಕೆಡಿಪಿ ಸಭೆ ಸೇರಿದಂತೆ ಪ್ರತಿ ಕಾರ್ಯಕ್ರಮದಲ್ಲಿ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

ದಮನಿತರ ಸೇವಾ ಸಮಿತಿ ರಾಜ್ಯ ಅಧ್ಯಕ್ಷ ಮೇಡಿಹಾಳ ಮುನಿಅಂಜಿನಪ್ಪ, ದಲಿತ ಸೇನೆ ರಾಜ್ಯ ಅಧ್ಯಕ್ಷ ದಲಿತ್ ನಾರಾಯಣಸ್ವಾಮಿ, ಗಾಂಧಿನಗರ ರಾಜಕುಮಾರ್, ದಲಿತ ಸಂಘಟನೆಗಳ ಸಂಯುಕ್ತ ರಂಗದ ಅಧ್ಯಕ್ಷ ಡಿಪಿಎಸ್ ಮುನಿರಾಜು, ಮುಖಂಡರಾದ ಮತ್ತಿಕುಂಟೆ ಕೃಷ್ಣಪ್ಪ, ಪಿವಿಸಿ ಕೃಷ್ಣಪ್ಪ, ಸಂಗಸಂದ್ರ ವಿಜಯಕುಮಾರ್, ಮಂಜುಳಾ, ಚೇತನ್ ಬಾಬು, ಯುವರಾಜ್, ಮೋಚಿಪಾಳ್ಯ ನಾಗೇಶ್, ಮಂಜುನಾಥ್, ಹರಳಕುಂಟೆ ರಾಜ್, ಆನಂದ್, ಶ್ರೀರಾಮಪುರ ರವಿ ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260430-18-592490089

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.