ಕೊತ್ತೂರು: ಅಭಿವೃದ್ಧಿ ಕಾಮಗಾರಿ, ಗ್ಯಾರಂಟಿ ಯೋಜನೆ ಹಾಗೂ ಹಾಲಿನ ಪ್ರೋತ್ಸಾಹಧನ ಸೇರಿ ಕೋಲಾರ ವಿಧಾನಸಭಾ ಕ್ಷೇತ್ರಕ್ಕೆ ಮೂರು ವರ್ಷಗಳಲ್ಲಿ ಒಟ್ಟು ₹ 3,834.37 ಕೋಟಿ ಅನುದಾನ ಸಿಕ್ಕಿದೆ. ಬರೀ ಅಭಿವೃದ್ಧಿ ಕಾಮಗಾರಿಗೆಂದೇ ₹ 2,583.43 ಕೋಟಿ ಲಭಿಸಿದೆ ಎಂದು ಶಾಸಕ ಕೊತ್ತೂರು ಮಂಜುನಾಥ್ ತಿಳಿಸಿದರು.

ನಗರ ಹೊರವಲಯದ ಅರಣ್ಯ ಇಲಾಖೆ ಪ್ರವಾಸಿ ಮಂದಿರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕ್ಷೇತ್ರದಲ್ಲಿ ಏನೂ ಅಭಿವೃದ್ಧಿ ಕೆಲಸ ಆಗಿಲ್ಲವೆಂದು ಮಾಜಿ ಸಂಸದ ಎಂ.ಮುನಿಸ್ವಾಮಿ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ಓಂಶಕ್ತಿ ಛಲಪತಿ ಈಚೆಗೆ ಟೀಕಿಸಿದ್ದರು. ಅವರು ಟೀಕಿಸಿದ್ದರಲ್ಲಿ ತಪ್ಪಿಲ್ಲ. ವಿರೋಧ ಪಕ್ಷದ ಜವಾಬ್ದಾರಿಯನ್ನುಅವರು ನಿಭಾಯಿಸಿದ್ದಾರೆ. ಹೀಗಾಗಿ, ಕ್ಷೇತ್ರಕ್ಕೆ ಎಷ್ಟು ಅನುದಾನ ತಂದಿದ್ದೇವೆ ಹಾಗೂ ಏನಲ್ಲಾ ಅಭಿವೃದ್ಧಿ ಕೆಲಸಗಳು ನಡೆದಿವೆ ಎಂಬುದ ಬಗ್ಗೆ ನಾವು ಜನರಿಗೆ ದಾಖಲೆಗಳ ಸಮೇತ ನಿಜವಾದ ಮಾಹಿತಿ ಕೊಡುತ್ತಿದ್ದೇವೆ’ ಎಂದರು.

ವೈದ್ಯಕೀಯ ಕಾಲೇಜು ಸಂಬಂಧ ಪಿಪಿಪಿ ಮಾದರಿಗೆ ಟೀಕೆ ಹಾಗೂ ಆರೋಪ ಎದುರಾದ ಕಾರಣ ಕೈಬಿಡಲಾಯಿತು. ಸರ್ಕಾರಿ ವೈದ್ಯಕೀಯ ಕಾಲೇಜು ನಿರ್ಮಾಣ ಸಂಬಂಧ ರಾಜ್ಯ ಸರ್ಕಾರಕ್ಕೆ ಡಿಪಿಆರ್ ಸಲ್ಲಿಕೆ ಆಗಿದ್ದು, ಕಾಮಗಾರಿಗೆ ₹ 500 ಕೋಟಿ ಅನುದಾನ ಸಿಗಲಿದೆ. ಅರಣ್ಯ ಇಲಾಖೆ ಜಾಗ ಪಡೆದು ಅವರಿಗೆ ಬದಲಿ ಜಾಗ ಕೊಟ್ಟಿದ್ದೇವೆ. ವೈದ್ಯಕೀಯ ಕಾಲೇಜು ಸಂಬಂಧ ಮುಂದೆ ಪ್ರವಾಸಿ ಮಂದಿರದ ಜಾಗವನ್ನು ಬಳಸಿಕೊಳ್ಳಬಹುದು. ಪ್ರವಾಸಿ ಮಂದಿರಕ್ಕೆ ಬೇರೆ ಕಡೆ ಆರು ಎಕರೆ ಜಾಗ ನಿಗದಿಪಡಿಸಿದ್ದೇವೆ ಎಂದರು.

ಕೆಎಸ್ಎಚ್ಐಪಿನಿಂದ ಬೆಂಗಳೂರು ಗ್ರಾಮಾಂತರ ಗಡಿಯಿಂದ ಕೋಲಾರಕ್ಕೆ ₹ 537.46 ಕೋಟಿ ಹಾಗೂ ವೇಮಗಲ್ನಿಂದ ಮಾಲೂರು ಗಡಿವರೆಗೆ ₹ 340.34 ಕೋಟಿ ಸೇರಿ ಸುಮಾರು ₹ 877.8 ಕೋಟಿ ವೆಚ್ಚದಲ್ಲಿ ಹೆದ್ದಾರಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಮಾರ್ಚ್ನೊಳಗೆ ಕೋಲಾರ ಕ್ಷೇತ್ರದ ವ್ಯಾಪ್ತಿಯಲ್ಲಿ ಹೆದ್ದಾರಿ ಕಾಮಗಾರಿ ಪೂರ್ಣಗೊಳಿಸಿ ಜನರ ಓಡಾಟಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ ಎಂದು ಭರವಸೆ ನೀಡಿದರು.

ಉನ್ನತ ಶಿಕ್ಷಣ ಇಲಾಖೆಯಿಂದ ಕ್ಷೇತ್ರಕ್ಕೆ ₹ 103.39 ಕೋಟಿ ಅನುದಾನ ಬಂದಿದೆ. ರಾಜ್ಯದ ಬೇರೆ ಯಾವುದೇ ತಾಲ್ಲೂಕಿಗೂ ಇಷ್ಟು ಹಣ ಬಂದಿಲ್ಲ ಎಂದರು.

ಎಪಿಎಂಸಿ ಮಾರುಕಟ್ಟೆಗೆ 87 ಎಕರೆ ಜಾಗವನ್ನು ಕೋರಗೊಂಡನಹಳ್ಳಿ/ಕೋನೆಪುರ ಬಳಿ ಗುರುತಿಸಲಾಗಿದೆ. 60.30 ಎಕರೆ ಜಾಗ ಮಂಜೂರಾತಿ ಹಂತದಲ್ಲಿದೆ. ಇನ್ನೂ 19.10 ಎಕರೆ ಜಾಗ ಪಡೆಯುವ ಪ್ರಕ್ರಿಯೆ ನಡೆಯುತ್ತಿದೆ ಎಂದರು.

ಕೋಲಾರ ನಗರದಲ್ಲಿ ದಟ್ಟಣೆ ಹೆಚ್ಚಿದ್ದು, ರಸ್ತೆ ವಿಸ್ತರಣೆ ಬಗ್ಗೆ ಕೇಳಿದ ಪ್ರಶ್ನೆಗೆ, ‘ಈ ಸಂಬಂಧ ಪ್ರಯತ್ನ ನಡೆಸುತ್ತಿದ್ದೇವೆ. ಆದರೆ, ತೆರವು ಕಾರ್ಯಾಚರಣೆ ನಡೆಸಿ ನ್ಯಾಯಾಲಯ ಮೊರೆ ಹೋಗಬಹುದು, ರಾಜಕೀಯ ನಿರ್ಮಾಣವಾಗುತ್ತದೆ. ಹೀಗಾಗಿ, ಎಲ್ಲರ ಸಭೆ ಕರೆದು ಚರ್ಚಿಸಿ ಕ್ರಮ ವಹಿಸಬೇಕಾಗುತ್ತದೆ’ ಎಂದು ತಿಳಿಸಿದರು.

ರೈಲು ಯೋಜನೆಗೆ ಭೂಸ್ವಾಧೀನ ಕ್ರಮ ವಹಿಸಿಲ್ಲ ಎಂಬ ಸಂಸದರ ಆರೋಪಕ್ಕೆ ಪ್ರತಿಕ್ರಿಯಿಸಿ, ‘ರೈಲು ಯೋಜನೆಗೆ ಜಮೀನು ಹಾಗೂ ಯೋಜನೆಗೆ ಶೇ 50 ಹಣ ಕೊಡಬೇಕು ಎಂಬುದಾಗಿ ಕೇಳಿದ್ದಾರೆ. ಆದರೆ, ನಾವು ಜಾಗ ಕೊಡುತ್ತೇವೆ, ಯೋಜನೆ ಹಣವನ್ನು ಅವರೇ ಸಂಪೂರ್ಣವಾಗಿ ಭರಿಸಬೇಕು. ಈ ಸಂಬಂಧ ಕೇಂದ್ರ ಸರ್ಕಾರದಿಂದ ರಾಜ್ಯ ಸರ್ಕಾರಕ್ಕೆ ಪತ್ರ ಬರಬೇಕು. ಮುಳಬಾಗಿಲಿನಿಂದ ಕೋಲಾರ ಮೂಲಕ ವೈಟ್ಫೀಲ್ಡ್ಗೆ ರೈಲು ಬರಬೇಕು’ ಎಂದರು.

ವಿಧಾನ ಪರಿಷತ್ ಸದಸ್ಯ ಎಂ.ಎಲ್.ಅನಿಲ್ ಕುಮಾರ್ ಮಾತನಾಡಿ, ‘ಹೆದ್ದಾರಿ ವಿಚಾರವಾಗಿ ದೇವನಹಳ್ಳಿಯಿಂದ ಮಾಲೂರುವರೆಗೆ ಐದು ವಿಧಾನಸಭಾ ಕ್ಷೇತ್ರ ಇದ್ದು, ವೇಮಗಲ್ನಿಂದ ಮಾಲೂರು ಗಡಿವರೆಗೆ ₹ 340 ಕೋಟಿ ವೆಚ್ಚದಲ್ಲಿ ಕಾಮಗಾರಿ ನಡೆಯಲಿದೆ’ ಎಂದು ಹೇಳಿದರು.

ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರ ಆರೋಪದ ಬಗ್ಗೆ ಪ್ರತಿಕ್ರಿಯಿಸಿ, ‘ಅಧಿಕಾರಿಗಳು ಭ್ರಷ್ಟರಾದರೆ ಜನರೂ ಭ್ರಷ್ಟರಾಗಿದ್ದಾರೆ ಎಂದು ಅರ್ಥ. ಯಾವ ಕಚೇರಿಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂಬುದನ್ನು ನಿಖರವಾಗಿ ಹೇಳಬೇಕು. ತಹಶೀಲ್ದಾರ್ ಕಚೇರಿ ಸಂಬಂಧ ದೂರುಗಳಿದ್ದು, ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತರಲಾಗಿದೆ’ ಎಂದರು.

ಕೋಮುಲ್ ನಿರ್ದೇಶಕ ಚಂಚಿಮಲೆ ರಮೇಶ್, ಕುಡಾ ಅಧ್ಯಕ್ಷ ಮೊಹಮ್ಮದ್ ಹನೀಫ್, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ವೈ.ಶಿವಕುಮಾರ್, ತಾಲ್ಲೂಕು ಅಧ್ಯಕ್ಷ ವೇಮಗಲ್ ಮುನಿಯಪ್ಪ, ಕಾಂಗ್ರೆಸ್ ಗ್ರಾಮಾಂತರ ಬ್ಲಾಕ್ ಅಧ್ಯಕ್ಷ ಮೈಲಾಂಡಹಳ್ಳಿ ಮುರಳಿ, ಕಾಂಗ್ರೆಸ್ ನಗರ ಬ್ಲಾಕ್ ಅಧ್ಯಕ್ಷ ಅಫ್ಸರ್, ಕೋಮುಲ್ ನಾಮಿನಿ ನಿರ್ದೇಶಕ ಶಂಶೀರ್, ಮುಖಂಡರಾದ ಬೆಳಗಾನಹಳ್ಳಿ ಮುನಿವೆಂಕಟಪ್ಪ, ಖಾಜಿಕಲ್ಲಹಳ್ಳಿ ಮುನಿರಾಜು, ಉರಟಅಗ್ರಹಾರ ಚೌಡರೆಡ್ಡಿ, ಪೆಮ್ಮಶೆಟ್ಟಹಳ್ಳಿ ಸುರೇಶ್ ಹಾಗೂ ಮುಖಂಡರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260528-18-1477114728

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.