ಕೋಲಾರ: ಜಿಲ್ಲಾ ಜಾಗೃತಿ ಹಾಗೂ ಉಸ್ತುವಾರಿ ಸಮಿತಿಗೆ ಸದಸ್ಯರನ್ನು ಕಾನೂನು ಬಾಹಿರವಾಗಿ ಆಯ್ಕೆ ಮಾಡಿದ್ದು ಕೂಡಲೇ ಸಮಿತಿ ವಜಾಗೊಳಿಸಿ ನಿಯಮಾನುಸಾರ ನೇಮಕ ಮಾಡುವಂತೆ ಮಾಜಿ ಸಂಸದ ಎಸ್ ಮುನಿಸ್ವಾಮಿ ನೇತೃತ್ವದಲ್ಲಿ ವಿವಿಧ ದಲಿತ ಸಂಘಟನೆಗಳ ಮುಖಂಡರು ಬುಧವಾರ ಜಿಲ್ಲಾಧಿಕಾರಿಗೆ ಮನವಿ ಮಾಡಿದರು.

ಮುನಿಸ್ವಾಮಿ ಮಾತನಾಡಿ, ‘ದೇಶದಲ್ಲಿ ಹೆಚ್ಚು ದಲಿತರು ಇರುವ ಎರಡನೇ ಜಿಲ್ಲೆ ಕೋಲಾರ. ಇಲ್ಲಿ ದಲಿತರಿಗೆ ಗೊತ್ತಿಲ್ಲದೇ ಜಾಗೃತಿ ಸಮಿತಿಗೆ ಸದಸ್ಯರ ಆಯ್ಕೆ ಮಾಡಲಾಗಿದೆ. ಯಾವುದೇ ಅರ್ಜಿ ಪಡೆದಿಲ್ಲ, ಪ್ರಚಾರ ಮಾಡಿಲ್ಲ. ಹೇಗೆ ನೇಮಕ ಮಾಡಿದ್ದಾರೆ? ಕೂಡಲೇ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರನ್ನು ವರ್ಗಾವಣೆ ಮಾಡಬೇಕು. ಯಾರೋ ರಾಜಕೀಯ ಪಕ್ಷಗಳ ಏಜೆಂಟರಿಗೆ ಅವಕಾಶ ಕೊಟ್ಟಿದ್ದು ಸರಿಯಲ್ಲ’ ಎಂದರು.

ದಲಿತ ದಮನಿತರ ಸೇವಾ ಸಮಿತಿಯ ರಾಜ್ಯ ಅಧ್ಯಕ್ಷ ಮೇಡಿಹಾಳ ಮುನಿಅಂಜಿನಪ್ಪ, ದಲಿತ ಸಂಘಟನೆಗಳ ಸಂಯುಕ್ತ ರಂಗದ ಜಿಲ್ಲಾ ಅಧ್ಯಕ್ಷ ಡಿಪಿಎಸ್ ಮುನಿರಾಜು ಮಾತನಾಡಿದರು.

ಜಿಲ್ಲಾಧಿಕಾರಿ ಎಂ.ಆರ್.ರವಿ ಮಾತನಾಡಿ, ಸಮಿತಿ ರಚನೆಯ ಮಾನದಂಡ ಪರಿಶೀಲಿಸಿ ನಿಯಮಗಳಂತೆ ಮಾಡಲಾಗುತ್ತದೆ ಎಂದರು.

ದಲಿತ್ ನಾರಾಯಣಸ್ವಾಮಿ, ರಾಜಕುಮಾರ್, ಮಂಜುಳಾ, ಕೃಷ್ಣಪ್ಪ, ಮೋಚಿಪಾಳ್ಯ ನಾಗೇಶ್, ಹರಳಕುಂಟೆ ರಾಜ್, ವೇಣು, ಮಂಜುನಾಥ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260430-18-686235850

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.