ಕೋಲಾರ: ತಾಲ್ಲೂಕಿನ ಯಲ್ದೂರು ಹಾಗೂ ಪುರ್ನಹಳ್ಳಿ ಗ್ರಾಮದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಜನ್ಮದಿನದ ಅಂಗವಾಗಿ ನಡೆದ ಪ್ರತ್ಯೇಕ ಕಾರ್ಯಕ್ರಮಗಳಲ್ಲಿ ತಿಮ್ಮಾರೆಡ್ಡಿ ಅವರು ಶ್ರೀನಿವಾಸಪುರ ತಾಲ್ಲೂಕು ಆಸ್ಪತ್ರೆ ಹಾಗೂ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಉಚಿತವಾಗಿ ನೀಡಿರುವ ಶವ ಪೆಟ್ಟಿಗೆ (ಫ್ರೀಜರ್) ಮಾಜಿ ಶಾಸಕ ಕೆ.ಆರ್.ರಮೇಶ್ ಕುಮಾರ್ ವಿತರಿಸಿದರು.

ಬಳಿಕ ಮಾತನಾಡಿದ ಅವರು, ‘ಸಮಾಜ ಸೇವೆಯ ಮೂಲಕ ಬಡವರಿಗೆ ನೆರವಾಗುವ ಕೆಲಸ ದೇವರಿಗೂ ಪ್ರೀತಿಯಾಗಿರುತ್ತದೆ. ಹಸಿದವನಿಗೆ, ಅಗತ್ಯವಿದ್ದವನಿಗೆ ಊಟ ಹಾಕಿದರೆ ಅದು ಸಾರ್ಥಕವಾಗುತ್ತದೆ’ ಎಂದರು.

ಇಂದು ಸಮಾಜದಲ್ಲಿ ಉಳ್ಳವರು ಎಷ್ಟೋ ಮಂದಿ ಇದ್ದಾರೆ. ಆದರೆ ಎಲ್ಲರಿಗೂ ಸಹಾಯ ಮಾಡುವ ಗುಣ ಬರಲಾರದು. ಈ ಫ್ರೀಜರ್ ಅನ್ನು ಬಡವರಿಗೂ ಸಿಗುವಂತೆ ಮಾಡಿರುವ ಪ್ರಯತ್ನ ಶ್ಲಾಘನೀಯ ಎಂದು ಹೇಳಿದರು.

ರಾಯಲ್ಪಾಡು, ಅಡ್ಡಗಲ್, ಸೋಮಯಾಜ ಹಳ್ಳಿ, ಗೌನಿಪಲ್ಲಿ , ರೋಣೂರು, ಯಲ್ದೂರು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ವಿತರಿಸಲಾಯಿತು.

ಪುರ್ನಹಳ್ಳಿ ಗ್ರಾಮದಲ್ಲಿ ಡಿ.ಕೆ.ಶಿವಕುಮಾರ್ ಅವರ ಜನ್ಮದಿನ ಹಾಗೂ ಪ್ರತಿಭಾ ಪುರಸ್ಕಾರ ವಿವಿಧ ಕಾರ್ಯಕ್ರಮಗಳಿಗೆ ಅವರು ಚಾಲನೆ ನೀಡಿದರು. ಪಿಯುಸಿ, ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳನ್ನು ಗಳಿಸಿರುವ 25 ವಿದ್ಯಾರ್ಥಿಗಳಿಗೆ ತಲಾ ₹ 10 ಸಾವಿರ ಪ್ರೋತ್ಸಾಹಧನ ವಿತರಿಸಿದರು.

ತಿಮ್ಮಾರೆಡ್ಡಿ, ಶ್ರೀರಾಮಬಾಬು, ಗೋವಿಂದಪ್ಪ, ಕೆ.ಕೆ.ಮಂಜುನಾಥ್ , ಎಸ್.ವಿ.ಸುಧಾಕರ್, ಸಂಜಯ್ರೆಡ್ಡಿ, ಚೌಡರೆಡ್ಡಿ, ಗೌರಮ್ಮ ಇತರರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260521-18-1306961639

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.