ಬೇತಮಂಗಲ: ಜಿಲ್ಲೆಯ ಅತಿ ದೊಡ್ಡ ಕೆರೆಗಳಾದ ರಾಮಸಾಗರ ಹಾಗೂ ಬೇತಮಂಗಲ ಪಾಲಾರ್ ಕೆರೆಗಳು ಮರುಪೂರಣಗೊಂಡಿರುವುದರಿಂದ ಅಂತರ್ಜಲ ಮಟ್ಟ ವೃದ್ಧಿಸಿದೆ. ಇದರಿಂದ ಸ್ಥಳೀಯ ಕೊಳವೆ ಬಾವಿಗಳಲ್ಲಿ ಉತ್ತಮ ನೀರು ಲಭ್ಯವಿದೆ. ಜನ-ಜಾನುವಾರು ಕುಡಿಯುವ ನೀರಿನ ಅಭಾವ ನೀಗಿದಂತಾಗಿದೆ ಎಂದು ಶಾಸಕಿ ಎಂ.ರೂಪಕಲಾ ತಿಳಿಸಿದರು.

ಕೆಜಿಎಫ್ ತಾಲ್ಲೂಕಿನ ಶ್ರೀನಿವಾಸಸಂದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಲ್ಲಂಪಲ್ಲಿ, ಜೆ.ಕೆ.ಪುರ, ನಾಗಕುಪ್ಪ, ಶ್ರೀನಿವಾಸಸಂದ್ರ ಹಾಗೂ ಮೇಲುಪಲ್ಲಿ ಗ್ರಾಮಗಳಲ್ಲಿ ತಲಾ ₹12ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಉದ್ಘಾಟಿಸಿ ಮಾತನಾಡಿದರು. ಬೇಸಿಗೆ ಎದುರಿಸಲು ಸನ್ನದ್ಧ: ಯುಗಾದಿ ನಂತರ ಬೇಸಿಗೆ ತಾಪ ಹೆಚ್ಚುತ್ತಿರುವುದರಿಂದ ಯಾವುದೇ ಗ್ರಾಮದಲ್ಲಿ ನೀರಿನ ಸಮಸ್ಯೆ ಉದ್ಭವಿಸದಂತೆ ಮುನ್ನೆಚ್ಚರಿಕೆ ವಹಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಜಿಲ್ಲಾಡಳಿತದ ವತಿಯಿಂದ ವಿಶೇಷ ಅನುದಾನದ ಕ್ರಿಯಾಯೋಜನೆ ರೂಪಿಸಲಾಗಿದೆ ಎಂದರು.

ದಾನಿಗಳ ಕಾರ್ಯಕ್ಕೆ ಶ್ಲಾಘನೆ: ಬಲ್ಲಂಪಲ್ಲಿಯಲ್ಲಿ ಘಟಕ ಸ್ಥಾಪಿಸಲು ಜಾಗದ ಕೊರತೆ ಇದ್ದಾಗ ಉಚಿತವಾಗಿ ಸ್ಥಳ ದಾನ ಮಾಡಿದ ಸುಮಾ ನಾರಾಯಣಪ್ಪ ಅವರನ್ನು ಶಾಸಕರು ಸನ್ಮಾನಿಸಿದರು. ಮಾಜಿ ಶಾಸಕ ಎಂ.ನಾರಾಯಣಸ್ವಾಮಿ ಮಾತನಾಡಿ, ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಯೇ ರೂಪಕಲಾ ಅವರ ಏಕೈಕ ಗುರಿ ಎಂದು ಶ್ಲಾಘಿಸಿದರು.

ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಸ್ಕೂಲ್ ವೆಂಕಟೇಶಪ್ಪ ಮಾತನಾಡಿ, ಕ್ಷೇತ್ರದ ಅಭಿವೃದ್ಧಿ ಹರಿಕಾರರಾದ ರೂಪಕಲಾ ಅವರ ರಾಜಕೀಯ ಭವಿಷ್ಯ ಉತ್ತಮವಾಗಿದೆ ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಮ್ಮಸಂದ್ರ ನಾಗರಾಜ್, ಗ್ರಾ.ಪಂ ಮಾಜಿ ಅಧ್ಯಕ್ಷೆ ಗೀತಾಕಲಾ ವೆಂಕಟೇಶ್, ಅಯ್ಯಪಲ್ಲಿ ಮಂಜುನಾಥ್, ಮಾಜಿ ಸದಸ್ಯರಾದ ಗಜೇಂದ್ರ ರೆಡ್ಡಿ, ವಸಂತ್ ರೆಡ್ಡಿ, ಮುಖಂಡರಾದ ದೇವರಾಜ್ ರೆಡ್ಡಿ, ಸುಮಾ ನಾರಾಯಣಪ್ಪ,ದಿಲೀಪ್, ರಾಮಪ್ಪ, ಭಾಸ್ಕರ್ ರೆಡ್ಡಿ, ಏತೂರು ಚಂದ್ರಶೇಖರ್, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಬಾಬು, ಎನ್ಟಿಆರ್ ಶ್ರೀನಿವಾಸ್ ರೆಡ್ಡಿ, ರಾಮಕೃಷ್ಣ ರೆಡ್ಡಿ, ವಕೀಲ ಪದ್ಮನಾಭ ರೆಡ್ಡಿ, ಬ್ಯಾಟೇಗೌಡ ಹಾಗೂ ಅನೇಕ ಮುಖಂಡರು, ಯುವಕರು, ಮಹಿಳೆಯರು ಗ್ರಾಮಸ್ಥರು ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260330-18-1061868015

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.