ಕೋಲಾರ: ದೊಡ್ಡ ದೊಡ್ಡ ಎಂಜಿನಿಯರ್ಗಳನ್ನು ರೂಪಿಸಿದ್ದರೂ, ಎಷ್ಟೆಲ್ಲಾ ಪ್ರತಿಭೆಗಳಿದ್ದರೂ ನಮ್ಮ ನಗರಗಳೇಕೆ ಯೋಜನಾ ಬದ್ಧವಾಗಿಲ್ಲ? ಕೋಲಾರ ನಗರವೇ ಅದಕ್ಕೊಂದು ಉದಾಹರಣೆ. ಸಾಮಾಜಿಕ ಸಮಸ್ಯೆಗಳಿಗೆ ಎಂಜಿನಿಯರ್ಗಳು ಸ್ಪಂದಿಸಬೇಕು, ತಮ್ಮ ಕ್ಷೇತ್ರಕ್ಕೆ ಸಂಬಂಧಿಸಿದ ಕೌಶಲ ಬೆಳೆಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಎಂ.ಆರ್.ರವಿ ಸಲಹೆ ನೀಡಿದರು.

ನಗರ ಹೊರವಲಯದ ಸಿ.ಬೈರೇಗೌಡ ತಾಂತ್ರಿಕ ಸಂಸ್ಥೆಯಲ್ಲಿ (ಸಿಬಿಐಟಿ) ಶುಕ್ರವಾರ ನಡೆದ ಪದವಿ ಪ್ರದಾನ-2026 ಕಾರ್ಯಕ್ರಮದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.

ವಿದೇಶಕ್ಕೆ ಪ್ರತಿಭಾ ಪಲಾಯನವಾಗುತ್ತಿದೆ. ಅಲ್ಲಿ ಹೋಗಿ ದೊಡ್ಡದೊಡ್ಡ ಯೋಜನೆಗಳಿಗೆ ವಿನ್ಯಾಸ ಮಾಡುತ್ತಿದ್ದಾರೆ. ಆದರೆ, ಅವರ ಪೋಷಕರು ಮಾತ್ರ ಇಲ್ಲಿನ ಅದೇ ಅಡ್ಡದಿಡ್ಡಿ ಬೆಳೆದಿರುವ ನಗರದಲ್ಲಿ ವಾಸ ಮಾಡುತ್ತಿದ್ದಾರೆ. ಯಾವುದೇ ದೇಶಕ್ಕೆ ಹೋಗಿ ಕೆಲಸ ಮಾಡಿ, ಆದರೆ ಜನ್ಮ ನೀಡಿದ ದೇಶಕ್ಕೂ ಸ್ವಲ್ಪ ಕೊಡುಗೆ ನೀಡುವುದನ್ನು ಮರೆಯಬೇಡಿ ಎಂದು ಮನವಿ ಮಾಡಿದರು.

ವಿಶ್ವವಿದ್ಯಾಲಯಗಳು ಹಾಗೂ ಕಾಲೇಜುಗಳು ಕೇವಲ ಪದವೀಧರರನ್ನು ಸೃಷ್ಟಿಸುತ್ತಿವೆ. ಪೋಷಕರು ತಮ್ಮಷ್ಟು ಓದಿಲ್ಲ, ಹೆಚ್ಚಿನವರು ವಿಶ್ವವಿದ್ಯಾಲಯದಮೆಟ್ಟಿಲು ಹತ್ತಿದವರಲ್ಲ. ಆದರೆ ಅವರ ಜೀವನ ಕೌಶಲ, ಜೀವನ ಪ್ರೀತಿ, ಸವಾಲುಗಳನ್ನು ಎದುರಿಸುವ ಚಾಕಚಕ್ಯತೆಯನ್ನು ಯಾವುದೇ ಕಾಲೇಜು, ವಿಶ್ವವಿದ್ಯಾಲಯ ಕಲಿಸಲ್ಲ ಎಂದು ಅಭಿಪ್ರಾಯಪಟ್ಟರು.

ತಂದೆ ತಾಯಿಗಳೇ ರೋಲ್ ಮಾಡೆಲ್ ಆಗಿರಬೇಕು. ತಮ್ಮ ಎಲ್ಲಾ ಸಾಧನೆಗಳಿಗೆ ಅವರೇ ಕಾರಣ. ತಾವು ಶ್ರೇಷ್ಠ ಎಂಜಿನಿಯರ್ ಆಗಬಹುದು; ಆದರೆ ಅವರು ಬಯಸುವುದು ಉತ್ತಮ ವ್ಯಕ್ತಿತ್ವವನ್ನು. ಹೀಗಾಗಿ, ಶಿಕ್ಷಕರು ಹಾಗೂ ಪೋಷಕರ ಶ್ರಮವನ್ನು ಮರೆಯಬಾರದು ಎಂದು ಕಿವಿಮಾತು ಹೇಳಿದರು.

ಶಿಕ್ಷಣ ವಾಣಿಜ್ಯೀಕರಣಗೊಂಡಿರುವ ಈ ಕಾಲಘಟ್ಟದಲ್ಲಿ ಗ್ರಾಮಾಂತರ ಪ್ರದೇಶದಲ್ಲಿ ತಾಂತ್ರಿಕ ಕಾಲೇಜು ಸ್ಥಾಪನೆ ಮಾಡುವುದು ತಮಾಷೆಯಲ್ಲ. 285 ಪದವೀಧರರಲ್ಲಿ 180 ವಿದ್ಯಾರ್ಥಿಗಳಿಗೆ ಪ್ಲೇಸ್ಮೆಂಟ್ ಆಗಿರುವುದು ಸಂತೋಷದ ವಿಚಾರ ಎಂದು ತಿಳಿಸಿದರು.

ಕಾಲೇಜಿನ ಕಾರ್ಯದರ್ಶಿ ವಿ.ಕೃಷ್ಣಾರೆಡ್ಡಿ ಮಾತನಾಡಿ, ವಿದ್ಯಾರ್ಥಿಗಳ ಶ್ರಮದಲ್ಲಿ ಪೋಷಕರ ಬೆವರು ಇದೆ. ಅವರ ಆಸೆ ಪೂರೈಸಿ. ಅವರ ಕಣ್ಣಲ್ಲಿ ನೀರು ಹಾಕಿಸಬೇಡಿ ಎಂದರು.

ಮಾಜಿ ಸಚಿವ ದಿವಂಗತ ಸಿ.ಬೈರೇಗೌಡರಿಗೆ ಗ್ರಾಮಾಂತರ ಪ್ರದೇಶದಲ್ಲಿ ತಾಂತ್ರಿಕ ಶಿಕ್ಷಣ ಕೊಡಬೇಕೆಂಬುದು ಆಸೆ ಇತ್ತು. ಅವರ ಕಾಲದಲ್ಲಿ ಪೂರೈಸಲು ಆಗಲಿಲ್ಲ. ಅವರ ಶಿಷ್ಯರಾಗಿ ನಾನು ಹಾಗೂ ಪ್ರಭಾಕರ್ ರೆಡ್ಡಿ ಈ ಕಾಲೇಜು ಸ್ಥಾಪಿಸಿದೆವು ಎಂದು ಹೇಳಿದರು.

ಪ್ರಾಂಶುಪಾಲ ಪ್ರೊ.ಎಸ್.ಎನ್.ಚಂದ್ರಶೇಖರ್ ಮಾತನಾಡಿ, 'ವಿದ್ಯಾರ್ಥಿಗಳ ಸತತ ಶ್ರಮದಿಂದ ಈ ಸಾಧನೆ ಸಾಧ್ಯವಾಗಿದೆ. ಉಪನ್ಯಾಸಕರು ತ್ಯಾಗ, ಪ್ರೇರಣೆ ಮೂಲಕ ಪ್ರೋತ್ಸಾಹಿಸಿದ್ದಾರೆ. ತಮ್ಮ ಮೇಲೆ ತಮಗೆ ನಂಬಿಕೆ ಇರಲಿ. ಎಂಜಿನಿಯರಿಂಗ್ ಎಂಬುದು ಬರೀ ಕೋರ್ಸ್ ಅಲ್ಲ; ಅದೊಂದು ಕೌಶಲ' ಎಂದರು.

ಪದವೀಧರ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಜಿಲ್ಲಾಧಿಕಾರಿ ಹಾಗೂ ಗಣ್ಯರು ಪದವಿ ಪ್ರದಾನ ಮಾಡಿದರು.

ಕಾಲೇಜಿನ ಪ್ರೊ.ಎಂ.ಈಶ್ವರ್, ಎಸ್.ಅಪ್ರಮೇಯನ್, ಆರ್.ಶಿವರಾಜ್, ಜಿ.ಕೆ.ವೆಂಕಟೇಶ್, ದೀಪಿಕಾ ಲೋಕೇಶ್, ಆರ್.ವಾಸುದೇವ, ಪ್ರೊ.ಕೆ.ಎ.ನಾರಾಯಣಸ್ವಾಮಿ, ಪ್ರೊ.ವೇದಾವತಿ, ಉಪನ್ಯಾಸಕರು, ಪೋಷಕರು ಹಾಗೂ ವಿದ್ಯಾರ್ಥಿಗಳು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260509-18-197751823

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.