ಕೋಲಾರ: ಜಂಟಿ ಸರ್ವೆ ನಕ್ಷೆಗೆ ತಹಶೀಲ್ದಾರ್ ಸಹಿ ಹಾಕಿ ರೈತರು ಮತ್ತು ಅರಣ್ಯ ಇಲಾಖೆಗೆ ನೀಡಬೇಕು ಎಂದು ಒತ್ತಾಯಿಸಿ ಭೂ ಸಂತ್ರಸ್ತರ ಹೋರಾಟ ಸಮಿತಿ ನೇತೃತ್ವದಲ್ಲಿ ರೈತರು ಶುಕ್ರವಾರ ನಗರದ ತಾಲ್ಲೂಕು ಕಚೇರಿಯ ತಹಶೀಲ್ದಾರ್ ಕೊಠಡಿ ಮುಂದೆ ಪ್ರತಿಭಟನೆ ನಡೆಸಿದರು.

ಭೂ ಸಂತ್ರಸ್ತರ ಹೋರಾಟ ಸಮಿತಿ ಸಂಚಾಲಕ ಆರ್.ಶ್ರೀನಿವಾಸನ್ ಮಾತನಾಡಿ, ‘ಕಂದಾಯ ಇಲಾಖೆಯ ದಾಖಲೆಗಳು ಸರಿಯಾಗಿದ್ದರೂ ನಕಲಿ ದಾಖಲೆಗಳನ್ನು ಹೊಂದಿರುವ ಅರಣ್ಯ ಇಲಾಖೆ ನಿರಂತರವಾಗಿ ರೈತರ ಮೇಲೆ ದೌರ್ಜನ್ಯ ನಡೆಸುತ್ತಿದೆ. ಸರ್ಕಾರಿ ದಾಖಲೆಗಳಂತೆ 1941ರ ಸೆಟ್ಲ್ಮೆಂಟ್ ಪ್ರಕಾರ 409 ಎಕರೆ ಜಮೀನು ಈಗಾಗಲೇ ಕಂದಾಯ ಇಲಾಖೆಯ ಹೆಸರಿನಲ್ಲಿದೆ. ಅರಣ್ಯ ಇಲಾಖೆ ನಕಲಿ ದಾಖಲೆಗಳನ್ನು ಇಟ್ಟುಕೊಂಡು ರೈತರ ಜಮೀನನ್ನು ದೌರ್ಜನ್ಯದಿಂದ ನಾಶ ಮಾಡುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಜಂಟಿ ಸರ್ವೆಯ ನಕ್ಷೆಗೆ ಸಹಿ ಮಾಡುವಂತೆ ಸಾಕಷ್ಟು ಬಾರಿ ಪ್ರತಿಭಟನೆ ನಡೆಸಿದರೂ ತಹಶೀಲ್ದಾರ್ ಸಹಿ ಮಾಡಿ ಕೊಡುತ್ತಿಲ್ಲ’ ಎಂದು ಆರೋಪಿಸಿದರು.

ಅರಣ್ಯ ಇಲಾಖೆಯ ದೌರ್ಜನ್ಯ ವಿರುದ್ಧ ರೈತರು ನ್ಯಾಯಾಲಯಕ್ಕೆ ಹೋಗಿದ್ದು, ಅದರಂತೆ ಜಂಟಿ ಸರ್ವೆ ಮಾಡಲು ಆದೇಶವಾಗಿತ್ತು. ಜಿಲ್ಲಾಧಿಕಾರಿ, ಜಿಲ್ಲಾ ಉಸ್ತುವಾರಿ ಸಚಿವರು, ಜನಪ್ರತಿನಿಧಿಗಳು ಜಂಟಿ ಸರ್ವೆ ಮಾಡಿ ರೈತರ ಹಿಡುವಳಿ ಜಮೀನುಗಳು ಯಾವುದು? ಅರಣ್ಯ ಭೂಮಿ ಯಾವುದು ಎಂಬುದನ್ನು ಸ್ಪಷ್ಟವಾಗಿ ನಕ್ಷೆ ತಯಾರಿಸಿ ಎಂಬುದಾಗಿ ತಹಶೀಲ್ದಾರ್ಗೆ ಸೂಚಿಸಿದ್ದರು. ಅದರಂತೆ ತಹಶೀಲ್ದಾರ್, ತಾಲ್ಲೂಕು ಭೂಮಾಪನ ಅಧಿಕಾರಿಗಳು 2025ರ ಆಗಸ್ಟ್ನಲ್ಲಿ ಮರು ಜಂಟಿ ಅಳತೆ ಮಾಡಲು ಕಂದಾಯ ಇಲಾಖೆಯೊಂದಿಗೆ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ರೈತರು ಭಾಗವಹಿಸಲು ಆದೇಶ ಮಾಡಿದ್ದರು ಎಂದರು.

ತಾಲ್ಲೂಕು ಭೂದಾಖಲೆಗಳ ಅಧಿಕಾರಿಗಳು ಕಂದಾಯ ದಾಖಲೆಗಳನ್ನು ಮತ್ತು ಅರಣ್ಯ ಇಲಾಖೆಯ ಸೆಟ್ಲ್ಮೆಂಟ್ 1941ರ ಕಾಪಿಯನ್ನು ಪರಿಶೀಲಿಸಿ ಭೂ ದಾಖಲೆಗಳ ಸಹಾಯಕ ನಿರ್ದೇಶಕರು ನಕ್ಷೆ ತಯಾರಿಸಿ ವರದಿಯನ್ನು ತಹಶೀಲ್ದಾರ್ಗೆ ನೀಡಿದ್ದಾರೆ. ಅದಕ್ಕೆ ಸಹಿ ಹಾಕಿ ಕೊಡಬೇಕಿದೆ ಎಂದು ಹೇಳಿದರು.

ಕೋಲಾರ ತಾಲ್ಲೂಕು ಹುತ್ತೂರು ಹೋಬಳಿ ಶಿಳ್ಳೆಂಗೆರೆ, ಹರಟಿ, ಮಲ್ಲಂಡಹಳ್ಳಿ, ಕೋಟಿಗಾನಹಳ್ಳಿ, ಅಬ್ಬಣಿ ಹಾಗೂ ಹರಳಕುಂಟೆ ಜಮೀನಿನ ಕಂದಾಯ ದಾಖಲೆಗಳನ್ನು ಮತ್ತು ಅರಣ್ಯ ಇಲಾಖೆಯ 1941 ಫಾರೆಸ್ಟ್ ಸೆಟ್ಲ್ಮೆಂಟ್ ಕಾಪಿಯನ್ನು ಪರಿಶೀಲಿಸದೆ ಅಂದಿನ ಭೂ ದಾಖಲೆಗಳ ಸರ್ವೆಯರ್ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳು 100 ವರ್ಷದ ಹಿಂದಿನ ದಾಖಲೆಗಳನ್ನು ಮರೆಮಾಚಿದ್ದಾರೆ. ಈ ಕಂದಾಯ ಇಲಾಖೆಯವರನ್ನು ಯಾಮಾರಿಸುತ್ತಿದ್ದಾರೆ. 1931ರ ನೋಟಿಫಿಕೇಶನ್ ಬಗ್ಗೆ ಮಾತ್ರ ಹೇಳುತ್ತಿದ್ದಾರೆ ಎಂದು ದೂರಿದರು.

ಈ ಸಂದರ್ಭದಲ್ಲಿ ಭೂ ಸಂತ್ರಸ್ತರ ಹೋರಾಟ ಸಮಿತಿಯ ಜಿಲ್ಲಾ ಸಂಚಾಲಕರಾದ ಸಿಪಿಎಂ ಗೋಪಾಲ್, ಹರಟಿ ಪ್ರಕಾಶ್, ಮುಖಂಡರಾದ ಮುಳಬಾಗಿಲು ಅಂಬರೀಶ್, ವೆಂಕಟರವಣಪ್ಪ, ಭಟ್ರಹಳ್ಳಿ ಮಂಜುನಾಥ್, ಅರವಿಂದ್, ನಾರಾಯಣಪ್ಪ, ಸುನಂದಾ, ನಾರಾಯಣಪ್ಪ, ಶಂಕಪ್ಪ, ವೆಂಕಟೇಶ್ ಹಾಗೂ ರೈತರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260516-18-130249802

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.