ಕೋಲಾರ: ಅಮೂಲ್ಯವಾದ ಅರಣ್ಯ ಭೂಮಿಯನ್ನು ಮರು ಒತ್ತುವರಿ ಮಾಡಿಕೊಳ್ಳಲು ರೈತರ ಹೆಸರಲ್ಲಿ ಭೂಮಾಫಿಯಾದವರು ಹುನ್ನಾರ ನಡೆಸಿ ಗೊಂದಲ ಸೃಷ್ಟಿಸುತ್ತಿದ್ದಾರೆ. ಅರಣ್ಯ ಭೂಮಿ ಉಳಿಸಿಕೊಳ್ಳಲು ಇಂಥವರ ವಿರುದ್ಧ ಇಲಾಖೆ ಕಾನೂನು ಹೋರಾಟ ನಡೆಸಲಿದೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ (ಡಿಸಿಎಫ್) ಸರೀನಾ ಸಿಕ್ಕಲಿಗಾರ ಎಚ್ಚರಿಕೆ ನೀಡಿದರು.

ನಗರ ಹೊರವಲಯದ ಅರಣ್ಯ ಇಲಾಖೆ ಕಚೇರಿಯಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಅಬ್ಬಣಿ ಕಿರು ಅರಣ್ಯ ಪ್ರದೇಶ ಹಾಗೂ ಹರಳಕುಂಟೆ ರಾಜ್ಯ ಅರಣ್ಯ ಸಂಬಂಧ ಯಾವುದೇ ಗೊಂದಲ ಇಲ್ಲ. ಅರಣ್ಯ ಇಲಾಖೆಯು ಕಂದಾಯ ಭೂಮಿಯನ್ನು ಎಲ್ಲೂ ಒತ್ತುವರಿ ಮಾಡಿಲ್ಲ. ಅರಣ್ಯ ಭೂಮಿ ಕಬಳಿಸಲು ಕೆಲವರು ಎರಡು ಮ್ಯಾಪ್ ಹಿಡಿದುಕೊಂಡು ಗೊಂದಲ ಸೃಷ್ಟಿಸುತ್ತಿದ್ದಾರೆ. ತಹಶೀಲ್ದಾರ್ ಕೂಡ ಗೊಂದಲ ಮೂಡಿಸುತ್ತಿದ್ದಾರೆ. ಕಾನೂನು ಕೈಗೆತ್ತಿಕೊಂಡರೆ ಯಾರಿಗೇ ಆಗಲಿ ಶಿಕ್ಷೆ ಆಗುತ್ತದೆ, ಅಧಿಕಾರಿಗಳು ತಪ್ಪೆಸಗಿದರೆ ಜೈಲಿಗೆ ಹೋಗುತ್ತಾರೆ’ ಎಂದರು.

ಸರ್ಕಾರದ 1931ರ ನೋಟಿಫಿಕೇಷನ್ ಪ್ರಕಾರ ತಾಲ್ಲೂಕಿನ ಅಬ್ಬಣಿ ಕಿರು ಅರಣ್ಯ ಪ್ರದೇಶ 619 ಎಕರೆ ಇದ್ದು, 200 ಎಕರೆ ಒತ್ತುವರಿ ಆಗಿದೆ. ಅಗತ್ಯವಿಲ್ಲದಿದ್ದರೂ ಜನರಲ್ಲಿನ ಗೊಂದಲ ನಿವಾರಿಸಲು ಜಂಟಿ ಸರ್ವೆ ಮಾಡಲಾಗಿದೆ. ಹರಳಕುಂಟೆ ರಾಜ್ಯ ಅರಣ್ಯ 409 ಎಕರೆ ಪ್ರದೇಶವಿದ್ದು, ಎಲ್ಲವೂ ಅರಣ್ಯ ಇಲಾಖೆಯ ವಶದಲ್ಲಿದೆ. ಇದಕ್ಕೂ ಜಂಟಿ ಸರ್ವೆ ಅಗತ್ಯವಿಲ್ಲ. ಕಿರು ಅರಣ್ಯಕ್ಕೆ ಯಾವುದೇ ಸೆಟ್ಲ್ಮೆಂಟ್ ಪ್ರಕ್ರಿಯೆ ಬೇಕಿಲ್ಲ; ರಾಜ್ಯ ಅರಣ್ಯಕ್ಕೆ ಸೆಟ್ಲ್ಮೆಂಟ್ ಪ್ರಕ್ರಿಯೆ ನಡೆಯಬೇಕಿದೆ. ಸರ್ಕಾರದಿಂದ ಡಿನೋಟಿಫೈ ಆಗದೆ ಯಾವುದೇ ಅರಣ್ಯವನ್ನು ಕೈಬಿಡಲು ಸಾಧ್ಯವಿಲ್ಲ ಎಂದು ವಿವರಿಸಿದರು.

ಅಬ್ಬಣಿ ಕಿರು ಅರಣ್ಯ ಪ್ರದೇಶದಲ್ಲಿನ ಒತ್ತುವರಿ ಸಂಬಂಧ ಗೊಂದಲ ನಿವಾರಣೆ ಮಾಡಲು 2024ರಲ್ಲಿ ಕಂದಾಯ ಇಲಾಖೆ ಜೊತೆ ಸೇರಿಕೊಂಡು ಅರಣ್ಯ ಇಲಾಖೆಯು ಜಂಟಿ ಸರ್ವೆ ನಡೆಸಿತ್ತು. ಒತ್ತುವರಿ ಆಗಿರುವ ಬಗ್ಗೆ ನಮಗೆ ನಕ್ಷೆ ಸಲ್ಲಿಸಿದ್ದರು. ಒತ್ತುವರಿ ತೆರವಿಗೆ ಮುನ್ನ ಕರ್ನಾಟಕ ಅರಣ್ಯ ಕಾಯ್ದೆ 1963ರ ಕಾಯ್ದೆ ಅನ್ವಯ 64 (ಎ) ಪ್ರಕಾರ ಪ್ರೋಸಿಡಿಂಗ್ಸ್ ನಡೆಸಲಾಗಿತ್ತು. ಒತ್ತುವರಿದಾರರಿಗೆ ನೋಟಿಸ್ ನೀಡಿ, ದಾಖಲೆ ಪರಿಶೀಲನೆ ಮಾಡಿ ಒತ್ತುವರಿ ತೆರವಿಗೆ ಆದೇಶ ಮಾಡಿದ್ದೆವು. ಅರಣ್ಯ ಸಂರಕ್ಷಣಾಧಿಕಾರಿ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಲು ಒಂದು ವರ್ಷ ಕಾಲಾವಕಾಶ ನೀಡಲಾಗಿತ್ತು. ಯಾರೂ ಮೇಲ್ಮನವಿ ಸಲ್ಲಿಸಲಿಲ್ಲ. ಕೆಲವರು ನ್ಯಾಯಾಲಯಕ್ಕೆ ಹೋದರು. ಆ ಪ್ರಕರಣಗಳ ವಿಚಾರ ನಡೆಯುತ್ತಿದೆ. ಅದಕ್ಕೆ ನಾವು ಆಕ್ಷೇಪಣೆ ಸಲ್ಲಿಸಿದ್ದೇವೆ. 199 ಎಕರೆ ಒತ್ತುವರಿ ಆಗಿದ್ದು, ಆ ಪೈಕಿ 110 ಎಕರೆ ಪೋಡಿಯಾಗಿದೆ, ಇನ್ನು 70 ಎಕರೆ ಪೋಡಿ ಆಗದೆ ಅಕ್ರಮವಾಗಿ ವ್ಯವಸಾಯ ಮಾಡುತ್ತಿದ್ದಾರೆ ಎಂಬುದಾಗಿ ಎಡಿಎಲ್ಆರ್ ವರದಿ ನೀಡಿದ್ದಾರೆ. ಈ ಎಲ್ಲಾ ದಾಖಲಾತಿಗಳನ್ನು ಪರಿಗಣಿಸಿ 2025ರಲ್ಲಿ ಒತ್ತುವರಿ ತೆರವುಗೊಳಿಸಿದ್ದೆವು ಎಂದರು.

ಅಬ್ಬಣಿ ಕಿರು ಅರಣ್ಯದಲ್ಲಿ ಜಂಟಿ ಸರ್ವೆ ನಡೆಸಿದ್ದರೂ ಯಾವ ಒತ್ತಡಕ್ಕೆ ಒಳಗಾಗಿ ಜಂಟಿ ಸರ್ವೆ ಮಾಡಿಲ್ಲವೆಂದು ಕೆಡಿಪಿ ಸಭೆಯಲ್ಲಿ ಎಡಿಎಲ್ಆರ್ ಹೇಳಿದ್ದರೋ ಗೊತ್ತಿಲ್ಲ. ಮತ್ತೆ ಪತ್ರ ವ್ಯವಹಾರ ನಡೆದು ಅರಣ್ಯ ಇಲಾಖೆ ಹಾಗೂ ಕಂದಾಯ ಇಲಾಖೆ ಸೇರಿ ಜಂಟಿ ಸರ್ವೆ ನಡೆಸಿದವು. ಆದರೆ, ಅದರ ಜಂಟಿ ಸರ್ವೆ ನಕ್ಷೆ ಮತ್ತು ವರದಿಯನ್ನು ಕಂದಾಯ ಇಲಾಖೆ ಹಾಗೂ ಮೋಜಣಿ ಇಲಾಖೆ ನಮಗೆ ಕೊಡಲೇ ಇಲ್ಲ. ನಾವು ಸತತವಾಗಿ ಪತ್ರ ಬರೆದರೂ ಪ್ರಯೋಜನವಾಗಿಲ್ಲ. ಇಲ್ಲಿ ಸುಮಾರು 200 ಎಕರೆ ಪ್ರದೇಶ ಒತ್ತುವರಿ ಆಗಿದೆ ಎಂದು ತಿಳಿಸಿದರು.

ನಾವು ಯಾವುದೇ ದಾಖಲಾತಿಗಳನ್ನು ಮರೆ ಮಾಚುತ್ತಿಲ್ಲ. ಕೆಲವರು ಅರಣ್ಯ ಇಲಾಖೆ ಮುಖ್ಯ ಕಚೇರಿಗೂ ಹೋಗಿ ದಾಖಲಾತಿ ಪರಿಶೀಲಿಸಿದ್ದಾರೆ. ಮೇಲಧಿಕಾರಿಗಳು ಕೂಡ ಇದೇ ಮಾಹಿತಿ ನೀಡಿ ಕಳಿಸಿದ್ದಾರೆ ಎಂದರು.

ಜೆಸಿಬಿಗೆ ಹೆಚ್ಚು ಬಿಲ್ ಹಾಕಿ ಅರಣ್ಯ ಇಲಾಖೆಯವರು ಅಕ್ರಮ ನಡೆಸಿದ್ದಾರೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿ, ‘ನಾವು ಕಾರ್ಯಾಚರಣೆ ನಡೆಸಬೇಕಾದರೆ ಎಲ್ಲವನ್ನೂ ದಾಖಲಾತಿ ಮಾಡುತ್ತೇವೆ. ಜೆಸಿಬಿಗೆ ಸರ್ಕಾರ ನಿಗದಿಪಡಿಸಿದ ಪ್ರಕಾರವೇ ಬಿಲ್ ಮಾಡಲಾಗಿದೆ. ಎಲ್ಲವೂ ಪಾರದರ್ಶಕವಾಗಿದ್ದು, ಯಾವುದೇ ರೀತಿಯ ಅಕ್ರಮ ನಡೆದಿಲ್ಲ. ತಾವು ಮಾಡಿದ ತಪ್ಪು ಮುಚ್ಚಿ ಹಾಕಲು ಕೆಲವರು ಜನರಲ್ಲಿ ಗೊಂದಲ ಮೂಡಿಸಲು ಆರೋಪ ಮಾಡುತ್ತಿದ್ದಾರೆ’ ಎಂದು ಹೇಳಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260522-18-1158191172

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.