ಕೋಲಾರ: ‘ಜಿಲ್ಲಾ ಪೊಲೀಸ್ ವ್ಯಾಪ್ತಿಯ ವಿವಿಧೆಡೆ ನಡೆಸಿದ್ದ ದಾಳಿಯಲ್ಲಿ 14 ಪ್ರಕರಣಗಳಲ್ಲಿ 43 ಕೆ.ಜಿ 280 ಗ್ರಾಂ ಗಾಂಜಾ ಹಾಗೂ 36 ಗ್ರಾಂ ಎಂಡಿಎಂಎ ಮಾದಕ ವಸ್ತು ವಶಪಡಿಸಿಕೊಂಡಿದ್ದು, ವಿಲೇವಾರಿಗೆ ಸಿದ್ಧತೆ ಮಾಡಿಕೊಂಡಿದ್ದೇವೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ವ್ಯಾಪ್ತಿಯ ಚೊಕ್ಕಹಳ್ಳಿ ಸಮೀಪದ ಸೆಂಚೂರಿ ಘಟಕದಲ್ಲಿ ನಾಶಪಡಿಸಲಾಗುವುದು’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ. ತಿಳಿಸಿದರು.

ಕೋಲಾರ ಸಂಚಾರ ಪೊಲೀಸ್ ಠಾಣೆ ಬಳಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಅಂದಾಜು ₹ 60.06 ಮೌಲ್ಯದ ಗಾಂಜಾ, ಮಾದಕ ಪದಾರ್ಥಗಳನ್ನು ಜಪ್ತಿ ಮಾಡಿದ್ದೇವೆ. 13 ಪ್ರಕರಣಗಳು ಇದೇ ವರ್ಷ ಆಗಿದ್ದು, ಒಂದು ಪ್ರಕರಣ ಮಾತ್ರ ಕಳೆದ ವರ್ಷ ಆಗಿತ್ತು. ಮಾದಕ ವಸ್ತು ವಸ್ತುಗಳು ಮತ್ತು ಅಮಲು ಪದಾರ್ಥಗಳ ನಿರೋಧಕ ಕಾಯ್ದೆ–1985ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದು, ಈಗಾಗಲೇ ಅರೋಪಿಗಳನ್ನು ದಸ್ತಗಿರಿ ಮಾಡಲಾಗಿದೆ’ ಎಂದರು.

‘ಈ ಅಮಲು ಪದಾರ್ಥಗಳನ್ನು ಪೊಲೀಸ್ ಪ್ರಧಾನ ಕಚೇರಿಯ ಆದೇಶದಂತೆ ಮತ್ತು ಪರಿಸರ ಇಲಾಖೆಯ ಅನುಮತಿಯೊಂದಿಗೆ ಪರಿಸರಕ್ಕೆ ಧಕ್ಕೆಯಾಗದಂತೆ ಮಾದಕ ವಸ್ತುಗಳ ವಿಲೇವಾರಿ ಸಮಿತಿಯ ಸಮಕ್ಷಮದಲ್ಲಿ ನಾಶ ಪಡೆಸಲಾಗುವುದು. ಈ ವರ್ಷದಲ್ಲಿ ನಡೆಯುತ್ತಿರುವ ಎರಡನೇ ವಿಲೇವಾರಿ ಇದಾಗಿದೆ’ ಎಂದು ಹೇಳಿದರು.

‘ಸುಮಾರು ₹ 60 ಲಕ್ಷ ಮೊತ್ತದ 806 ಗ್ರಾಂ ಎಂಡಿಎಂಎ ಮಾದಕ ವಸ್ತು ಜಪ್ತಿ ಮಾಡಿದ್ದು, ಅದನ್ನು ಈ ಪ್ರಕರಣದಲ್ಲಿ ಸೇರಿಸಿಲ್ಲ. ಅದು ದೊಡ್ಡ ಪ್ರಮಾಣದ ಜಪ್ತಿ ಆಗಿರುವುದರಿಂದ ರಾಜ್ಯಮಟ್ಟದಲ್ಲಿ ವಿಲೇವಾರಿ ಮಾಡಲಾಗುತ್ತದೆ. ಇನ್ನುಳಿದ ಮಾದಕ ವಸ್ತುಗಳನ್ನು ಪೊಲೀಸ್ ವಶದಲ್ಲಿ ಇಟ್ಟುಕೊಳ್ಳದೆ ಕಾಲಕಾಲಕ್ಕೆ ವಿಲೇವಾರಿ ಮಾಡುತ್ತಿದ್ದೇವೆ’ ಎಂದು ಮಾಹಿತಿ ನೀಡಿದರು.

‘806 ಗ್ರಾಂ ಎಂಡಿಎಂಎ ಮಾದಕ ವಸ್ತು ಜಪ್ತಿ ಪ್ರಕರಣದಲ್ಲಿ ಅಂತರರಾಜ್ಯ ಕಳ್ಳರು ಜೈಲಿನಲ್ಲಿ ಇದ್ದು, ಅವರಿಗೆ ಜಾಮೀನು ಸಿಕ್ಕಿಲ್ಲ. ಅವರ ಮೂಲ, ಸಂಪರ್ಕ ಪತ್ತೆ ಹಚ್ಚಲು ಬೆನ್ನು ಹತ್ತಿದ್ದು, ಶೀಘ್ರದಲ್ಲೇ ಮಾಹಿತಿ ನೀಡುತ್ತೇವೆ. ಹೆದ್ದಾರಿಗಳಲ್ಲಿ ಹೆಚ್ಚಾಗಿ ಮಾದಕ ವಸ್ತುಗಳ ಪ್ರಕರಣ ಕಂಡುಬರುತ್ತಿವೆ’ ಎಂದು ತಿಳಿಸಿದರು.

‘ಮಾದಕ ವಸ್ತುಗಳ ವಿರುದ್ಧದ ನಮ್ಮ ಹೋರಾಟದಲ್ಲಿ ಸಾರ್ವಜನಿಕರು ಕೈಜೋಡಿಸಬೇಕು. ಪ್ರಕರಣ ದಾಖಲಿಸುವುದಷ್ಟೆ ಅಲ್ಲದೇ; ಶಾಲಾ ಕಾಲೇಜುಗಳಿಗೆ ಹೋಗಿ ಅರಿವು ಮೂಡಿಸುತ್ತಿದ್ದೇವೆ. ಅದರ ಫಲಿತಾಂಶ ನಮಗೆ ಆಚೆ ಕಾಣುತ್ತಿದೆ. ತಮ್ಮ ಮಕ್ಕಳಲ್ಲಿ ಆಗಿರುವ ಬದಲಾವಣೆಯನ್ನು ಪೋಷಕರು ಹೇಳಿಕೊಳ್ಳುತ್ತಿದ್ದಾರೆ’ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜಗದೀಶ್, ಕೋಲಾರ ವಿಭಾಗ ಡಿವೈಎಸ್ಪಿ ಎಂ.ಎಚ್.ನಾಗ್ತೆ, ಮುಳಬಾಗಿಲು ವಿಭಾಗ ಡಿವೈಎಸ್ಪಿ ನಂದಕುಮಾರ್ ಇದ್ದರು.

ಜಿಲ್ಲೆ ವ್ಯಾಪ್ತಿಯಲ್ಲಿ 14 ಪ್ರಕರಣಗಳಲ್ಲಿ ವಶಕ್ಕೆ ಪಡೆದಿದ್ದ ಮಾದಕ ವಸ್ತುಗಳು 36 ಗ್ರಾಂ ಎಂಡಿಎಂಎ ಅಮಲು ಪದಾರ್ಥ ಕೂಡ ನಾಶ ₹ 60 ಲಕ್ಷ ಮೊತ್ತದ 806 ಗ್ರಾಂ ಎಂಡಿಎಂಎ ಮಾದಕ ವಸ್ತು ರಾಜ್ಯಮಟ್ಟದಲ್ಲಿ ವಿಲೇವಾರಿ

ಮಾದಕ ವಸ್ತುಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದ್ದೇವೆ. ನಿರಂತರವಾಗಿ ನಿಗಾ ಇಟ್ಟು ಕ್ರಮ ವಹಿಸುತ್ತಿದ್ದೇವೆ. ಈ ನಿಟ್ಟಿನಲ್ಲಿ ನಮಗೆ ಸಾರ್ವಜನಿಕರ ಸಹಕಾರ ಕೂಡ ಅಗತ್ಯ

- ನಿಖಿಲ್ ಬಿ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.