ಕೋಲಾರ: ರಸ್ತೆ ಬದಿಯಲ್ಲಿ ಪದೇಪದೇ ಕಸ ಎಸೆಯುತ್ತಿರುವ ಕಾರಣ ಬೇಸತ್ತಿರುವ ನಗರದ ಪಾಲಸಂದ್ರ ಬಡಾವಣೆ ಮುಖ್ಯರಸ್ತೆಯ ನಾಗರಿಕರು ಆ ಜಾಗಕ್ಕೆ ಮಹನೀಯರ ಫೋಟೊಗಳನ್ನು ನೇತು ಹಾಕಿದ್ದಾರೆ.

ಸಾಮಾನ್ಯವಾಗಿ ದೇವರ ಫೋಟೊಗಳನ್ನು ಇಟ್ಟು ಕಸ ಹಾಕುವುದನ್ನು ತಪ್ಪಿಸಲು ಪ್ರಯತ್ನಿಸುವುದನ್ನು ವಿವಿಧೆಡೆ ಕಾಣಬಹುದು. ಆದರೆ, ಈ ಬಡಾವಣೆಯಲ್ಲಿನ ನಾಗರಿಕರು ಹೊಸ ಪ್ರಯೋಗಕ್ಕೆ ಮುಂದಾಗಿದ್ದಾರೆ.

ಹಿಂದೆ ಜಿಲ್ಲಾಧಿಕಾರಿಯಾಗಿದ್ದ ದಿವಂಗತ ಡಿ.ಕೆ.ರವಿ ಹಾಗೂ ಆದಿಚುಂಚನಗಿರಿ ಸಂಸ್ಥಾನ ಮಠದ ದಿವಂಗತ ಬಾಲಗಂಗಾಧರನಾಥ ಸ್ವಾಮೀಜಿ ಫೋಟೊ ಮೊರೆ ಹೋಗಿದ್ದಾರೆ. ಕಸ ಎಸದಿರುವ ಜಾಗದಲ್ಲಿ ಇವರಿಬ್ಬರ ಫೋಟೊಗಳನ್ನು ಇಟ್ಟಿದ್ದು, ಕಸದ ಸಮಸ್ಯೆಗೆ ಮುಕ್ತಿ ಕಂಡುಕೊಳ್ಳಲು ಪ್ರಯತ್ನಿಸಿದ್ದಾರೆ. ಕೆಲ ದಿನಗಳಿಂದ ಕಸ ಎಸೆಯುವವರ ಸಂಖ್ಯೆಯೂ ತಗ್ಗಿದಂತೆ ಕಾಣುತ್ತಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260327-18-150295125

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.