ಕೋಲಾರ: ಆರೋಗ್ಯ ಇಲಾಖೆಯ ಅಧಿಕಾರಿಗಳು ಮತ್ತು ನೌಕರರ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಮಾರ್ಚ್ 11ರಿಂದ 15ರ ವರೆಗೆ ಕರ್ತವ್ಯಕ್ಕೆ ಗೈರಾಗುವ ಮೂಲಕ ಹಾಗೂ ಮಾರ್ಚ್ 16 ರಿಂದ ಅನಿರ್ದಿಷ್ಟಾವಧಿ ಮುಷ್ಕರ ಹಮ್ಮಿಕೊಳ್ಳಲಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕಿಯ ಶಿಕ್ಷಣ ಇಲಾಖಾ ನೌಕರರ ಸಂಘದ ಜಿಲ್ಲಾಧ್ಯಕ್ಷ ಎಸ್.ನಂದೀಶ್ ಕುಮಾರ್ ಹೇಳಿದರು.

ನಗರದ ಪತ್ರಕರ್ತರ ಭವನದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಈ ಅವಧಿಯಲ್ಲಿ ತುರ್ತು ಸೇವೆಗಳು ಹೊರತುಪಡಿಸಿ, ಒಪಿಡಿ ಸೇರಿದಂತೆ ಇತರೆ ಸೇವೆಗಳು ಇರುವುದಿಲ್ಲ. ಹೀಗಾಗಿ, ಸಾರ್ವಜನಿಕರು ಸಹಕರಿಸಬೇಕು’ ಎಂದು ಕೋರಿದರು.

ಜಿಲ್ಲಾಸ್ಪತ್ರೆ, ತಾಲ್ಲೂಕು ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯರು, ಅಧಿಕಾರಿ ನೌಕರರು ಕಪ್ಪು ಪಟ್ಟಿ ಧರಿಸಿ ತುರ್ತು ಸೇವೆಗಳನ್ನು ಮಾತ್ರ ನಿರ್ವಹಿಸಲಾಗುವುದು ಎಂದರು.

ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ ರಾಜ್ಯದಾದ್ಯಂತ ಸಭೆಗಳನ್ನು ನಡೆಸಿಕೊಂಡು ಬರಲಾಗಿದೆ. ಇಲಾಖೆಯ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ. ಜತೆಗೆ ವೃಂದ ಸಂಘಗಳ ಮೂಲಕ ಇಲಾಖೆಯ ಸಚಿವರಿಗೆ, ಸರ್ಕಾರದ ಪ್ರಮುಖರ ಗಮನಕ್ಕೂ ತರಲಾಗಿದೆ. ಈವರೆಗೆ ಸಮಸ್ಯೆಗೆ ಯಾರೂ ಸ್ಪಂದಿಸಿಲ್ಲ ಎಂದು ದೂರಿದರು.

ಸರ್ಕಾರಿ ಆಸ್ಪತ್ರೆಗಳಿಗೆ ಸಮರ್ಪಕವಾಗಿ ಔಷಧ ಸರಬರಾಜು ಆಗದೆ ಇರುವುದರಿಂದ ರೋಗಿಗಳಿಗೆ ಚಿಕಿತ್ಸೆ ಕಲ್ಪಿಸಲಾಗುತ್ತಿಲ್ಲ. ಮೂರು ವರ್ಷಗಳಿಗೊಮ್ಮೆ ನೇಮಕಾತಿ ತಿದ್ದುಪಡಿ ಮಾಡುತ್ತಿಲ್ಲ, ಮುಂಬಡ್ತಿ ನೀಡಲು ಜೇಷ್ಠತಾ ಪಟ್ಟಿ ತಯಾರಿಸಿಲ್ಲ, ವೈದ್ಯರು ಸೇವೆ ಮಾಡುತ್ತಲೇ ಉನ್ನತ ವ್ಯಾಸಂಗಕ್ಕೆ ಅವಕಾಶ ಇದ್ದರೂ ಇಲಾಖೆಯಿಂದ ನಿಬಂಧ ಹೇರಲಾಗಿದೆ ಎಂದು ಹೇಳಿದರು.

ವೈದ್ಯಕಿಯ ಶಿಕ್ಷಣ ಪಡೆಯುವುದು ಸುಲಭದ ವಿಚಾರವಲ್ಲ. ಪಿಯುಸಿ ಮುಗಿಸಿ ವೈದ್ಯಕಿಯ ವ್ಯಾಸಂಗಕ್ಕೆ ಸೇರಬೇಕಾದರೆ ಕೋಟಿಗಟ್ಟಲೇ ವೆಚ್ಚ ಮಾಡಬೇಕು. ಆದರೂ ಸರ್ಕಾರಿ ಸೇವೆಗೆ ಬಂದು ಅಲ್ಪ ಸಂಬಳಕ್ಕೆ ವೈದ್ಯರು ಕೆಲಸ ಮಾಡುತಿದ್ದಾರೆ. ಇಲಾಖೆಯಲ್ಲಿನ ಅವೈಜ್ಞಾನಿಕ ವರ್ಗಾವಣೆ ಮಾಡುವುದನ್ನು ಕೈಬಿಡಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಲಾಗುವುದು ಎಂದು ಮಾಹಿತಿ ನೀಡಿದರು.

ಕರ್ನಾಟಕ ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ಕಾರ್ಯದರ್ಶಿ ಡಾ.ಚಂದನ್ ಕುಮಾರ್ ಮಾತನಾಡಿ, ‘ಆರೋಗ್ಯ ತುರ್ತು ಸೇವೆಯಲ್ಲಿ ತೊಡಗಿಸಿಕೊಂಡವರಿಗೆ ನಮಗೆ ರಕ್ಷಣೆಯಿಲ್ಲ, ವ್ಯವಸ್ಥೆಯಲ್ಲಿ ನಮ್ಮನ್ನು ನಡೆಸಿಕೊಳ್ಳುತ್ತಿರುವ ರೀತಿಯನ್ನು ನೋಡಿದರೆ ಬೇಸರವಾಗುತ್ತಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಆಸ್ಪತ್ರೆ, ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಬೇಕು. ಗುತ್ತಿಗೆ ಆಧಾರದ ಮೇರೆಗೆ ನೇಮಕ ಮಾಡಿಕೊಂಡಿರುವ ಸಿಬ್ಬಂದಿಗೆ ಕನಿಷ್ಠ ವೇತನ ನೀಡಬೇಕು, ಸರ್ಕಾರವು 19 ಜಿಲ್ಲಾ ಆಸ್ಪತ್ರೆಗಳನ್ನು ಸ್ವಯತ್ತ ಮಾಡಲು ಹೊರಟಿದೆ. ಇದರಿಂದ ನೌಕರರಿಗೆ ಬಡ್ತಿ ಸಿಗುವುದಿಲ್ಲ, ಇದರಿಂದ 11 ಸಾವಿರ ಮಂದಿ ವಂಚನೆಗೆ ಒಳಗಾಗಲಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವೃಂದ ಮತ್ತು ನೇಮಕಾತಿ ನಿಯಮಗಳನ್ನು 3 ವರ್ಷಕೊಮ್ಮೆ ತಿದ್ದುಪಡಿ ಮಾಡಲು ಸರ್ಕಾರದ ಆದೇಶವಿದ್ದರೂ, 1973ರಿಂದ ನಿಯಮ ಉಲ್ಲಂಘಿಸಿಕೊಂಡು ಬರಲಾಗಿದೆ. ಇದನ್ನು ಶೀಘ್ರವಾಗಿ ತಿದ್ದುಪಡಿ ಮಾಡಬೇಕು. ಹೀಗೆ, ಹಲವು ಬೇಡಿಕೆಗಳ ಈಡೇರಿಕೆಗೆ ಹೋರಾಟ ಅನಿವಾರ್ಯವಾಗಿದೆ, ಇದಕ್ಕೆ ಪ್ರತಿಯೊಬ್ಬರೂ ಸಹಕಾರ ನೀಡಬೇಕು ಎಂದು ಕೋರಿದರು.

ಪತ್ರಿಕಾಗೋಷ್ಠಿಯಲ್ಲಿ ವೈದ್ಯಾಧಿಕಾರಿಗಳ ಸಂಘದ ಜಿಲ್ಲಾ ಅಧ್ಯಕ್ಷ ಡಾ.ಸಿ.ಜಿ.ರಮೇಶ್, ಆರೋಗ್ಯ ಮತ್ತು ವೈದ್ಯಕಿಯ ಶಿಕ್ಷಣ ಇಲಾಖೆ ನೌಕರರ ಸಂಘದ ಕಾರ್ಯದರ್ಶಿ ಆರ್.ರಘುನಾಥ್, ಆರೋಗ್ಯ ಶಿಕ್ಷಣ ನೌಕರರ ಸಂಘದ ಪ್ರೇಮಾ, ಮಂಜುನಾಥ್, ನಾರಾಯಣಪ್ಪ, ವಿಜಯ್ ಕುಮಾರ್, ಶ್ರೀರಾಮ್, ಪ್ರಕಾಶ್, ವಾಣಿ, ಕೋಟ್ರೇಶ್, ಸುದರ್ಶನ್, ಚಂದ್ರಕಲಾ, ರಮೇಶ್, ಕಿರಣ್, ರಣಜೀತ್, ರಾಮಣ್ಣ ಶಿವಪ್ರಕಾಶ್ ಸೌಮ್ಯ, ವಾಣಿಶ್ರೀ ಇದ್ದರು.

ಮಾರ್ಚ್ 11ರಿಂದ 15ರ ವರೆಗೆ ಕರ್ತವ್ಯಕ್ಕೆ ಗೈರು ಮಾರ್ಚ್ 16 ರಿಂದ ಅನಿರ್ದಿಷ್ಟಾವಧಿ ಮುಷ್ಕರ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಆಗ್ರಹ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.