ಕೋಲಾರ: ಮಾಲೂರು ತಾಲ್ಲೂಕಿನ ಅಗಲಕೋಟೆ ಗ್ರಾಮದಲ್ಲಿ ಸರ್ಕಾರಿ ಶಾಲೆಗೆಂದು ದಾನವಾಗಿ ನೀಡಿದ್ದ 50 ಎಕರೆ 26 ಗುಂಟೆ ಜಮೀನನ್ನು ಉಳಿಸುವಂತೆ ಶಾಸಕ ಹಾಗೂ ಮಾಜಿ ಸಚಿವ ಎಸ್.ಸುರೇಶ್ ಕುಮಾರ್ ನೇತೃತ್ವದ ಬಿಜೆಪಿ ನಿಯೋಗ ಜಿಲ್ಲಾಧಿಕಾರಿ ಎಂ.ಆರ್.ರವಿ ಅವರಿಗೆ ಮನವಿ ಸಲ್ಲಿಸಿತು.

ಜಿಲ್ಲಾಡಳಿತ ಭವನದ ಕಚೇರಿಯಲ್ಲಿ ಬುಧವಾರ ಭೇಟಿಯಾದ ಮುಖಂಡರು, ಕಡತಗಳನ್ನು ತೋರಿಸಿ ಮನದಟ್ಟಲು ಮಾಡಲು ಪ್ರಯತ್ನಿಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸುರೇಶ್ ಕುಮಾರ್, ‘1955ರಲ್ಲಿ ಶೈಕ್ಷಣಿಕ ಉದ್ದೇಶಕ್ಕಾಗಿ ಟಿ.ಜಿ.ಶ್ರೀನಿವಾಸುಲು ಎಂಬುವರು 50 ಎಕರೆ 26 ಗುಂಟೆ ಜಮೀನನ್ನು ದಾನ ಮಾಡಿದ್ದರು. ಅದೀಗ ಪರಭಾರೆ ಮಾಡಿಕೊಂಡು, ಕೆಲ ರಿಯಲ್ ಎಸ್ಟೇಟ್ ಶಕ್ತಿಗಳು ಆ ಜಾಗ ಲಪಟಾಯಿಸಲು ಪ್ರಯತ್ನಿಸುತ್ತಿವೆ. ಶಿಕ್ಷಣಾಧಿಕಾರಿಗಳು ಕೂಡ ತಹಶೀಲ್ದಾರ್ಗೆ ಹಲವು ಬಾರಿ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ’ ಎಂದರು.

ಅಧಿವೇಶನದಲ್ಲಿ ವಿಧಾನ ಪರಿಷತ್ ಸದಸ್ಯ ಕೇಶವಪ್ರಸಾದ್ ಕೇಳಿದ ಪ್ರಶ್ನೆಗೆ ಸತ್ಯಕ್ಕೆ ದೂರವಿರುವ ಉತ್ತರ ಸಿಕ್ಕಿದೆ. ಈ ವಿಚಾರವನ್ನೂ ಸಮಿತಿ ಮುಂದೆ ಪ್ರಸ್ತಾಪಿಸುತ್ತೇನೆ. ನ್ಯಾಯಾಲಯದಲ್ಲೂ ಹೋರಾಡಲು ಸಿದ್ಧ ಎಂದು ಹೇಳಿದರು.

ಮಾಲೂರಿನ ಮಾಜಿ ಶಾಸಕ ಕೆ.ಎಸ್.ಮಂಜುನಾಥಗೌಡ ಮಾತನಾಡಿ, ‘ಅಗಲಕೋಟೆ ವಿಚಾರವಾಗಿ ನ್ಯಾಯ ಸಿಗುವವರೆಗೆ ಹೋರಾಟ ಕೈಬಿಡುವ ಪ್ರಶ್ನೆಯೇ ಇಲ್ಲ, ಯಾರೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಏಕೆಂದರೆ ಗ್ರಾಮ ಠಾಣಾವನ್ನು ಒಂದೇ ಕುಟುಂಬದವರು ಸುಮಾರು ಏಳು ಎಕರೆ ಜಮೀನನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ’ ಎಂದರು.

ಗ್ರಾಮದ ನಕ್ಷೆಯಲ್ಲಿ ಬಂಡಿದಾರಿ, ಕೆರೆ ಕುಂಟೆ, ರಾಜಕಾಲುವೆ, ಸ್ಮಶಾನ, ಗುಂಡುತೋಪು ಇವೆ. ಅಷ್ಟಕ್ಕೂ ಸೇರಿ ಕಾಂಪೌಂಡ್ ಹಾಕಿದ್ದಾರೆ. ಈಗಾಗಲೇ ಜಿಲ್ಲಾಧಿಕಾರಿ, ತಹಶೀಲ್ದಾರ್, ಬಿಇಒ ಗಮನಕ್ಕೆ ತಂದಿದ್ದೇನೆ. ಈವರೆಗೆ ಯಾವುದೇ ಕ್ರಮವಾಗಿಲ್ಲ. ಅಧಿಕಾರಿಗಳು ಶಾಮೀಲಾಗದೆ ಇದೆಲ್ಲಾ ನಡೆಯುತ್ತದೆಯೇ ಎಂದು ಪ್ರಶ್ನಿಸಿದರು.

ಸುಮಾರು ₹ 200ರಿಂದ 300 ಕೋಟಿ ಮೌಲ್ಯದ ಅವ್ಯವಹಾರವಿದೆ. ಅಷ್ಟು ಬೆಲೆ ಬಾಳುವ ಜಮೀನು ಇದಾಗಿದೆ. ಬರೀ 50 ಎಕರೆ ಅಲ್ಲ; ಇಲ್ಲಿರುವ 250 ಎಕರೆಯೂ ಸಮಸ್ಯೆಯಾತ್ಮಕವಾಗಿದೆ. ಮಂಜೂರಾಗಿರುವುದೇ ಬೋಗಸ್, ಇನಾಂ ಡಿ.ಸಿ ಆದೇಶವೂ ಬೋಗಸ್ ಎಂದು ಆರೋಪಿಸಿದರು.

ಈ ವಿಚಾರದಲ್ಲಿ ಸದನಕ್ಕೆ ತಪ್ಪು ಮಾಹಿತಿ ನೀಡಿದವರಾರು ಎಂಬುದು ಗೊತ್ತಾಗಬೇಕು. ಕಂದಾಯ ಸಚಿವ ಕೃಷ್ಣಬೈರೇಗೌಡ ಇಂಥ ವಿಚಾರಕ್ಕೆ ಕೈಹಾಕುವವರಲ್ಲ. ಇಲಾಖೆಯಲ್ಲಿ ಸುಧಾರಣೆಗೆ ಪ್ರಯತ್ನಿಸುತ್ತಿದ್ದಾರೆ. ಅಂಥವರ ಕೈಯಲ್ಲಿ ಸುಳ್ಳು ಹೇಳಿಸಿದ್ದಾರೆ ಎಂದು ದೂರಿದರು.

ಪರಿಶೀಲನೆ ನಡೆಸಿ ಕ್ರಮ: ಅಗಲಕೋಟೆ ಜಮೀನು ಪ್ರಕರಣ ಈಗಾಗಲೇ ನಮ್ಮ ಗಮನದಲ್ಲಿದ್ದು, ಪರಿಶೀಲನೆ ನಡೆಸಿ ಕ್ರಮ ವಹಿಸುವುದಾಗಿ ಜಿಲ್ಲಾಧಿಕಾರಿ ಎಂ.ಆರ್.ರವಿ ಭರವಸೆ ನೀಡಿದರು.

ಈ ವೇಳೆ ಬಿಜೆಪಿ ಜಿಲ್ಲಾ ಅಧ್ಯಕ್ಷ ಓಂಶಕ್ತಿ ಚಲಪತಿ, ಮಾಜಿ ಸಂಸದ ಎಸ್.ಮುನಿಸ್ವಾಮಿ, ಪ್ರಧಾನ ಕಾರ್ಯದರ್ಶಿ ಬಿ.ವಿ.ಮಹೇಶ್, ಮುಖಂಡರಾದ ಕೆಂಬೋಡಿ ನಾರಾಯಣಸ್ವಾಮಿ, ರಾಜೇಶ್ ಸಿಂಗ್, ಮಮತಮ್ಮ, ವಕೀಲರು ಹಾಗೂ ಗ್ರಾಮಸ್ಥರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260430-18-1944222046

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.