ಕೋಲಾರ: ಜಿಲ್ಲೆಯಲ್ಲಿರುವ ಆರು ತಾಲ್ಲೂಕುಗಳ 154 ಗ್ರಾಮ ಪಂಚಾಯಿತಿಗಳಿಗೆ ಒಟ್ಟು 2,747 ಸದಸ್ಯ ಸ್ಥಾನ ನಿಗದಿ ಮಾಡಿ ಪಂಚಾಯತ್ ರಾಜ್ ಇಲಾಖೆಯ ನಿರ್ದೇಶಕ ಹಾಗೂ ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗದ ಸದಸ್ಯ ಕಾರ್ಯದರ್ಶಿ ಎನ್.ನೋಮೇಶ್ ಕುಮಾರ್ ಆದೇಶ ಹೊರಡಿಸಿದ್ದಾರೆ.

ಈ ಸಂಬಂಧ ಆಕ್ಷೇಪಣೆ ಸಲ್ಲಿಸಲು ಏಪ್ರಿಲ್ 24ರ ಸಂಜೆ 5 ಗಂಟೆಯವರೆಗೆ ಕಾಲಾವಕಾಶ ನೀಡಲಾಗಿದೆ.

ಆಕ್ಷೇಪಣೆಗಳನ್ನು ಆನ್ಲೈನ್ ಮೂಲಕ ಹಾಗೂ ಖುದ್ದಾಗಿ, ಅಂಚೆಯ ಮೂಲಕ ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ, 3ನೇ ಗೇಟ್, 2ನೇ ಮಹಡಿ, ಕೊಠಡಿ ಸಂಖ್ಯೆ :222/ಎ, ಬಹುಮಹಡಿ ಕಟ್ಟಡ, ಅಂಬೇಡ್ಕರ್ ವೀಧಿ, ಬೆಂಗಳೂರು-560001 ಈ ವಿಳಾಸಕ್ಕೆ ಸಲ್ಲಿಸಬೇಕು. ವೆಬ್ಸೈಟ್ ವಿಳಾಸhttps://rdpr.karnataka.gov.in/rdc/public/ ಈ ವೆಬ್ಸೈಟ್ನ ಮುಖಪುಟದ ಎಡಭಾಗದಲ್ಲಿರುವ ಸಾರ್ವಜನಿಕ ಸಲಹೆಗಳು ಎಂಬ ಶೀರ್ಷಿಕೆಯನ್ನು ಕ್ಲಿಕ್ ಮಾಡಿ ತಮ್ಮ ಆಕ್ಷೇಪಣೆಗಳನ್ನು ಆನ್ಲೈನ್ನಲ್ಲಿ ಸಲ್ಲಿಸಬಹುದು.

ಏ.24 ರೊಳಗೆ ಸಲ್ಲಿಕೆಯಾದ ಆಕ್ಷೇಪಣೆ, ಅಹವಾಲುಗಳ ಪರಿಶೀಲನಾ ಅದಾಲತ್ನ್ನು ಏ. 27 ರಂದು ಬೆಳಿಗ್ಗೆ 11 ರಿಂದ ಮಧ್ಯಾಹ್ನ 1.30 ಗಂಟೆವರೆಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಗೇಟ್ ನಂ.2, 2ನೇ ಮಹಡಿ, ಕೊಠಡಿ ಸಂಖ್ಯೆ 229, 230 ಬಹುಮಹಡಿಗಳ ಕಟ್ಟಡ, ಬೆಂಗಳೂರು-560001 ಇಲ್ಲಿ ನಡೆಸಲಾಗುತ್ತದೆ. ಆಕ್ಷೇಪಣೆ ಮತ್ತು ಅಹವಾಲುಗಳನ್ನು ಸಲ್ಲಿಸಿರುವವರು ಅದಾಲತ್ನಲ್ಲಿ ಭಾಗವಹಿಸಲು ಇಚ್ಛಿಸಿದಲ್ಲಿ ಸರ್ಕಾರದಿಂದ ನೀಡಿರುವ ಭಾವಚಿತ್ರವುಳ್ಳ ಗುರುತಿನ ಚೀಟಿಯ ಮೂಲ ಪ್ರತಿಯನ್ನು ಕಡ್ಡಾಯವಾಗಿ ತರಬೇಕು ಎಂದು ಅವರು ಹೇಳಿದ್ದಾರೆ.

ಸದಸ್ಯರ ಸಂಖ್ಯೆ: ಕೋಲಾರ ತಾಲ್ಲೂಕು: ಹೋಳೂರು ಗ್ರಾಮ ಪಂಚಾಯಿತಿ ಸದಸ್ಯರ ಸಂಖ್ಯೆ 20, ಮುದುವಾಡಿ 15, ಐತರಾಸನಹಳ್ಳಿ 16, ಅಣ್ಣಿಹಳ್ಳಿ 16, ಹರಟಿ 21, ಶಾಪೂರು 19, ವಡಗೂರು 18, ಹುತ್ತೂರು 17, ಅರಹಳ್ಳಿ 22, ಹೊನ್ನೇನಹಳ್ಳಿ 17, ಕೊಂಡರಾಜನಹಳ್ಳಿ 20, ಮಾರ್ಜೇನಹಳ್ಳಿ 17, ದೊಡ್ಡಹಸಾಳ 19, ಬೆಗ್ಲಿಹೊಸಹಳ್ಳಿ 17, ವಕ್ಕಲೇರಿ 21, ಅರಾಭಿಕೊತ್ತನೂರು 20, ಸೂಲೂರು 20, ಮುದುವತ್ತಿ 22, ನರಸಾಪುರ 18, ಬೆಳ್ಳೂರು 20, ಬೆಳಮಾರನಹಳ್ಳಿ 14, ಚೌಡದೇನಹಳ್ಳಿ 11, ಚನ್ನಸಂದ್ರ 19, ಕ್ಯಾಲನೂರು 16, ಅಮ್ಮನಲ್ಲೂರು 17, ಮದ್ದೇರಿ 16, ಸೀತಿ 17, ಶೆಟ್ಟಿಹಳ್ಳಿ 15, ಮದನಹಳ್ಳಿ 18, ತೊಟ್ಲಿ 16, ಸುಗಟೂರು 17, ಉರಿಗಿಲಿ 15, ತೊರದೇವಂಡಹಳ್ಳಿ 17, ಜನ್ನಘಟ್ಟ 12 ಸದಸ್ಯರು.

ಮಾಲೂರು ತಾಲ್ಲೂಕು: ತೋರ್ನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯರ ಸಂಖ್ಯೆ 17, ಅಬ್ಬೇನಹಳ್ಳಿ 17, ಶಿವಾರಪಟ್ಟಣ 16, ಹುಂಗೇನಹಳ್ಳಿ 16, ದೊಡ್ಡಶಿವಾರ 16, ಚಿಕ್ಕಕುಂತೂರು 17, ಕೊಂಡಶೆಟ್ಟಹಳ್ಳಿ 17, ಕೆ.ಜಿ.ಹಳ್ಳಿ 22, ಅರಳೇರಿ 17, ಮಡಿವಾಳ 17, ನೊಸಗೆರೆ 18, ಹುಲಿಮಂಗಲಹೊಸಕೋಟೆ 19, ಸಂತೇಹಳ್ಳಿ 19, ಕುಡಿಯನೂರು 16, ರಾಜೇನಹಳ್ಳಿ 16, ಹುಳದೇನಹಳ್ಳಿ 17, ಟೇಕಲ್ 18, ಬನಹಳ್ಳಿ 16, ನೂಟವೆ 17, ಹಸಾಂಡಹಳ್ಳಿ 20, ಬಾಳಿಗನಹಳ್ಳಿ 18, ಜಯಮಂಗಲ 14, ಲಕ್ಕೂರು 16, ಚಿಕ್ಕತಿರುಪತಿ 29, ಡಿ.ಎನ್.ದೊಡ್ಡಿ 16, ಮಾಸ್ತಿ 24, ತೃಣಸಿ 18, ದಿನ್ನಹಳ್ಳಿ 22 ಸದಸ್ಯರು.

ಬಂಗಾರಪೇಟೆ, ಕೆಜಿಎಫ್, ಮುಳಬಾಗಿಲು ಹಾಗೂ ಶ್ರೀನಿವಾಸಪುರ ತಾಲ್ಲೂಕಿನ ಗ್ರಾಮ ಪಂಚಾಯಿತಿಗಳ ಸದಸ್ಯರ ಸಂಖ್ಯೆಯ ಮಾಹಿತಿ ನಾಳೆಯ ಸಂಚಿಕೆಯಲ್ಲಿ ಪ್ರಕಟಿಸಲಾಗುವುದು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260423-18-1501014286

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.